ETV Bharat / bharat

ಇವ್ರನ್ನ ನೋಡಿ ಕಲಿಬೇಕು.. ಮುಸ್ಲಿಂ ಹಿಜಾಬ್- ಹಿಂದು ದುಪಟ್ಟಾ ಒಂದಾಗಿ ಫುಟ್ಬಾಲ್ ಆಡ್ತಾ.. ಒಟ್ಟಾಗೇ ಎಲ್ಲ ಹಬ್ಬ ಆಚರಿಸ್ತಾರೆ..

author img

By

Published : Feb 16, 2022, 3:53 PM IST

Updated : Feb 16, 2022, 5:16 PM IST

Women's football match wearing hijab and dupatta
Hiಹಿಜಾಬ್ ಮತ್ತು ದುಪಟ್ಟಾ ಧರಿಸಿ ಫುಟ್ಬಾಲ್ ಆಡಿದ ಹುಡುಗಿಯರು ndu-Muslim unity is being witnessed in Mumbra

ಎರಡೂ ಧರ್ಮಗಳ ಹುಡುಗಿಯರು ಯಾವುದೇ ಹಬ್ಬ-ಹರಿದಿನಗಳು ಬರಲಿ ಒಟ್ಟಾಗಿ ಆಚರಿಸುತ್ತಿದ್ದು, ಇದು ನಮ್ಮಲ್ಲಿ ಒಂದು ಅವಿನಾಭಾವ ಸಂಬಂಧ ಬೆಳೆಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ..

ಥಾಣೆ : ದೇಶಾದಾದ್ಯಂತ ಹಿಜಾಬ್ ವಿವಾದ ಭುಗಿಲೆದ್ದಿರುವ ನಡುವೆ ಇಲ್ಲೊಂದು ಕಡೆ ಹಿಂದು-ಮುಸ್ಲಿಂ ಬೇಧವಿಲ್ಲದೆ ಹುಡುಗಿಯರು ಒಟ್ಟಿಗೆ ಫುಟ್ಬಾಲ್ ಆಟ ಆಡುತ್ತಿದ್ದಾರೆ. ಈ ಘಟನೆಗೆ ಥಾಣೆಯ ಮುಂಬ್ರಾ ಸಾಕ್ಷಿಯಾಗಿದೆ.

ಕಳೆದ 5 ವರ್ಷಗಳಿಂದ ಹಿಂದು-ಮುಸ್ಲಿಂ ಬೇಧವಿಲ್ಲದೆ ಎಲ್ಲಾ ಧರ್ಮದ ಹುಡುಗಿಯರು ಒಟ್ಟಿಗೆ ಫುಟ್ಬಾಲ್ ಅಭ್ಯಾಸ ನಡೆಸುತ್ತಿದ್ದಾರೆ. ಇವರಿಗೆ ಹಿಜಾಬ್ ವಿವಾದ ಯಾವುದೇ ರೀತಿಯ ತೊಂದರೆ ಉಂಟು ಮಾಡಿಲ್ಲ. ಫುಟ್ಬಾಲ್ ಅಭ್ಯಾಸದ ವೇಳೆ ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸುತ್ತಿದ್ದು, ಹಿಂದು ಹುಡುಗಿಯರು ದುಪ್ಪಟ್ಟ ಧರಿಸಿ ಅಭ್ಯಾಸ ನಡೆಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಫುಟ್ಬಾಲ್ ಕೋಚ್ ಸಬಾ ಶೇಖ್, ಎರಡು ಧರ್ಮಗಳ ಹುಡುಗಿಯರು ಪರಸ್ಪರ ಇತರ ಧರ್ಮಗಳನ್ನು ಗೌರವಿಸುತ್ತಿದ್ದಾರೆ. ಹಾಗಾಗಿ, ಯಾವುದೇ ವಿವಾದ ಎದುರಾಗಿಲ್ಲ.

ಎರಡೂ ಧರ್ಮಗಳ ಹುಡುಗಿಯರು ಯಾವುದೇ ಹಬ್ಬ-ಹರಿದಿನಗಳು ಬರಲಿ ಒಟ್ಟಾಗಿ ಆಚರಿಸುತ್ತಿದ್ದು, ಇದು ನಮ್ಮಲ್ಲಿ ಒಂದು ಅವಿನಾಭಾವ ಸಂಬಂಧ ಬೆಳೆಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ : ಕಾರು-ಟ್ರಕ್​ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ 6 ಮಂದಿ ದುರ್ಮರಣ

Last Updated :Feb 16, 2022, 5:16 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.