ETV Bharat / bharat

ಲಖೀಂಪುರ ಖೇರಿ ಹಿಂಸಾಚಾರದಲ್ಲಿ ಬಂಧಿತನಾಗಿದ್ದ ಕೇಂದ್ರ ಸಚಿವರ ಪುತ್ರ ಆಶಿಶ್​ ಮಿಶ್ರಾಗೆ ಜಾಮೀನು, ಬಿಡುಗಡೆ

author img

By

Published : Feb 15, 2022, 7:21 PM IST

ಉತ್ತರಪ್ರದೇಶದ ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ ಕೇಂದ್ರ ಸಚಿವ ಅಜಯ್​ ಮಿಶ್ರಾ ಅವರ ಪುತ್ರ ಆಶಿಶ್​ ಮಿಶ್ರಾಗೆ ಅಲಹಾಬಾದ್​ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಇಂದು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ನವದೆಹಲಿ: ಉತ್ತರಪ್ರದೇಶದ ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ ಕೇಂದ್ರ ಸಚಿವ ಅಜಯ್​ ಮಿಶ್ರಾ ಅವರ ಪುತ್ರ ಆಶಿಶ್​ ಮಿಶ್ರಾಗೆ ಅಲಹಾಬಾದ್​ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಇಂದು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ಅಲಹಾಬಾದ್​ ಹೈಕೋರ್ಟ್​ನ ಲಖನೌ ಪೀಠದಿಂದ ಜಾಮೀನು ಪಡೆದ ಬಳಿಕ ಆಶಿಶ್ ಮಿಶ್ರಾ ಜೈಲಿನಿಂದ ಬಿಡುಗಡೆಗೊಂಡರು. ಆಶಿಶ್ ಮಿಶ್ರಾ ಅವರ ಪರ ವಕೀಲರು ಜಾಮೀನಿಗಾಗಿ ತಲಾ 3 ಲಕ್ಷ ರೂಪಾಯಿಗಳ 2 ಜಾಮೀನು ಬಾಂಡ್‌ಗಳನ್ನು ಕೋರ್ಟ್​ಗೆ ಸೋಮವಾರ ಸಲ್ಲಿಸಿದ್ದಾರೆ. ಲಖೀಂಪುರ ಖೇರಿಯಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 9 ಅಕ್ಟೋಬರ್ 2021 ರಂದು ಆಶಿಶ್ ಮಿಶ್ರಾ ಅವರನ್ನು ಬಂಧಿಸಲಾಗಿತ್ತು.

ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ 3 ಅಕ್ಟೋಬರ್ 2021 ರಂದು ರೈತರ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದರು. ಇದರಲ್ಲಿ ನಾಲ್ವರು ಕೇಂದ್ರ ಸಚಿವರ ಮಗನಿದ್ದ ಕಾರು ಹರಿದ ಪರಿಣಾಮವಾಗಿ ಸಾವನ್ನಪ್ಪಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಆದರೆ, ಇದನ್ನು ಸಚಿವರ ಪುತ್ರ ನಿರಾಕರಿಸಿದ್ದಾರೆ.

ಓದಿ: ಕಾಶ್ಮೀರದ 80ರ ಹರೆಯದ ಅಜ್ಜಿಯ ಇಂಗ್ಲಿಷ್​ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.