ETV Bharat / bharat

ಭಾರತ-ಆಸ್ಟ್ರೇಲಿಯಾ ಪಂದ್ಯದ ವೇಳೆ ಮನೆಗೆ ಹೊತ್ತಿಕೊಂಡ ಬೆಂಕಿ.. ಮೂವರು ಮಕ್ಕಳು ಸೇರಿ ಆರು ಜನ ಸಜೀವದಹನ

author img

By ETV Bharat Karnataka Team

Published : Oct 9, 2023, 2:43 PM IST

Six death due to gas laekage in jalandhar  JALANDHAR Six FAMILY MEMBERS BURNT  CHILDRENS AND BJP WORKER YASHPAL GHAI  BURNT ALIVE INCLUDED 3 CHILDRENS  ಭಾರತ ಆಸ್ಟ್ರೇಲಿಯಾ ಪಂದ್ಯದ ವೇಳೆ ಮನೆಯಲ್ಲಿ ಬೆಂಕಿ  ಮೂವರು ಮಕ್ಕಳು ಸೇರಿ ಆರು ಜನ ಸಜೀವ ದಹನ  ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯ  ಒಂದೇ ಕುಟುಂಬದ ಆರು ಜನ ಮೃತ  ವಸತಿ ಕಾಲೋನಿಯ ಅವತಾರ್ ನಗರ  ಮನೆಯೊಂದರಲ್ಲಿ ಸ್ಫೋಟ  ಒಂದೇ ಕುಟುಂಬದ 6 ಮಂದಿ ಸಜೀವ ದಹನ
ಭಾರತ-ಆಸ್ಟ್ರೇಲಿಯಾ ಪಂದ್ಯದ ವೇಳೆ ಮನೆಯಲ್ಲಿ ಬೆಂಕಿ

ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯ ನೋಡುತ್ತಿದ್ದಾಗ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಜನ ಮೃತಪಟ್ಟಿರುವ ಘಟನೆ ಪಂಜಾಬ್​ನ ಜಲಂಧರ್​ನಲ್ಲಿ ನಡೆದಿದೆ.

ಜಲಂಧರ್(ಪಂಜಾಬ್)​: ಜಿಲ್ಲೆಯ ವಸತಿ ಕಾಲೋನಿಯ ಅವತಾರ್ ನಗರದಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ಮನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಒಂದೇ ಕುಟುಂಬದ 6 ಮಂದಿ ಸಜೀವ ದಹನವಾಗಿದ್ದಾರೆ. ಈ ಭೀಕರ ಅಪಘಾತದಲ್ಲಿ ಮೃತರಲ್ಲಿ ಬಿಜೆಪಿ ಕಾರ್ಯಕರ್ತ ಯಶಪಾಲ್ ಘಾಯ್, ಅವರ ಮಗ, ಸೊಸೆ ಮತ್ತು ಮೂವರು ಹುಡುಗಿಯರು ಇರುವುದು ಬೆಳಕಿಗೆ ಬಂದಿದೆ.

ತಡರಾತ್ರಿ ಗ್ಯಾಸ್ ಸೋರಿಕೆಯಾಗಿ ರೆಫ್ರಿಜರೇಟರ್‌ನ ಕಂಪ್ರೆಸರ್ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಸ್ಫೋಟದಿಂದಾಗಿ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ಮನೆಯವರಿಗೆ ಹೊರಗೆ ಬರಲು ಸಾಧ್ಯವಾಗದೇ ಒಳಗೆ ಸಿಲುಕಿಕೊಂಡು ಸಜೀವ ದಹನವಾಗಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿ ಕಾರ್ಯಕರ್ತ ಯಶಪಾಲ್ ಘಾಯ್ ಕುಟುಂಬ ಬಲಿ: ಈ ಅಪಘಾತದಲ್ಲಿ ಬಿಜೆಪಿ ಕಾರ್ಯಕರ್ತ ಯಶಪಾಲ್ ಘಾಯ್, ಅವರ ಮಗ ಇಂದರ್‌ಪಾಲ್, ಸೊಸೆ ರುಚಿ, ಮತ್ತೆ ಮೂವರು ಬಾಲಕಿಯರು ಸಜೀವ ದಹನವಾಗಿದ್ದಾರೆ. ಯಶ್ಪಾಲ್ ಅವರು ಅವತಾರ್ ನಗರದಲ್ಲಿಯೇ ಹಾರ್ಡ್‌ವೇರ್ ವ್ಯವಹಾರ ನಡೆಸುತ್ತಿದ್ದರು. ಆರು ಜನರಲ್ಲಿ ಐವರು ಸ್ಥಳದಲ್ಲಿ ಸಾವನ್ನಪ್ಪಿದ್ರೆ, ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟಿದ್ದಾರೆ.

ಸ್ಥಳಕ್ಕಾಗಮಿಸಿದ ರಾಜಕೀಯ ಮುಖಂಡರು: ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಬಿಜೆಪಿ ಮುಖಂಡ ಅಶೋಕ್ ಸರೀನ್ ಹಿಕ್ಕಿ, ಈ ​​ನೋವಿನ ಅವಘಡದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿದ್ದ ಕುಟುಂಬ ಸದಸ್ಯರೆಲ್ಲರೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದರು ಎಂದು ಅಶೋಕ್ ಸರೀನ್ ಹಿಕ್ಕಿ ಹೇಳಿದ್ದಾರೆ.

ಮೊದಲು ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿದೆ. ನಂತರ ರೆಫ್ರಿಜರೇಟರ್‌ನಲ್ಲಿ ಸ್ಪಾರ್ಕಿಂಗ್ ಸಂಭವಿಸಿ ಕಂಪ್ರೆಸರ್ ಒಡೆದಿದೆ. ರೆಫ್ರಿಜರೇಟರ್‌ನ ಕಂಪ್ರೆಸರ್ ಸ್ಫೋಟಗೊಂಡು ಭಾರಿ ಸ್ಫೋಟ ಸಂಭವಿಸಿದ್ದು, ಮತ್ತೊಂದೆಡೆ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿದ್ದರಿಂದ ಬೆಂಕಿ ಬೇಗನೇ ಮನೆಗೆ ವ್ಯಾಪಿಸಿದೆ. ಬೆಂಕಿ ಎಷ್ಟು ವೇಗವಾಗಿ ಹರಡಿತು ಎಂದರೆ ಯಶಪಾಲ್ ಘಾಯ್ ಮತ್ತು ಅವರ ಕುಟುಂಬ ಸದಸ್ಯರಿಗೆ ಹೊರಬರಲು ಸಹ ಅವಕಾಶ ಸಿಗಲಿಲ್ಲ ಎಂದು ಅಶೋಕ್ ಸರಿನ್ ಮಾಹಿತಿ ನೀಡಿದರು.

ಓದಿ: ಅತ್ತಿಬೆಲೆ ಪಟಾಕಿ ದುರಂತ : ಠಾಣೆಗೆ ಭೇಟಿ ನೀಡಿದ ಸಿಐಡಿ ಐಜಿ ಪ್ರವೀಣ್ ಮಧುಕರ್ ಪವಾರ್

ಯಶ್‌ಪಾಲ್ ಅವರ ಪುತ್ರ ಇಂದರ್‌ಪಾಲ್ ಸ್ಥಿತಿಯೂ ಗಂಭೀರವಾಗಿದ್ದು, ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ಅಶೋಕ್ ಸರಿನ್ ಹೇಳಿದ್ದಾರೆ. ಜಲಂಧರ್‌ನ ಎಎಪಿ ಸಂಸದ ಸುಶೀಲ್ ರಿಂಕು ಕೂಡ ಈ ನೋವಿನ ಅಪಘಾತದ ಬಗ್ಗೆ ಮಾಹಿತಿ ಪಡೆದ ತಕ್ಷಣ ಕುಟುಂಬ ಸದಸ್ಯರೊಂದಿಗೆ ಸ್ಥಳಕ್ಕಾಗಮಿಸಿದರು. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಅನುಸರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.