ETV Bharat / bharat

India Corona: ದೇಶದಲ್ಲಿ ಹೊಸದಾಗಿ 2.38 ಲಕ್ಷ ಮಂದಿಗೆ ಕೋವಿಡ್.. ನಿಟ್ಟುಸಿರಿನತ್ತ ಭಾರತ!

author img

By

Published : Jan 18, 2022, 9:27 AM IST

Updated : Jan 18, 2022, 9:38 AM IST

India corona updates
India Corona: ದೇಶದಲ್ಲಿ ಹೊಸದಾಗಿ 2.38 ಲಕ್ಷ ಮಂದಿಗೆ ಕೋವಿಡ್

ದೇಶದಲ್ಲಿ ಕಾಣಿಸಿಕೊಳ್ಳುವ ಕೊರೊನಾ ಸೋಂಕಿತರ ಸಂಖ್ಯೆ ಹಿಂದಿನ ದಿನಕ್ಕೆ ಹೋಲಿಸಿದರೆ, 20 ಸಾವಿರದಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ನವದೆಹಲಿ: ದೇಶದಲ್ಲಿ ಹೊಸದಾಗಿ ಕಾಣಿಸಿಕೊಳ್ಳುವ ಕೊರೊನಾ ಸೋಂಕಿತರ ಸಂಖ್ಯೆ ಕೆಲವು ದಿನಗಳಿಂದ ಎರಡೂವರೆ ಲಕ್ಷದ ಆಸುಪಾಸಿನಲ್ಲಿಯೇ ಇದ್ದು, ಕಳೆದ 24 ಗಂಟೆಯಲ್ಲಿ 2,38,018 ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಲಾಖೆ ಮಾಹಿತಿ ನೀಡಿದೆ.

ಹಿಂದಿನ ದಿನಕ್ಕೆ ಹೋಲಿಸಿದರೆ, ಕಳೆದ 24 ಗಂಟೆಗಳಲ್ಲಿ ಸುಮಾರು 20,071 ಕಡಿಮೆ ಸೋಂಕಿತರು ಇಂದು ಪತ್ತೆಯಾಗಿದ್ದಾರೆ. ಒಂದು ದಿನದಲ್ಲಿ 310 ಮಂದಿ ಕೋವಿಡ್​ನಿಂದ ಸಾವನ್ನಪ್ಪಿದ್ದು, 1,57,421 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 3,53,94,882 ಮಂದಿ ಗುಣಮುಖರಾಗಿದ್ದಾರೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳು ಒಟ್ಟು 17,36,628 ಮಂದಿ ಇದ್ದು, ಈಗ ಒಟ್ಟು ಸೋಂಕಿತರಲ್ಲಿ ಶೇಕಡಾ 4.62ರಷ್ಟು ಮಂದಿ ಸಕ್ರಿಯ ಸೋಂಕಿತರಿದ್ದಾರೆ. ದಿನವೊಂದಕ್ಕೆ ಸೋಂಕು ಕಾಣಿಸಿಕೊಳ್ಳುವವರ ಪ್ರಮಾಣ ಶೇಕಡಾ 14.43ರಷ್ಟಿದೆ.

ಟೆಸ್ಟಿಂಗ್ ಮತ್ತು ವ್ಯಾಕ್ಸಿನೇಷನ್​: ಈವರೆಗೆ ಸುಮಾರು 70,54,11,425 ಕೋಟಿ ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. ಸೋಮವಾರ ಒಂದೇ ದಿನ 16,49,143 ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ ಎಂದು ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್​ (ಐಸಿಎಂಆರ್​) ಮಾಹಿತಿ ನೀಡಿದೆ. ಈವರೆಗೆ ಸುಮಾರು 1,58,04,41,770 ಕೋಟಿ ಡೋಸ್​ ವ್ಯಾಕ್ಸಿನೇಷನ್ ನೀಡಲಾಗಿದೆ. ಸೋಮವಾರ ಒಂದೇ ದಿನದಲ್ಲಿ 79,91,230 ಮಂದಿಗೆ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ: ಕೋವಿಡ್​​​ ಸಾಂಕ್ರಾಮಿಕ ಮಕ್ಕಳ ಮೆದುಳಿನ ಮೇಲೆ ಪರಿಣಾಮ ಬೀರುತ್ತಿದೆಯೇ?

Last Updated :Jan 18, 2022, 9:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.