ETV Bharat / bharat

ನೀವಿಲ್ಲದೇ ನಾನಿಲ್ಲ... ಕಾಲಿವುಡ್​ ನಟ ಸಿಂಬು ಅಭಿಮಾನಿಗಳಿಗೆ ಹೃದಯಸ್ಪರ್ಶಿ ಧನ್ಯವಾದ

author img

By

Published : Dec 13, 2021, 3:47 PM IST

I am not without you
ಕಾಲಿವುಡ್​ ನಟ ಸಿಂಬು

ಜ್ವರದಿಂದ ಬಳಲುತ್ತಿದ್ದ ಕಾಲಿವುಡ್​ ನಟ ಸಿಂಬು(ಸಿಲಂಬರಸನ್​) ಇದೀಗ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ವೇಳೆ, ತಾವು ಆಸ್ಪತ್ರೆಯಲ್ಲಿದ್ದಾಗ ಗುಣಮುಖರಾಗಲು ಪ್ರಾರ್ಥಿಸಿದ ತಮ್ಮ ಅಭಿಮಾನಿಗಳಿಗೆ ನೀವಿಲ್ಲದೇ ನಾನಿಲ್ಲ ಎಂದು ಹೇಳಿ ಧನ್ಯವಾದ ಹೇಳಿದ್ದಾರೆ.

ಹೈದರಾಬಾದ್​: ಜ್ವರದಿಂದ ಬಳಲುತ್ತಿದ್ದ ಕಾಲಿವುಡ್​ ನಟ ಸಿಂಬು(ಸಿಲಂಬರಸನ್​) ಇದೀಗ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ವೇಳೆ ತಾವು ಆಸ್ಪತ್ರೆಯಲ್ಲಿದ್ದಾಗ ಗುಣಮುಖರಾಗಲು ಪ್ರಾರ್ಥಿಸಿದ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಮೊನ್ನೆಯಷ್ಟೇ ನಟ ಸಿಂಬು ಅವರು ತೀವ್ರ ಜ್ವರದಿಂದಾಗಿ ಖಾಸಗಿ ಆಸ್ಪತ್ರೆಗೆ ದಿಢೀರ್​ ದಾಖಲಾಗಿದ್ದರು. ಸಿಂಬು ಸ್ನೇಹಿತ ಹಾಗೂ ನಟರಾದ ಮಹತ್​ ಆಸ್ಪತ್ರೆಗೆ ದಾಖಲಾದ ಬಗ್ಗೆ ಮಾಹಿತಿ ನೀಡಿದ್ದರು. ಈ ವೇಳೆ, ಸಿಂಬು ಶೀಘ್ರ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು, ಹಿತೈಷಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಾರ್ಥಿಸಿದ್ದರು.

ಇದನ್ನೂ ಓದಿ: ಇದೇ 17ಕ್ಕೆ ಒಟಿಟಿಯಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿನಯದ ಕನ್ನಡಿಗ ರಿಲೀಸ್‌

ನಟ ಸಿಂಬು ಅವರು ಇಂದು ಜ್ವರದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತಮಗಾಗಿ ಪ್ರಾರ್ಥಿಸಿದ ಎಲ್ಲಾ ಅಭಿಮಾನಿಗಳಿಗೆ ಟ್ವಿಟರ್​ನಲ್ಲಿ ಧನ್ಯವಾದ ಹೇಳಿದ್ದಲ್ಲದೇ , ನಾನೀಗ ಮನೆಗೆ ಬಂದಿದ್ದೇನೆ. 'ನೀವಿಲ್ಲದೇ ನಾನಿಲ್ಲ' ಎಂದು ಹೃದಯಸ್ಪರ್ಶಿ ಸಾಲುಗಳನ್ನು ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.