ETV Bharat / bharat

ಅಗ್ನಿಪಥ ಬೆಂಬಲಿಸಿ ಪ್ರತಿಜ್ಞಾ ವಿಧಿ ಸ್ವೀಕಾರ.. ಯೋಜನೆ ಬೆಂಬಲಿಸಿದ ಮೊದಲ ಗ್ರಾಮ ಲಿಮಧಾರ

author img

By

Published : Jun 27, 2022, 10:56 AM IST

limadara villege supports agnipat s
ಅಗ್ನಿಪಥ ಬೆಂಬಲಿಸಿದ ಮೊದಲ ಗ್ರಾಮ ಲಿಮಧಾರ!

ಲಿಮಧಾರ ಗ್ರಾಮದ ಪರವಾಗಿ ಸೂರತ್​ನಲ್ಲಿ ನಡೆದ ಪುನರ್ಮಿಲನ ಕಾರ್ಯಕ್ರಮದಲ್ಲಿ ಅಗ್ನಿಪಥ ಯೋಜನೆಗೆ ಬೆಂಬಲಿಸುವಂತೆ ಮತ್ತು ಯೋಜನೆಯಡಿ ಸೈನ್ಯಕ್ಕೆ ಸೇರುವಂತೆ ಪ್ರತಿಜ್ಞೆ ಪಡೆಯಲಾಗಿದ್ದು, 500 ಕ್ಕೂ ಹೆಚ್ಚು ಯುವಕ ಯುವತಿಯರು ಅಗ್ನಿಪಥಕ್ಕೆ ಕೈಜೋಡಿಸಿದ್ದಾರೆ.

ಸೂರತ್: ಜುನಾಗಢ ಜಿಲ್ಲೆಯ, ಲಿಮಧಾರ ಗ್ರಾಮದ ವತಿಯಿಂದ ಸೂರತ್​ನಲ್ಲಿ ಪುನರ್ಮಿಲನ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾಯರ್ಕ್ರಮದಲ್ಲಿ ಇಡೀ ಗ್ರಾಮಕ್ಕೆ ಅಗ್ನಿಪಥ ಯೋಜನೆಯಡಿ ಸೈನ್ಯ ಸೇರುವಂತೆ ಮತ್ತು ಅಗ್ನಿಪಥ ಯೋಜನೆ ಬೆಂಬಲಿಸುವಂತೆ ಸೂಚಿಸಿ ಯುವಕ, ಯುವತಿಯರು ಹಾಗೂ ಇಡೀ ಗ್ರಾಮದ ಜನರಿಂದ ಪ್ರತಿಜ್ಞೆ ಪಡೆಯಲಾಗಿದೆ.

ಈ ಮೂಲಕ ಅಗ್ನಿಪಥ್​ ಯೋಜನೆ ಅಡಿಯಲ್ಲಿ ಕಾರ್ಯ ನಿರ್ವಹಿಸಲು ಯುವಕ, ಯುವತಿಯರು ಸಿದ್ದರಾಗಿದ್ದು ಇಡೀ ಭಾರತದಲ್ಲಿ ಅಗ್ನಿಪಥ ಯೋಜನೆ ಬೆಂಬಲಿಸಿದ ಮೊದಲ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಗ್ನಿಪಥ ಯೋಜನೆಗೆ ಯುವಕ ಪ್ರತಿಜ್ಞೆ: ಇದೇ ಜೂನ್​ 14 ರಂದು ಭಾರತ ಸರ್ಕಾರವು ಅಗ್ನಿಪಥ್ ಯೋಜನೆ ಜಾರಿ ಕುರಿತು ಸುದ್ದಿಗೋಷ್ಠಿ ನಡೆಸಿ ಪ್ರಕಟಿಸಿತ್ತು. ನಂತರ ಯೋಜನೆ ವಿರೋದಿಸಿ ದೇಶವ್ಯಾಪ್ತಿ ಹಿಂಸಾತ್ಮಕ ಪ್ರತಿಭಟನೆಗಳಾಗಿದ್ದವು. ಇದೀಗ ಸೂರತ್‌ನ 500 ಕ್ಕೂ ಹೆಚ್ಚು ಯುವಕ, ಯುವತಿಯರು ಈ ಯೋಜನೆಯಡಿ ಭಾರತೀಯ ಸೇನೆಗೆ ಸೇರಲು ಪ್ರತಿಜ್ಞೆ ಮಾಡುವ ಮೂಲಕ ಅಗ್ನಿಪಥ ಯೋಜನೆಗೆ ಕೈ ಜೋಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಲಿಮಧಾರ ಗ್ರಾಮದ ಅಧ್ಯಕ್ಷ ಪ್ರವೀಣ್ ಭಲ್ಲಾ ಮಾತನಾಡಿ, ಅಗ್ನಿಪಥ ಯೋಜನೆಯಡಿ ದೇಶ ಸೇವೆ ಮಾಡಲು ಲಿಮಧಾರ ಗ್ರಾಮ ಮುಂದಿರಬೇಕು ಎಂದು ಸಂಕಲ್ಪ ಮಾಡುತ್ತೇನೆ ಎಂದು ಅಗ್ನಿಪಥ ಯೋಜನೆಯನ್ನು ಸ್ವಾಗತಿಸಿದ್ದಾರೆ.

ಇದನ್ನೂ ಓದಿ:ರಾಜ್​ ಠಾಕ್ರೆ ಜತೆ ಏಕನಾಥ ಶಿಂದೆ ಎರಡೆರಡು ಬಾರಿ ಮಾತುಕತೆ: ತೀವ್ರ ಕುತೂಹಲ ಕೆರಳಿಸಿದ ಬಂಡಾಯ ನಾಯಕನ ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.