ETV Bharat / bharat

ಭಾರತ, ಶ್ರೀಲಂಕಾ, ಮಾಲ್ಡೀವ್ಸ್​​​ ನಡುವೆ ಹಿಂದೂ ಮಹಾಸಾಗರದಲ್ಲಿ 'ದೋಸ್ತಿ' ಸಮರಾಭ್ಯಾಸ

author img

By

Published : Nov 28, 2021, 6:12 PM IST

India, Sri Lanka and Maldives hold maritime exercises
ಭಾರತ, ಶ್ರೀಲಂಕಾ, ಮಾಲ್ಡೀವ್ಸ್​​​ ನಡುವೆ 'ದೋಸ್ತಿ' ಸಮರಾಭ್ಯಾಸ

ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನ ನೌಕಾಪಡೆಗಳು ಸಾಗರೋತ್ತರ ತ್ರಿಪಕ್ಷೀಯ ಸಮರಾಭ್ಯಾಸವನ್ನು ಹಿಂದೂ ಮಹಾಸಾಗರದಲ್ಲಿ ನಡೆಸಿದ್ದು, ಈ ಸಮರಾಭ್ಯಾಸಕ್ಕೆ ದೋಸ್ತಿ ಎಂದು ಹೆಸರಿಡಲಾಗಿದೆ.

ಕೊಲಂಬೊ(ಶ್ರೀಲಂಕಾ): ಹಿಂದೂ ಮಹಾಸಾಗರದಲ್ಲಿ ಭದ್ರತೆಯನ್ನು ಹೆಚ್ಚಿಸಲು ಮತ್ತು ನೌಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನ ನೌಕಾಪಡೆಗಳು ಸಾಗರೋತ್ತರ ತ್ರಿಪಕ್ಷೀಯ ಸಮರಾಭ್ಯಾಸ ನಡೆಸಿವೆ.

ಎರಡು ದಿನಗಳ ಕಾಲ ಈ ಸಮರಾಭ್ಯಾಸ ನಡೆದಿದ್ದು, ಎರಡು ವರ್ಷಗಳಿಗೊಮ್ಮೆ ಈ ಸಮರಾಭ್ಯಾಸ ನಡೆಸಲಾಗುತ್ತದೆ. 30 ವರ್ಷಗಳ ಹಿಂದೆ ಈ ಸಮರಾಭ್ಯಾಸ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಆರಂಭವಾಗಿದ್ದು, 2012ರಿಂದ ಶ್ರೀಲಂಕಾ ಸೇರ್ಪಡೆಯಾಗಿದೆ. ಇದು 15ನೇ ಆವೃತ್ತಿಯ ಸಮರಾಭ್ಯಾಸವಾಗಿದೆ.

ಈಗ ಕೊಲಂಬೊ ಸೆಕ್ಯುರಿಟಿ ಕಾನ್​ಕ್ಲೇವ್​ (ಸಿಎಸ್‌ಸಿ) ಅಡಿಯಲ್ಲಿ ಎರಡು ದಿನಗಳ ಸಮರಾಭ್ಯಾಸ ನಡೆದಿದ್ದು, ಕಡಲ ಭದ್ರತೆಗೆ ಸಹಕಾರ ನೀಡುವ ಪ್ರಯತ್ನವಾಗಿದೆ ಎಂದು ಶ್ರೀಲಂಕಾದಲ್ಲಿನ ಭಾರತೀಯ ಹೈಕಮೀಷನ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಈ ಸಮರಾಭ್ಯಾಸಕ್ಕೆ ದೋಸ್ತಿ ಎಂದು ಹೆಸರಿಡಲಾಗಿದೆ.

ಭಾರತೀಯ ನೌಕಾಪಡೆಯನ್ನು ಐಎನ್‌ಎಸ್ ಸುಭದ್ರಾ ಗಸ್ತು ಹಡಗು ಮತ್ತು ಪಿ8ಐ ಲಾಂಗ್ ರೇಂಜ್ ಏರ್‌ಕ್ರಾಫ್ಟ್ ಪ್ರತಿನಿಧಿಸಿದರೆ, ಶ್ರೀಲಂಕಾದಿಂದ ಎಸ್‌ಎಲ್‌ಎನ್‌ಎಸ್ ಸಮುದ್ರ (SLNS Samudra), ಎಂಡಿಎನ್​ಎಫ್ ಮೆರಿಟೈಮ್ (MNDF Maritime) ಏರ್‌ಕ್ರಾಫ್ಟ್ ಮತ್ತು ಮಾಲ್ಡೀವ್ಸ್​ನಿಂದ ರಾಷ್ಟ್ರೀಯ ರಕ್ಷಣಾ ಪಡೆಗಳು ಭಾಗವಹಿಸಿವೆ.

ಎರಡು ದಿನಗಳ ಈ ಸಮರಾಭ್ಯಾಸವು ಆಯಾ ರಾಷ್ಟ್ರಗಳ ವಿಶೇಷ ಆರ್ಥಿಕ ವಲಯಗಳಲ್ಲಿ ಮಾದಕ ದ್ರವ್ಯ ಸಾಗಣೆ ಎದುರಿಸಲು, ಸಂವಹನ ಅಭಿವೃದ್ಧಿ ಪಡಿಸಲು, ಗಸ್ತು ಪ್ರಕ್ರಿಯೆಯನ್ನು ಚುರುಕುಗೊಳಿಸಲು ಸಹಕಾರ ನೀಡಲಿವೆ ಎಂದು ಹೈಕಮೀಷನ್ ಹೇಳಿದೆ.

ಇದನ್ನೂ ಓದಿ: Parliament Winter Session : ಮಹಿಳಾ ಮೀಸಲಾತಿ ಮಸೂದೆಗೆ ಟಿಎಂಸಿ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.