ETV Bharat / bharat

ಐಐಟಿ ಮಂಡಿ ಮತ್ತು ಏರ್​ ಫೋರ್ಸ್ ಮಧ್ಯೆ ಒಡಂಬಡಿಕೆ: AI & ML ಕ್ಷೇತ್ರದಲ್ಲಿ ಸಂಶೋಧನೆ

author img

By

Published : Jan 23, 2023, 7:43 PM IST

ಕೃತಕ ಬುದ್ಧಿಮತ್ತೆ ಮತ್ತು ಮಶೀನ್ ಲರ್ನಿಂಗ್ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಲು ಮಂಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಐಎಎಫ್‌ನ ಪ್ರಧಾನ ಕಚೇರಿ ಒಡಂಬಡಿಕೆ ಮಾಡಿಕೊಂಡಿವೆ. ಈ ಒಪ್ಪಂದದಿಂದ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ.

ಐಐಟಿ ಮಂಡಿ ಮತ್ತು ಏರ್​ ಫೋರ್ಸ್ ಮಧ್ಯೆ ಒಡಂಬಡಿಕೆ: AI & ML ಕ್ಷೇತ್ರದಲ್ಲಿ ಸಂಶೋಧನೆ
iit-mandi-inks-pact-with-iafs-hq-maintenance-command-for-r-and-d-in-ai-machine-learning

ಹಮೀರ್‌ಪುರ (ಹಿಮಾಚಲ ಪ್ರದೇಶ): ಮಂಡಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ನಾಗ್ಪುರದಲ್ಲಿರುವ ಐಎಎಫ್‌ನ ಪ್ರಧಾನ ಕಚೇರಿ ನಿರ್ವಹಣೆ ಕಮಾಂಡ್‌ನೊಂದಿಗೆ ಕೃತಕ ಬುದ್ಧಿಮತ್ತೆ ಮತ್ತು ಮಶೀನ್ ಲರ್ನಿಂಗ್ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಹಕರಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ತಿಳಿವಳಿಕೆ ಒಪ್ಪಂದಕ್ಕೆ ಹೆಚ್‌ಕ್ಯು ಎಂಸಿಯ ಉಪ ಹಿರಿಯ ನಿರ್ವಹಣಾ ಸಿಬ್ಬಂದಿ ಅಧಿಕಾರಿ ಬಿಜಿ ಫಿಲಿಪ್ ಮತ್ತು ಐಐಟಿ ಮಂಡಿಯ ಡೀನ್ (ಪ್ರಾಯೋಜಿತ ಸಂಶೋಧನೆ ಮತ್ತು ಕೈಗಾರಿಕಾ ಸಲಹೆ) ತುಲಿಕಾ ಶ್ರೀವಾಸ್ತವ ಅವರು ಸಹಿ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಒಪ್ಪಂದದ ಅಡಿ ಐಐಟಿ ಮಂಡಿ ಮತ್ತು ಹೆಚ್‌ಕ್ಯು ಎಂಸಿ ಸಂಶೋಧನಾ ಯೋಜನೆಗಳು ತಂತ್ರಜ್ಞಾನ ಅಭಿವೃದ್ಧಿ ಮತ್ತು ಕೃತಕ ಬುದ್ಧಿಮತ್ತೆ, ಮಶೀನ್ ಲರ್ನಿಂಗ್, ಮಾನವ-ಕಂಪ್ಯೂಟರ್ ಸಂಪರ್ಕ ಮತ್ತು ನಿರ್ಧಾರ ಬೆಂಬಲ ವ್ಯವಸ್ಥೆಗಳಲ್ಲಿ ಕೌಶಲ್ಯ ಅಭಿವೃದ್ಧಿಗೆ ಸಹಕರಿಸುತ್ತವೆ ಎಂದು ಅದು ಹೇಳಿದೆ. ಐಐಟಿ ಮಂಡಿ ಮತ್ತು ಹೆಚ್‌ಕ್ಯು ಎಂಸಿ ಯ ಸಂಪೂರ್ಣ ತಂಡವನ್ನು ಈ ಎಂಒಯು ರೂಪದಲ್ಲಿ ಔಪಚಾರಿಕಗೊಳಿಸುವುದಕ್ಕಾಗಿ ನಾನು ಅಭಿನಂದಿಸುತ್ತೇನೆ. ಐಐಟಿ ಮಂಡಿಯ ಮುಖ್ಯ ಧ್ಯೇಯವೆಂದರೆ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ಈ ಒಪ್ಪಂದವು ಅದಕ್ಕಾಗಿ ಒಂದು ಹೆಜ್ಜೆಯಾಗಿದೆ ಎಂದು ಶ್ರೀವಾಸ್ತವ ಹೇಳಿದರು.

ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಅತ್ಯಂತ ಶಕ್ತಿಯುತ ಉತ್ಸಾಹಭರಿತ ತಂಡವು ಐಐಟಿ ಮಂಡಿಯ ದೊಡ್ಡ ಆಸ್ತಿಯಾಗಿದೆ ಎಂದು ಶ್ರೀವಾಸ್ತವ ಹೇಳಿದರು. ಈ ಒಪ್ಪಂದದ ಮೂಲಕ ಎರಡೂ ಸಂಸ್ಥೆಗಳು ಪರಸ್ಪರ ಪ್ರಯೋಜನ ಪಡೆಯಲಿವೆ ಮತ್ತು AI ಮತ್ತು ಯಂತ್ರ ಕಲಿಕೆಯ ಕ್ಷೇತ್ರದಲ್ಲಿ ಪ್ರಮುಖ ಆವಿಷ್ಕಾರಗಳನ್ನು ನಿರ್ವಹಿಸುತ್ತವೆ ಎಂದು ಖಾತ್ರಿಯಿದೆ ಎಂದು ಹೇಳಿದರು.

ಎಂಸಿ ಮತ್ತು ಐಐಟಿ ಮಂಡಿ ಅಧ್ಯಾಪಕರ ಅಧಿಕಾರಿಗಳು ಪರಸ್ಪರ ಭೇಟಿ ನೀಡುವ ಮೂಲಕ ಸಹಕಾರಿ ಯೋಜನೆಗಳ ಕುರಿತು ಚರ್ಚೆ ನಡೆಸುವುದು ಮತ್ತು ಜಂಟಿ ಬುದ್ದಿಮತ್ತೆ ಸೆಷನ್‌ಗಳು ಮತ್ತು ಕಾರ್ಯಾಗಾರಗಳನ್ನು ನಡೆಸುವುದು ಮುಂತಾದ ಚಟುವಟಿಕೆಗಳನ್ನು ಎಂಒಯು ಒಳಗೊಂಡಿದೆ ಎಂದು ಐಐಟಿ ಹೊರಡಿಸಿದ ಹೇಳಿಕೆ ತಿಳಿಸಿದೆ. ಈ ಸಹಯೋಗವು ತಂತ್ರಜ್ಞಾನದ ಅಭಿವೃದ್ಧಿಯನ್ನು ಸಹ ಸುಗಮಗೊಳಿಸುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮಂಡಿಯು 2009 ರಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಸ್ಥಾಪಿಸಿದ ಎಂಟು ಹೊಸ ಐಐಟಿಗಳಲ್ಲಿ ಒಂದಾಗಿದೆ. ಈ ಸ್ವಾಯತ್ತ ಸಂಸ್ಥೆಯು ಮಂಡಿಯ ಕಮಂದ್‌ನಲ್ಲಿದೆ ಮತ್ತು ಇದು 538 ಎಕರೆ ಪ್ರದೇಶದಲ್ಲಿ ಹರಡಿದೆ. ಐಐಟಿ ಮಂಡಿಯು ಸ್ಕೂಲ್ ಆಫ್ ಕಂಪ್ಯೂಟಿಂಗ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಸ್ಕೂಲ್ ಆಫ್ ಬೇಸಿಕ್ ಸೈನ್ಸಸ್, ಸ್ಕೂಲ್ ಆಫ್ ಇಂಜಿನಿಯರಿಂಗ್, ಮತ್ತು ಸ್ಕೂಲ್ ಆಫ್ ಹ್ಯುಮಾನಿಟೀಸ್ ಮತ್ತು ಸೋಷಿಯಲ್ ಸೈನ್ಸಸ್ ಸೇರಿದಂತೆ ನಾಲ್ಕು ವಿಭಾಗಗಳನ್ನು ಹೊಂದಿದೆ. ಸಂಸ್ಥೆಯು ಪದವಿಪೂರ್ವ, ಸ್ನಾತಕೋತ್ತರ, ಡಾಕ್ಟರೇಟ್ ಮತ್ತು ಸಮಗ್ರ ಕಾರ್ಯಕ್ರಮಗಳನ್ನು ಒದಗಿಸುತ್ತದೆ. ಕೋರ್ಸ್‌ಗಳಲ್ಲಿ ಬಿಟೆಕ್, ಎಂಟೆಕ್, ಎಂಎ, ಎಂಎಸ್‌ಸಿ, ಪಿಎಚ್‌ಡಿ, ಇಂಟಿಗ್ರೇಟೆಡ್ ಪಿಎಚ್‌ಡಿ, ಬಿಟೆಕ್, ಎಂಟೆಕ್ ಇಂಟಿಗ್ರೇಟೆಡ್ ಡ್ಯುಯಲ್ ಪದವಿ, ಇತ್ಯಾದಿ ಶೈಕ್ಷಣಿಕ ಕಾರ್ಯಕ್ರಮಗಳಿವೆ.

ಇದನ್ನೂ ಓದಿ: ನಿಮಗೆ ಮಕ್ಕಳುಗಿಕ್ಕಳು ಇಲ್ಲವೇ? : ಐಐಟಿ ಖರಗ್‌ಪುರದ ನಿರ್ದೇಶಕರಿಗೆ ಕೋರ್ಟ್​ ತರಾಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.