ETV Bharat / bharat

ಯುಪಿಸಿಎಲ್ ಖಾತೆಯಿಂದ ಹಣ ವರ್ಗಾವಣೆ ಮಾಡಿ ವಂಚನೆ: ಮದ್ಯದ ವ್ಯಾಪಾರಿ ವಿರುದ್ಧ ಸಿಬಿಐನಿಂದ ದೂರು ದಾಖಲು

author img

By

Published : Feb 11, 2023, 9:56 PM IST

CBI
ಸಿಬಿಐ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಯುಪಿಸಿಎಲ್ ಖಾತೆಯಿಂದ ಹಣ ವರ್ಗಾವಣೆ ವಂಚನೆ ಪ್ರಕರಣ - ಡೆಹ್ರಾಡೂನ್‌ನ ಮದ್ಯದ ವ್ಯಾಪಾರಿಯೊಬ್ಬರು ಬ್ಯಾಂಕ್ ಉದ್ಯೋಗಿಗಳ ಸಹಕಾರ ಪಡೆದು ಯುಪಿಸಿಎಲ್ ಖಾತೆಯಿಂದ 10.13 ಕೋಟಿ ರೂಪಾಯಿ ತನ್ನ ಖಾತೆಗೆ ವರ್ಗಾವಣೆ - ಪಿಎನ್‌ಬಿ ಗುರುಕುಲ ಕಂಗ್ರಿ ಹರಿದ್ವಾರ ಶಾಖೆಯ ವ್ಯವಸ್ಥಾಪಕರಿಂದ ದೂರು - ಸಿಬಿಐ ನಾಲ್ವರ ಆರೋಪಿಗಳ ವಿರುದ್ಧ ದೂರು ದಾಖಲಿಸಿ,ತನಿಖೆ.

ಡೆಹ್ರಾಡೂನ್(ಉತ್ತರಾಖಂಡ):ಡೆಹ್ರಾಡೂನ್‌ ನಗರದ ಮದ್ಯದ ವ್ಯಾಪಾರಿಯೊಬ್ಬರು ಬ್ಯಾಂಕ್ ಉದ್ಯೋಗಿಗಳೊಂದಿಗೆ ಸೇರಿಕೊಂಡು ಪಂಜಾಬ್ ನ್ಯಾಷನಲ್ ಬ್ಯಾಂಕ್ ಯುಪಿಸಿಎಲ್ ಖಾತೆಯಿಂದ 10.13 ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡಿರುವ ಪ್ರಕರಣ ಮುನ್ನೆಲೆಗೆ ಬಂದಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಗುರುಕುಲ ಕಂಗ್ರಿ ಹರಿದ್ವಾರ ಶಾಖೆಯ ಮ್ಯಾನೇಜರ್ ಸಿಬಿಐಗೆ ದೂರು ನೀಡಿದ್ದು, ಸಿಬಿಐ ನಾಲ್ವರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಿಂದ ಈಗಾಗಲೇ ಶಾಖಾ ವ್ಯವಸ್ಥಾಪಕರು 3.65 ಕೋಟಿ ರೂ.ಗಳನ್ನು ವಸೂಲಿ ಮಾಡಿದ್ದು, ಇನ್ನೂ 6.66 ಕೋಟಿ ರೂಪಾಯಿ ಬಡ್ಡಿ ಸಮೇತ ಬಾಕಿ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತನಿಖೆ ಕೈಗೊಂಡ ಸಿಬಿಐ: ಯುಪಿಸಿಎಲ್ ಖಾತೆಯಿಂದ ಮುಖ್ಯ ಖಾತೆ ಅಧಿಕಾರಿ ಖಾತೆಗೆ ಹಣ ಹೋಗುತ್ತದೆ. ಮುಖ್ಯ ಖಾತೆ ಅಧಿಕಾರಿಯ ಈ ಖಾತೆಯನ್ನೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಪಲ್ಟಾನ್ ಬಜಾರ್ ಡೆಹ್ರಾಡೂನ್ ಶಾಖೆಯಲ್ಲಿ ಕಾರ್ಯನಿರ್ವಹಿಸಲಾಗುತ್ತದೆ. ಹಣವೂ ಮುಖ್ಯ ಖಾತೆ ಅಧಿಕಾರಿಯ ಖಾತೆಗೆ ಹೋಗಬೇಕಿತ್ತು. ಆದರೆ. ಬ್ಯಾಂಕ್​ ನೌಕರರ ಸಹಕಾರದಿಂದ ಆರೋಪಿ ಯುಪಿಸಿಎಲ್ ಖಾತೆಯ ಎಲ್ಲ ಹಣವನ್ನು ಮದ್ಯದ ವ್ಯಾಪಾರಿಯೊಬ್ಬರು ತಮ್ಮ ಖಾತೆಗೆ ಟ್ರಾನ್ಸ್​ಫರ್​ ಮಾಡಿಕೊಂಡು ಅಕ್ರಮ ಎಸಗಿದ್ದಾರೆ ಎಂದು ಶಾಖಾ ವ್ಯವಸ್ಥಾಪಕ ವಿಕಾಸ್ ಕುಮಾರ್ ತಿಳಿಸಿದ್ದಾರೆ.

ರಾಮ್ ಸಾಗರ್ ಜೈಸ್ವಾಲ್ ಹಣವನ್ನೂ ಅಕ್ರಮವಾಗಿ ಟ್ರಾನ್ಸ್​ಫರ್ ಮಾಡಿಸಿಕೊಂಡಿರುವ ಆರೋಪಿ. ಈತನು ಡೆಹ್ರಾಡೂನ್‌ನ ನೆಹರು ಕಾಲೋನಿಯ ರೇಸ್‌ಕೋರ್ಸ್‌ನಲ್ಲಿ ದಿ ಲಿಕ್ಕರ್ ಶಾಪ್ ಎಂಬ ಹೆಸರಿನ ಮದ್ಯದ ಅಂಗಡಿ ನಡೆಸುತ್ತಿದ್ದಾನೆ. ಆರೋಪಿ ಚಾಲ್ತಿ ಖಾತೆಯು ಬ್ಯಾಂಕಿನ ಶಾಖೆಯಲ್ಲಿ ಚಾಲನೆಯಲ್ಲಿದೆ. ಮಾರ್ಚ್ 12, 2021 ರಂದು, UPCLನ ಚಾಲ್ತಿ ಖಾತೆಯಿಂದ 10.13 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದನು ಎಂದು ಅವರು ಮಾಹಿತಿ ನೀಡಿದ್ದಾರೆ.

ಬ್ಯಾಂಕ್​ ಉದ್ಯೋಗಿಗಳು ಭಾಗಿ : UPCL ಖಾತೆಯು PNB ಯ BHEL ಶಾಖೆಯಲ್ಲಿದೆ. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಬ್ಯಾಂಕ್ ಉದ್ಯೋಗಿಗಳಾದ ಮೋಹಿತ್ ಕುಮಾರ್ ಮತ್ತು ಮನೀಶ್ ಶರ್ಮಾ ಅವರ ಸಹಾಯದಿಂದ ಈ ಹಣವನ್ನು ಮದ್ಯದ ವ್ಯಾಪಾರಿ ತನ್ನ ಖಾತೆಗೆ ವರ್ಗಾಯಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ.

ಬ್ಯಾಂಕ್​ವೂ ಇಲ್ಲಿಯವರಗೆ 3.65 ಕೋಟಿ ರೂ. ವಸೂಲಿ ಮಾಡಿಕೊಂಡಿದ್ದು, ಇನ್ನೂ ರಾಮ್ ಸಾಗರ್ ಜೈಸ್ವಾಲ್ ಅವರು ಬಡ್ಡಿ ಸಮೇತ 6.66 ಕೋಟಿ ರೂ. ಪಾವತಿಸಬೇಕಾಗಿದೆ ಎಂದು ಶಾಖಾ ವ್ಯವಸ್ಥಾಪಕ ವಿಕಾಸ್ ಕುಮಾರ್ ಅವರ ಹೇಳಿಕೆ ನೀಡಿದ್ದು, ಈ ಆಧಾರದ ಮೇಲೆ ಸಿಬಿಐ ಪ್ರಾಥಮಿಕ ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದೆ.

ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ರಾಮ್ ಸಾಗರ್ ಜೈಸ್ವಾಲ್, ಅನಿತಾ ಜೈಸ್ವಾಲ್, ರಾಜ್ ಕುಮಾರ್ ಜೈಸ್ವಾಲ್ ಮತ್ತು ಕುಲದೀಪ್ ವಿರುದ್ಧ ಪ್ರಕರಣ ದಾಖಲಾಗಿದೆ. ರಾಮ್ ಸಾಗರ್ ಜೈಸ್ವಾಲ್ ಮತ್ತು ಇತರರ ಮನೆ ಮತ್ತು ಕಚೇರಿಗಳ ಮೇಲೂ ಸಿಬಿಐ ದಾಳಿ ನಡೆಸಿದ್ದು, ಅಲ್ಲಿಂದ ಹಲವು ದಾಖಲೆಗಳು ನಾಪತ್ತೆ ಆಗಿವೆ.

ಇದನ್ನೂಓದಿ:ದೆಹಲಿ ಮದ್ಯ ನೀತಿ ಹಗರಣ: ವೈಆರ್​ಎಸ್​ ಕಾಂಗ್ರೆಸ್​ ಪಕ್ಷದ ಸಂಸದನ ಪುತ್ರ ಅರೆಸ್ಟ್​, 10 ದಿನ ಇಡಿ ಕಸ್ಟಡಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.