ETV Bharat / bharat

India Corona: ದೇಶದಲ್ಲಿ ಹೊಸದಾಗಿ 50 ಸಾವಿರ ಸೋಂಕಿತರು ಪತ್ತೆ, 804 ಮಂದಿ ಸಾವು

author img

By

Published : Feb 12, 2022, 10:18 AM IST

india covid update report
India Corona: ದೇಶದಲ್ಲಿ ಹೊಸದಾಗಿ 50 ಸಾವಿರ ಸೋಂಕಿತರು ಪತ್ತೆ, 804 ಮಂದಿ ಮೃತ

ಕೊರೊನಾ ಸೋಂಕಿತರು ದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಪತ್ತೆಯಾಗುತ್ತಿದ್ದಾರೆ. ಕಳೆದ 24 ಗಂಟೆಯಲ್ಲಿ ಸಾವಿರ ಸೋಂಕಿತರು ಪತ್ತೆಯಾಗಿದ್ದು, ವ್ಯಾಕ್ಸಿನೇಷನ್ ಪ್ರಮಾಣವೂ ವೇಗವಾಗಿ ನಡೆಯುತ್ತಿದೆ.

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇತ್ತೀಚೆಗೆ ಕಡಿಮೆ ಸೋಂಕಿತರು ಕಂಡು ಬರುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ 50,407 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 804 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಯಲ್ಲಿ 1,36,962 ಮಂದಿ ಕೋವಿಡ್​​ನಿಂದ ಚೇತರಿಕೆ ಕಂಡಿದ್ದಾರೆ. ಈವರೆಗೆ ಒಟ್ಟು 4,14,68,120 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.

ಕೋವಿಡ್ ಸೋಂಕಿನಿಂದ ಗುಣಮುಖರಾಗಿರುವವರ ಪ್ರಮಾಣ ಶೇಕಡಾ 97.37ರಷ್ಟಿದೆ ಎಂದು ಆರೋಗ್ಯ ಇಲಾಖೆಯ ಅಂಕಿ - ಅಂಶಗಳು ದೃಢಪಡಿಸಿವೆ. ಈವರೆಗೆ ದೇಶದಲ್ಲಿ ಸುಮಾರು 5,07,981 ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಎಚ್ಐವಿ ಸೋಂಕು ಅನ್ವೇಷಕ, ನೊಬೆಲ್​ ಪ್ರಶಸ್ತಿ ವಿಜೇತ ಲುಕ್ ಮಾಂಟಾಗ್ನಿಯರ್ ಇನ್ನಿಲ್ಲ

ದೇಶದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 6,10,443 ಇದ್ದು, ಒಟ್ಟು ಸೋಂಕಿತರಲ್ಲಿ ಶೇಕಡಾ 1.43ರಷ್ಟು ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಟೆಸ್ಟಿಂಗ್ ಮತ್ತು ವ್ಯಾಕ್ಸಿನೇಷನ್​: ಈವರೆಗೆ ಸುಮಾರು 74,93,20,579 ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. ಶುಕ್ರವಾರ ಒಂದೇ ದಿನ 14,50,532 ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ ಎಂದು ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್​ (ಐಸಿಎಂಆರ್​) ಮಾಹಿತಿ ನೀಡಿದೆ. ಈವರೆಗೆ ಸುಮಾರು 1,72,29,47,688 ಕೋಟಿ ಡೋಸ್​ ವ್ಯಾಕ್ಸಿನೇಷನ್ ನೀಡಲಾಗಿದೆ. ಶುಕ್ರವಾರ ಒಂದೇ ದಿನದಲ್ಲಿ 46,82,662 ಮಂದಿಗೆ ಲಸಿಕೆ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.