ETV Bharat / bharat

RSS ಮುಖ್ಯಸ್ಥರ ಇಮಾಮ್ ಭೇಟಿ: 'ಭಾರತ್ ಜೋಡೋ' ಯಾತ್ರೆಯ ಪರಿಣಾಮವೆಂದ ಕಾಂಗ್ರೆಸ್

author img

By

Published : Sep 23, 2022, 11:11 AM IST

ಬಿಜೆಪಿ ವಕ್ತಾರರೊಬ್ಬರು ಗೋಡ್ಸೆ ಮುರ್ದಾಬಾದ್ ಎಂದಿದ್ದರು. ಈಗ ಮೋಹನ್ ಭಾಗವತ್ ಮತ್ತೊಂದು ಧರ್ಮದ ವ್ಯಕ್ತಿಯ ಮನೆಗೆ ಹೋಗಿದ್ದಾರೆ. ಇದು ಭಾರತ್ ಜೋಡೋ ಯಾತ್ರೆಯ ಪರಿಣಾಮವೇ ಆಗಿದೆ ಎಂದು ಗೌರವ್ ವಲ್ಲಭ್ ಹೇಳಿದ್ದಾರೆ.

ಆರೆಸ್ಸೆಸ್ ಮುಖ್ಯಸ್ಥರ ಇಮಾಮ್ ಭೇಟಿ: ಭಾರತ್ ಜೋಡೊ ಯಾತ್ರೆಯ ಪರಿಣಾಮವೆಂದ ಕಾಂಗ್ರೆಸ್
Imam visit of RSS chief: Congress as a result of Bharat Jodo Yatra

ನವದೆಹಲಿ: ಆರ್​​ಎಸ್​​ಎಸ್​​​ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಖಿಲ ಭಾರತ ಇಮಾಮ್ ಸಂಘಟನೆಯ ಅಧ್ಯಕ್ಷರನ್ನು ಭೇಟಿಯಾಗಿರುವುದು ಪಕ್ಷದ ಭಾರತ್ ಜೋಡೋ ಯಾತ್ರೆಯ ಪರಿಣಾಮವಾಗಿದೆ ಎಂದು ಕಾಂಗ್ರೆಸ್ ಮುಖಂಡ ಗೌರವ್ ವಲ್ಲಭ್ ಪ್ರತಿಪಾದಿಸಿದ್ದಾರೆ. ದೇಶವನ್ನು ಒಗ್ಗೂಡಿಸಲು ಆರ್‌ಎಸ್‌ಎಸ್ ಮುಖ್ಯಸ್ಥರು ರಾಹುಲ್ ಗಾಂಧಿ ಅವರೊಂದಿಗೆ ಕೈಜೋಡಿಸಲಿ ಎಂದು ಹೇಳಿದರು.

ಮುಸ್ಲಿಂ ಸಮುದಾಯದೊಂದಿಗೆ ಸೌಹಾರ್ದ ಸಂಬಂಧವನ್ನು ಏರ್ಪಡಿಸುವ ನಿಟ್ಟಿನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರು ಗುರುವಾರ ದೆಹಲಿಯ ಮಸೀದಿ ಮತ್ತು ಮದರಸಾಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯ ಇಮಾಮ್ ಡಾ. ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ಭೇಟಿಯಾಗಿದ್ದರು. ಇಮಾಮ್ ಡಾ. ಉಮರ್ ಅಹ್ಮದ್ ಇಲ್ಯಾಸಿ ಆರ್‌ಎಸ್‌ಎಸ್ ಮುಖ್ಯಸ್ಥರನ್ನು "ರಾಷ್ಟ್ರಪಿತ" ಎಂದು ಕರೆದಿದ್ದು ಗಮನಾರ್ಹ.

ಭಾರತ್ ಜೋಡೋ ಯಾತ್ರೆ ಆರಂಭವಾಗಿ ಕೇವಲ 15 ದಿನಗಳು ಕಳೆದಿವೆ. ಆದರೆ, ಅಷ್ಟರಲ್ಲಾಗಲೇ ಅದರ ಪರಿಣಾಮಗಳು ಕಾಣತೊಡಗಿವೆ. ಟಿವಿ ಚಾನೆಲ್ ಒಂದರಲ್ಲಿ ಮಾತನಾಡಿದ ಬಿಜೆಪಿ ವಕ್ತಾರರೊಬ್ಬರು ಗೋಡ್ಸೆ ಮುರ್ದಾಬಾದ್ ಎಂದಿದ್ದರು. ಈಗ ಮೋಹನ್ ಭಾಗವತ್ ಮತ್ತೊಂದು ಧರ್ಮದ ವ್ಯಕ್ತಿಯ ಮನೆಗೆ ಹೋಗಿದ್ದಾರೆ. ಇದು ಭಾರತ್ ಜೋಡೋ ಯಾತ್ರೆಯ ಪರಿಣಾಮವೇ ಆಗಿದೆ ಎಂದು ಗೌರವ್ ವಲ್ಲಭ್ ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆ ಮುಗಿಯುವ ಹೊತ್ತಿಗೆ ಆಡಳಿತಾರೂಢ ವ್ಯವಸ್ಥೆಯು ಈ ದೇಶದಲ್ಲಿ ಹುಟ್ಟು ಹಾಕಿರುವ ದ್ವೇಷದ ಭಾವನೆ ಸಂಪೂರ್ಣವಾಗಿ ಕರಗಲಿದೆ. 15 ದಿನಗಳಲ್ಲಿಯೇ ಈ ಯಾತ್ರೆಯು ನಿಮ್ಮ ಮೇಲೆ ಅಷ್ಟೊಂದು ಪ್ರಭಾವ ಬೀರಿದ್ದರೆ ನೀವೂ ಸಹ ನಮ್ಮೊಂದಿಗೆ ಬನ್ನಿ, ತಿರಂಗಾ ಹಿಡಿದುಕೊಂಡು ರಾಹುಲ್ ಗಾಂಧಿಯವರೊಂದಿಗೆ ಒಂದೆರಡು ಗಂಟೆಗಳ ಕಾಲ ಹೆಜ್ಜೆ ಹಾಕಿ ಎಂದು ಅವರು ಆಹ್ವಾನ ನೀಡಿದರು.

ಭಾಗವತ್ ಹಾಗೂ ಇಮಾಮ್ ಭೇಟಿಗೆ ಪ್ರತಿಕ್ರಿಯಿಸಿರುವ ಮತ್ತೋರ್ವ ಕಾಂಗ್ರೆಸ್ ನಾಯಕ ಪವನ್ ಖೇರಾ ಕೂಡ ಟ್ವೀಟ್ ಮಾಡಿ, ಭಾರತ್ ಜೋಡೋ ಯಾತ್ರೆ ಆರಂಭವಾಗಿ 15 ದಿನಗಳು ಕಳೆದಿವೆ. ಅಷ್ಟರಲ್ಲೇ ಬಿಜೆಪಿ ವಕ್ತಾರರು ಗೋಡ್ಸೆ ಮುರ್ದಾಬಾದ್ ಎಂದು ಹೇಳಲು ಆರಂಭಿಸಿದ್ದಾರೆ. ಮಾಧ್ಯಮಗಳ ಮೂಲಕ ಹರಡುತ್ತಿರುವ ದ್ವೇಷದ ಬಗ್ಗೆ ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ. ಭಾಗವತ್ ಅವರು ಇಮಾಮ್​ರನ್ನು ಸಂಪರ್ಕಿಸುತ್ತಿದ್ದಾರೆ. ಮುಂದೆ ಏನಾಗುತ್ತದೆ ಎಂದು ನೋಡೋಣ ಎಂದಿದ್ದಾರೆ.

ಇದನ್ನೂ ಓದಿ: ಮೋಹನ್​ ಭಾಗವತ್​ ರಾಷ್ಟ್ರಪಿತ, ರಾಷ್ಟ್ರ ಋಷಿ ಇದ್ಧಂತೆ: ಇಮಾಮ್​ಗಳ ಮುಖ್ಯಸ್ಥರ ಬಣ್ಣನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.