ETV Bharat / bharat

ಗೋಲಾ ಶೂಟೌಟ್​ ಪ್ರಕರಣ: ಕಾಂಗ್ರೆಸ್‌ ಶಾಸಕಿ ಮಮತಾ ದೇವಿಗೆ 5 ವರ್ಷ ಜೈಲು ಶಿಕ್ಷೆ

author img

By

Published : Dec 13, 2022, 6:13 PM IST

Updated : Dec 13, 2022, 6:27 PM IST

ನ್ಯಾಯಾಲಯವು ಶಾಸಕಿ ಮಮತಾ ದೇವಿ ಸೇರಿದಂತೆ 15 ಮಂದಿಗೆ ಜೈಲು ಶಿಕ್ಷೆ ವಿಧಿಸಿದೆ.

mala-mamta-devi-sentenced-to-five-years-in-gola-firing-case
ಗೋಲಾ ಶೂಟೌಟ್​ ಪ್ರಕರಣ: ಶಾಸಕಿ ಮಮತಾ ದೇವಿಗೆ ಐದು ವರ್ಷ ಜೈಲು

ಜಾರ್ಖಂಡ್: ಗೋಲಾ ಶೂಟೌಟ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಹಜಾರಿಬಾಗ್ ನ್ಯಾಯಾಲಯವು ಇಂದು ಮಹತ್ವದ ತೀರ್ಪು ನೀಡಿದೆ. ರಾಮಗಢ ಕಾಂಗ್ರೆಸ್​ ಶಾಸಕಿ ಮಮತಾ ದೇವಿಗೆ ಐಪಿಸಿ ಸೆಕ್ಷನ್ 307 ರಲ್ಲಿ 5 ವರ್ಷ ಜೈಲು ವಾಸ ಸೇರಿದಂತೆ 15 ಮಂದಿಗೆ ಶಿಕ್ಷೆಯನ್ನು ವಿಧಿಸಿದೆ.

ಹಜಾರಿಬಾಗ್ ನ್ಯಾಯಾಲಯದ ಆವರಣದಲ್ಲಿ ದಿನವಿಡೀ ಭಾರಿ ಗದ್ದಲವೇ ಏರ್ಪಟ್ಟಿತ್ತು. ಶಾಸಕಿಯ ಮಕ್ಕಳು, ಕುಟುಂಬಸ್ಥರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದರು. ಅಲ್ಲದೇ ಅವರೆಲ್ಲರೂ ಶಾಸಕಿಗಾಗಿ ಕಣ್ಣೀರು ಸುರಿಸಿದರು. ನ್ಯಾಯಾಲಯದ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಯಿತು.

ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ನಡೆಯಬೇಕಾಗಿದ್ದ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು. ಬಾರ್ ಅಸೋಸಿಯೇಶನ್ ಹಜಾರಿಬಾಗ್‌ನ ವಕೀಲ ಅಸ್ಮಾನ್ಜ್ ಬಿಸ್ವಾಸ್ ನಿನ್ನೆ ನಿಧನರಾಗಿದ್ದರು. ಹೀಗಾಗಿ ನಿನ್ನೆ ವಿಚಾರಣೆ ನಡೆದಿರಲಿಲ್ಲ.

ಪ್ರಕರಣದ ಹಿನ್ನೆಲೆ: 2016ರ ಆಗಸ್ಟ್‌ನಲ್ಲಿ ಮಮತಾ ದೇವಿ ನೇತೃತ್ವದಲ್ಲಿ ಗ್ರಾಮಸ್ಥರು ಗೋಲಾದಲ್ಲಿರುವ ಇನ್‌ಲ್ಯಾಂಡ್ ಪವರ್ ಲಿಮಿಟೆಡ್ ಮುಚ್ಚುವಂತೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದರು. ಇದು ಗುಂಪು ಹಿಂಸಾಚಾರಕ್ಕೆ ಕಾರಣವಾಗಿತ್ತು. ಪೊಲೀಸರು ಗುಂಪು ಚದುರಿಸಲು ಗುಂಡು ಹಾರಿಸಿದ್ದರು. ಸರ್ಕಲ್ ಆಫೀಸರ್, ಬ್ಲಾಕ್ ಡೆವಲಪ್ಮೆಂಟ್ ಆಫೀಸರ್, ರಾಜ್ರಪ್ಪ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಹಾಗೂ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಆಗಿನ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ ದಿನೇಶ್ ಪ್ರಸಾದ್ ಸೂರಿ ಅವರು ನೀಡಿದ ದೂರಿನ ಮೇರೆಗೆ ರಾಜ್ರಪ್ಪ ಪೊಲೀಸ್ ಠಾಣೆಯಲ್ಲಿ ಮಮತಾದೇವಿ, ಸ್ಥಳೀಯ ಫೈರ್‌ಬ್ರಾಂಡ್ ನಾಯಕ ರಾಜೀವ್ ಜೈಸ್ವಾಲ್ ಹಾಗೂ ಇತರರ ವಿರುದ್ಧ 2016ರಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ: ಬಿಲ್ಕಿಸ್ ಬಾನು ಪ್ರಕರಣ: ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ 'ಸುಪ್ರೀಂ' ನ್ಯಾಯಮೂರ್ತಿ

Last Updated : Dec 13, 2022, 6:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.