ETV Bharat / bharat

ಕೇರಳ ಮೂಲದ ಮಹಿಳೆಗೆ ನ್ಯೂಜಿಲೆಂಡ್​ನಲ್ಲಿ‌ ಸಚಿವೆಯ ಪಟ್ಟ

author img

By

Published : Nov 2, 2020, 2:45 PM IST

Priyanca Radhakrishnan
ಪ್ರಿಯಾಂಕಾ ರಾಧಾಕೃಷ್ಣನ್

ಕೇರಳ ಮೂಲದ ಪ್ರಿಯಾಂಕಾ ರಾಧಾಕೃಷ್ಣನ್ ನ್ಯೂಜಿಲೆಂಡ್‌ ದೇಶದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತಿರುವನಂತಪುರಂ: ನ್ಯೂಜಿಲೆಂಡ್‌ ಪ್ರಧಾನಿ ಜಸಿಂಡಾ ಅರ್ಡೆರ್ನ್ ತಮ್ಮ ಸಚಿವ ಸಂಪುಟ ರಚನೆ ಮಾಡಿದ್ದು, ಕೇರಳ ಮೂಲದ ಪ್ರಿಯಾಂಕಾ ರಾಧಾಕೃಷ್ಣನ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಪ್ರಿಯಾಂಕಾ ರಾಧಾಕೃಷ್ಣನ್ (41) ನ್ಯೂಜಿಲೆಂಡ್‌ ದೇಶದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಿಯಾಂಕಾ ಅವರು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ್ದರೂ ಇವರ ಅಜ್ಜಿ-ಅಜ್ಜ ಹೀಗೆ ಸಂಬಂಧಿಕರ ಮೂಲ ಕೇರಳದ ಪರಾವೂರು, ಕೊಚ್ಚಿಯಲ್ಲಿದೆ. ಕೇರಳದಲ್ಲಿ ಕೆಲಕಾಲ ಇದ್ದ ಪ್ರಿಯಾಂಕಾ, ಬಳಿಕ ವಿದ್ಯಾಭ್ಯಾಸಕ್ಕಾಗಿ ಸಿಂಗಾಪುರಕ್ಕೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ನ್ಯೂಜಿಲೆಂಡ್​​​ಗೆ ತೆರಳಿದ್ದರು. ಅಲ್ಲಿನ ಕ್ರೈಸ್ಟ್ ಚರ್ಚ್‌ನ ಐಟಿ ಉದ್ಯೋಗಿಯನ್ನು ವಿವಾಹವಾಗಿದ್ದರು. 2014ರಿಂದ ಲೇಬರ್ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಪ್ರಿಯಾಂಕಾ ಆಕ್ಲೆಂಡ್‌ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.