ETV Bharat / bharat

ದೆಹಲಿ ಕೋರ್ಟ್‌ಗೆ ಹಾಜರಾದ ನಟಿ ಜಾಕ್ವೆಲಿನ್ ಫರ್ನಾಂಡೀಸ್

author img

By

Published : Nov 10, 2022, 2:22 PM IST

Updated : Nov 10, 2022, 2:31 PM IST

ಸುಕೇಶ್ ಚಂದ್ರಶೇಖರ್ ಒಳಗೊಂಡ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯವು ಇಂದು ವಿಚಾರಣೆ ನಡೆಸಲಿದೆ.

Actor Jacqueline Fernandez
ನಟಿ ಜಾಕ್ವೆಲಿನ್ ಫರ್ನಾಂಡೀಸ್ ದೆಹಲಿ ಕೋರ್ಟ್​ಗೆ ಹಾಜರಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಇಂದು ವಿಚಾರಣೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಪಟಿಯಾಲ ಕೋರ್ಟ್‌ಗೆ ನಟಿ ಹಾಜರಾದರು.

ಇದಕ್ಕೂ ಮೊದಲು ನ್ಯಾಯಾಲಯವು ಆಕೆಗೆ ನವೆಂಬರ್ 10 ರವರೆಗೆ ಮಧ್ಯಂತರ ಜಾಮೀನು ವಿಸ್ತರಿಸಿತ್ತು. ಜಾಕ್ವೆಲಿನ್ ಪರ ವಕೀಲ ಪ್ರಶಾಂತ್ ಪಾಟೀಲ್ ವಾದ ಮಾಡಲಿದ್ದಾರೆ. ಫರ್ನಾಂಡೀಸ್ ಇಡಿ ತನಿಖೆಗೆ ಸಹಕರಿಸಿದ್ದಾರೆ. ಎಲ್ಲಾ ಸಮನ್ಸ್​ಗಳಿಗೂ ಹಾಜರಾಗಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.

ಇಡಿಯ ಹಿಂದಿನ ಜಾರ್ಜ್​ಶೀಟ್ ಪ್ರಕಾರ, ವಂಚಕ ಸುಖೇಶ್ ಚಂದ್ರಶೇಖರ್ ಜೊತೆ ನಟಿ ಆತ್ಮೀಯ ಸ್ನೇಹ ಹೊಂದಿದ್ದರು. ಆತನಿಂದ ದುಬಾರಿ ಉಡುಗೊರೆ ಪಡೆದಿದ್ದರು. ಆದರೆ ಈ ಆರೋಪವನ್ನು ಫನಾಂಡೀಸ್ ತಿರಸ್ಕರಿಸಿದ್ದಾರೆ. ತಮ್ಮ ಸ್ವಂತ ಹಣದಿಂದಲೇ ಎಲ್ಲವನ್ನೂ ಖರೀದಿಸಿದ್ದು, ಚಂದ್ರಶೇಖರ್ ಜೊತೆಗೆ ನನಗೆ ಯಾವುದೇ ರೀತಿಯ ಸ್ನೇಹವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಜಾಮೀನಿಗೆ ಅವರು ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾಕ್ವೆಲಿನ್​ಗೆ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ವಿಸ್ತರಿಸಿದ ನ್ಯಾಯಾಲಯ

Last Updated : Nov 10, 2022, 2:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.