ETV Bharat / bharat

ದೇಹದ ಸ್ಥೂಲಕಾಯ ತಡೆಯುತ್ತದೆ CRTC1 ಜೀನ್- ಸಂಶೋಧನೆ

author img

By

Published : Dec 23, 2022, 8:11 PM IST

The CRTC1 gene suppresses body obesity caused by overeating.
CRTC1 ಜೀನ್ ಅತಿಯಾಗಿ ತಿನ್ನವುದರಿಂದ ದೇಹದಲ್ಲಿ ಬರುವ ಬೊಜ್ಜನ್ನು ತಡಿಯುತ್ತದೆ.

ಪ್ರೊಫೆಸರ್ ಶಿಗೆನೊಬು ಮಾಟ್ಸುಮುರಾ ನೇತೃತ್ವದ ಸಂಶೋಧನಾ ಅಧ್ಯಯನವು ಮೆದುಳಿನಲ್ಲಿ CRTC1 ಜೀನ್ ವಹಿಸುವ ಪಾತ್ರವನ್ನು ಬಹಿರಂಗಪಡಿಸಿದೆ.

ಆರೋಗ್ಯಕ್ಕೆ ಕ್ಯಾಲೋರಿ, ಕೊಬ್ಬು ಮತ್ತು ಅತಿಯಾದ ಸಕ್ಕರೆಯಂತಹ ಆಹಾರಗಳು ಹಾನಿಕಾರವೆಂದು ತಿಳಿದಿದ್ದರೂ ಸಹ ರುಚಿಯ ಕಾರಣಕ್ಕಾಗಿ ಅವುಗಳನ್ನು ಅತಿಯಾಗಿ ಸೇವಿಸುತ್ತಾರೆ. ಹಾಗಾದರೆ ಈ ಒಂದು ಪ್ರವೃತ್ತಿಯನ್ನು ಮೆದುಳಿನಲ್ಲಿ ಯಾವುದು ಪ್ರಚೋದಿಸುತ್ತದೆ ಎಂಬುದರ ಕುರಿತು "ದಿ FASEB ಜರ್ನಲ್" ನಲ್ಲಿ ಪ್ರಕಟವಾದ ಒಂದು ಸಂಶೋಧನೆ ತಿಳಿಸಿದೆ.

CREB-ನಿಯಂತ್ರಿತ ಟ್ರಾನ್ಸ್‌ಕ್ರಿಪ್ಷನ್ ಕೋಆಕ್ಟಿವೇಟರ್ 1 (CRTC1) ಎಂಬ ಜೀನ್ ಮಾನವರಲ್ಲಿ ಸ್ಥೂಲಕಾಯತೆ ತಡೆಯ ಸಂಪರ್ಕ ಹೊಂದಿದೆ ಎಂದು ತಿಳಿದು ಬಂದಿದೆ. ಇದಕ್ಕಾಗಿ ಇಲಿಯನ್ನು ಸಂಶೋಧನೆಗೆ ಒಳಪಡಿಸಿದಾಗ CRTC1ಯ ಕೊರತೆ ಇರುವ ಇಲಿಗಳು ಸ್ಥೂಲಕಾಯತೆಯನ್ನು ಅಭಿವೃದ್ಧಿಪಡಿಸುತ್ತವಂತೆ. ಈ CRTC1 ನ್ನು ಸಾಮಾನ್ಯ ಕಾರ್ಯಾಚರಣೆಗೆ ಒಳಪಡಿಸಿದಾಗ ತಿಳಿದಿದ್ದು ಏನೆಂದರೆ, ಇವು ದೇಹದಲ್ಲಿನ ಬೊಜ್ಜು ತಡೆಯುತ್ತದೆ. ಆದರೆ, CRTC1 ಎಲ್ಲಾ ಮೆದುಳಿನ ನ್ಯೂರಾನ್‌ಗಳಲ್ಲಿ ಕಂಡುಬರುವುದರಿಂದ ಸ್ಥೂಲಕಾಯತೆಯನ್ನು ಕಡಿಮೆ ಮಾಡುವ ನಿಖರವಾದ ನ್ಯೂರಾನ್‌ಗಳು ಯಾವುವು ಮತ್ತು ಅವುಗಳು ಒಳಗೊಂಡಿರುವ ಕಾರ್ಯವಿಧಾನವು ಹೇಗೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಹಾಗಾಗಿ CRTC1ವು ಸ್ಥೂಲಕಾಯತೆಯನ್ನು ನಿಗ್ರಹಿಸುವ ಕಾರ್ಯವಿಧಾನವನ್ನು ಸ್ಪಷ್ಟಪಡಿಸಲು, ಒಸಾಕಾ ಮೆಟ್ರೊಪಾಲಿಟನ್ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ಶಿಗೆನೊಬು ಮಾಟ್ಸುಮುರಾರವರು ತಮ್ಮ ನೇತೃತ್ವದ ಸಂಶೋಧನಾ ಗುಂಪೊಂದು ಮೆಲನೊಕಾರ್ಟಿನ್-4 ರಿಸೆಪ್ಟರ್ (MC4R) ಅನ್ನು ವ್ಯಕ್ತಪಡಿಸುವ ನರಕೋಶಗಳ ಮೇಲೆ ಕೇಂದ್ರೀಕರಿಸಿದ್ದಾರೆ. ಈಗ ನರಕೋಶಗಳಲ್ಲಿ MC4R- ಗಳ ಜೊತೆ CRTC1ವಿದ್ದರೆ MC4R ರಿಂದ ಉಂಟಾಗುವ ಸ್ಥೂಲಕಾಯತೆಯನ್ನು CRTC1 ನಿಗ್ರಹಿಸುತ್ತದೆಯಂತೆ. ಇದಕ್ಕೆ ಕಾರಣ MC4R ಜೀನ್‌ನಲ್ಲಿನ ರೂಪಾಂತರಗಳು ಎಂದು ಸಂಶೋಧಕರು ಊಹಿಸಿದ್ದಾರೆ.

ಇದರ ಪರೀಕ್ಷೆಗಾಗಿ ಇವರು MC4R-ಎಕ್ಸ್‌ಪ್ರೆಸ್ ಮಾಡುವ ನ್ಯೂರಾನ್‌ಗಳನ್ನು ಹೊರತುಪಡಿಸಿ ಸಾಮಾನ್ಯವಾಗಿ CRTC1 ಅನ್ನು ವ್ಯಕ್ತಪಡಿಸುವ ಇಲಿಗಳ ಸ್ಟ್ರೈನ್ ಅನ್ನು ರಚಿಸಿದರು. ಅಲ್ಲಿ ಕೇವಲ CRTC1 ಇರುವುದರಿಂದ ಅವುಗಳು ಬರಬಹುದಾದ ಬೊಜ್ಜು ಮತ್ತು ಮಧುಮೇಹವನ್ನು ನಿರ್ಬಂಧಿಸುತ್ತದೆ ಅಂತೆ. CRTC1 ಇಲ್ಲದೆ ಇರುವ ಇಲಿಗಳಿಗೆ ಪ್ರಮಾಣಿತ ಆಹಾರ ನೀಡಿದಾಗ ಅವುಗಳು ನಿಯಂತ್ರಣ ಇಲಿಗಳಿಗೆ ಹೋಲಿಸಿದರೆ ದೇಹದ ತೂಕದಲ್ಲಿ ಯಾವುದೇ ಬದಲಾವಣೆಗಳನ್ನು ಕಂಡುಬರುವುದಿಲ್ಲಿ ಇದನ್ನು MC4R- ನ್ಯೂರಾನ್‌ಗಳು ವ್ಯಕ್ತಪಡಿಸಿದೆ.

ಆದರೆ CRTC1 ಇಲ್ಲದೆ ಜೊತೆಗೆ ಈಗ ಪ್ರಮಾಣಿತ ಆಹಾರದ ಬದಲು ಹೆಚ್ಚಿನ ಕೊಬ್ಬಿನ ಆಹಾರದಲ್ಲಿ ಬೆಳೆಸಿದಾಗ, ಅವು ಅತಿಯಾಗಿ ತಿನ್ನುವುದರ ಜೊತೆಗೆ ಅವುಗಳನ್ನು ನಿಯಂತ್ರಣ ಇಲಿಗಳಿಗೆ ಹೋಲಿಸಿದಾಗ ಗಮನಾರ್ಹವಾಗಿ ಹೆಚ್ಚು ಬೊಜ್ಜು ಹೊಂದಿದೆಯಂತೆ ಮತ್ತು ಮಧುಮೇಹವು ಅವುಗಳ ದೇಹದಲ್ಲಿ ಕಾಣಿಸಿಕೊಂಡವಂತೆ ಎಂದು ತಿಳಿಸಿದೆ.

ಇವರ ಅಧ್ಯಯನವು ಮೆದುಳಿನಲ್ಲಿ CRTC1 ಜೀನ್ ವಹಿಸುವ ಪಾತ್ರವನ್ನು ಬಹಿರಂಗಪಡಿಸಿದೆ ಮತ್ತು CRTC1 ಜೀನ್ ಹೆಚ್ಚಿನ ಕ್ಯಾಲೋರಿ, ಕೊಬ್ಬಿನ ಮತ್ತು ಸಕ್ಕರೆಯ ಆಹಾರವನ್ನು ಅತಿಯಾಗಿ ತಿನ್ನುವುದನ್ನು ತಡೆಯುವ ಕಾರ್ಯವಿಧಾನದ ಭಾಗ ಎಂದು ಪ್ರೊಫೆಸರ್ ಮಾಟ್ಸುಮುರಾ ಹೇಳಿದ್ದಾರೆ.

ಇದನ್ನೂ ಓದಿ: ಕೋವಿಡ್ ಕುರಿತು ಜನರು ಮುನ್ನೆಚ್ಚರಿಕೆ ವಹಿಸಬೇಕು: ಸಚಿವ ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.