ETV Bharat / bharat

ಅಗ್ನಿವೀರರ ಸಂಖ್ಯೆ ಮುಂದೆ 1 ಲಕ್ಷಕ್ಕೆ ಹೆಚ್ಚಳ, ಸೇನೆಗೆ ಹೋಶ್​, ಜೋಶ್​ ಬೇಕಿದೆ: ಸೇನಾ ಮುಖ್ಯಸ್ಥರು

author img

By

Published : Jun 19, 2022, 3:50 PM IST

Updated : Jun 19, 2022, 4:03 PM IST

ಅಗ್ನಿವೀರರ ಸಂಖ್ಯೆ ಮುಂದೆ 1 ಲಕ್ಷಕ್ಕೆ ಹೆಚ್ಚಲಿದೆ: ಸೇನಾ ಮುಖ್ಯಸ್ಥರು
ಅಗ್ನಿವೀರರ ಸಂಖ್ಯೆ ಮುಂದೆ 1 ಲಕ್ಷಕ್ಕೆ ಹೆಚ್ಚಲಿದೆ: ಸೇನಾ ಮುಖ್ಯಸ್ಥರು

ಅಗ್ನಿಪಥ ಯೋಜನೆಯಡಿ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ಆಯ್ಕೆಯಾದ ಅಗ್ನಿವೀರರು ಯಾವೆಲ್ಲಾ ಸೌಲಭ್ಯಗಳನ್ನು ಪಡೆಯಲಿದ್ದಾರೆ. ಅವರ ಸೇವೆ ಏನು ಎಂಬುದರ ಬಗ್ಗೆ ಮೂರೂ ಪಡೆಗಳ ಮುಖ್ಯಸ್ಥರು ಮಾಹಿತಿ ನೀಡಿದರು.

ನವದೆಹಲಿ: ಅಗ್ನಿಪಥ್ ಯೋಜನೆಯಡಿ ಮೂರು ಪಡೆಗಳಿಗೆ ಅಲ್ಪಾವಧಿಗೆ ನೇಮಕ ಮಾಡಿಕೊಳ್ಳುತ್ತಿರುವ ಸೈನಿಕರ ಸಂಖ್ಯೆ ಭವಿಷ್ಯದಲ್ಲಿ ಒಂದು 1 ಲಕ್ಷಕ್ಕೂ ಹೆಚ್ಚಾಗಲಿದೆ ಎಂದು ಉನ್ನತ ಸೇನಾ ಅಧಿಕಾರಿಯೊಬ್ಬರು ತಿಳಿಸಿದರು.

ಯೋಜನೆಯ ಆರಂಭದಲ್ಲಿ ವಿಶ್ಲೇಷಿಸಲು 46 ಸಾವಿರ ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಬಳಿಕ ಮುಂದಿನ 4 -5 ವರ್ಷಗಳಲ್ಲಿ ಈ ಸಂಖ್ಯೆ 50, 60, 90 ಸಾವಿರದಿಂದ ಒಂದು ಲಕ್ಷಕ್ಕೆ ಹೆಚ್ಚಾಗುತ್ತದೆ. ಸದ್ಯಕ್ಕೆ 46 ಸಾವಿರ ಜನರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಮಾಧ್ಯಮಗೋಷ್ಟಿಯಲ್ಲಿ ಹೇಳಿದರು.

ಅಗ್ನಿವೀರರಿಗೆ ಸಾಮಾನ್ಯ ಯೋಧರಂತೆ ಭತ್ಯೆ: ಅಗ್ನಿವೀರರು ರಾಷ್ಟ್ರ ಸೇವೆಯ ವೇಳೆ ಹುತಾತ್ಮರಾದರೆ, 1 ಕೋಟಿ ರೂಪಾಯಿ ಪರಿಹಾರವನ್ನು ಪಡೆಯುತ್ತಾರೆ. ಅಗ್ನಿವೀರರು ಸೇನೆ ಸೇರಿ ನಿವೃತ್ತರಾದ ಬಳಿಕ ಸಿಯಾಚಿನ್ ಮತ್ತು ಇತರ ಪ್ರದೇಶಗಳಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಸಾಮಾನ್ಯ ಸೈನಿಕರಿಗೆ ಅನ್ವಯವಾಗುವ ಅದೇ ಭತ್ಯೆಗಳನ್ನು ಇವರೂ ಪಡೆಯುತ್ತಾರೆ. ಇದರಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ಈಗಿರುವ ಸೇನೆಯಲ್ಲಿ ಪ್ರತಿ ವರ್ಷ ಸುಮಾರು 17,600 ಜನರು ಮೂರೂ ಪಡೆಗಳಿಂದ ನಿವೃತ್ತಿ ಪಡೆಯುತ್ತಿದ್ದಾರೆ. ಆದರೆ, ಇವರ ನಿವೃತ್ತಿಯ ಬಗ್ಗೆ ಜನರು ಮಾತನಾಡುವುದೇ ಇಲ್ಲ. ನಿವೃತ್ತಿ ಬಳಿಕ ಏನು ಮಾಡುತ್ತಾರೆ ಎಂದು ಕೇಳುವ ಪ್ರಯತ್ನವನ್ನೂ ಯಾರೂ ಮಾಡಲಿಲ್ಲ ಅವರು ಹೇಳಿದರು.

ಸೇನೆಗೆ ಯೌವನ ಹೆಚ್ಚಿಸುವ ಕ್ರಮವಿದು: ನಮಗೆ ಜೋಶ್ ಮತ್ತು ಹೋಶ್ ಮಿಶ್ರಣದ ಯೋಧರು ಸೇನೆಗೆ ಬೇಕಾಗಿದೆ. ಅದಕ್ಕಾಗಿಯೇ ನಾವು ವಯಸ್ಸಿನ ಮಿತಿಯನ್ನು ಕಡಿಮೆ ಮಾಡಲು ಬಯಸಿದ್ದೇವೆ. ಪ್ರಸ್ತುತ ಸೇನೆಯ ಸರಾಸರಿ ವಯಸ್ಸು 32 ವರ್ಷಗಳಾಗಿವೆ. ಕಾರ್ಗಿಲ್ ಪರಿಶೀಲನಾ ಸಮಿತಿ ಮತ್ತು ಅರುಣ್ ಸಿಂಗ್ ಸಮಿತಿಯ ವರದಿಯ ಶಿಫಾರಸುಗಳ ಪ್ರಕಾರ ಅದನ್ನು ಇನ್ನಷ್ಟು ಕಡಿಮೆ ಮಾಡಲು ಅಗ್ನವೀರರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.

ಅಗ್ನವೀರರ ನೇಮಕದಿಂದ ಸೇನೆಯಲ್ಲಿ ತರುಣರು ಮತ್ತು ಅನುಭವಿಗಳ ಮಿಶ್ರಣ ಸಿಗಲಿದೆ. ಈ ಸುಧಾರಣೆಯನ್ನು ಬಹಳ ದಿನಗಳ ಹಿಂದೆಯೇ ತರಬೇಕೆಂದು ಪ್ರಯತ್ನಿಸಲಾಗಿತ್ತು. ಸೇನೆಯಲ್ಲಿ ಹೆಚ್ಚಿನ ಸಂಖ್ಯೆಯ ಯೋಧರು 30 ವರ್ಷದವರಾಗಿದ್ದಾರೆ. ಅಧಿಕಾರಿಗಳು ಆದೇಶಗಳನ್ನು ತ್ವರಿತವಾಗಿ ಪಡೆಯಲು ಅಗ್ನಿವೀರರ ಅಗತ್ಯವಿದೆ ಎಂದು ಅವರು ತಿಳಿಸಿದರು.

ಓದಿ: ದೆಹಲಿಯ ಜಂತರ್ ಮಂತರ್​ನಲ್ಲಿ 'ಅಗ್ನಿಪಥ್' ವಿರುದ್ಧ ಕಾಂಗ್ರೆಸ್ 'ಸತ್ಯಾಗ್ರಹ'

Last Updated :Jun 19, 2022, 4:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.