ETV Bharat / bharat

ಮಿಕಾಸಿಂಗ್​ ಕಿಸ್​ ಪ್ರಕರಣ: ಅಫಿಡವಿಟ್​ ಸಲ್ಲಿಸುವಂತೆ ರಾಖಿ ಸಾವಂತ್​ಗೆ ಹೈಕೋರ್ಟ್​ ಸೂಚನೆ

author img

By

Published : Apr 11, 2023, 12:05 PM IST

Updated : Apr 11, 2023, 12:20 PM IST

ಮಿಕಾ ಸಿಂಗ್​ ಪ್ರಕರಣದಲ್ಲಿ ನಟಿ ರಾಖಿ ಸಾವಂತ್‌ಗೆ ಅಫಿಡವಿಟ್ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ಸೂಚಿಸಿದೆ.

ಮಿಕಾಸಿಂಗ್​ ಕಿಸ್​ ಪ್ರಕರಣ
ಮಿಕಾಸಿಂಗ್​ ಕಿಸ್​ ಪ್ರಕರಣ

ಮುಂಬೈ: ನಟಿ ರಾಖಿ ಸಾವಂತ್​ಗೆ ಚುಂಬಿಸಿದ ಘಟನೆಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದು ಪಡಿಸುವಂತೆ ಕೋರಿ ಗಾಯಕ ಮಿಕಾ ಸಿಂಗ್​​ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ​ಈ ಸಂಬಂಧ ಸೋಮವಾರ ನ್ಯಾಯಮೂರ್ತಿಗಳಾದ ಗಡ್ಕರಿ ಮತ್ತು ನಾಯಕ್ ಅವರಿದ್ದ ದ್ವಿಸದಸ್ಯ ಪೀಠ ಅರ್ಜಿ ವಿಚಾರಣೆ ನಡಸಿದ್ದು, ಈ ಪ್ರಕರಣದಲ್ಲಿ ನಟಿ ರಾಖಿ ಸಾವಂತ್​ಗೆ ಅಫಿಡವಿಟ್ ಸಲ್ಲಿಸುವಂತೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2006ರಲ್ಲಿ ಮಿಕಾ ಸಿಂಗ್ ಅವರ ತಮ್ಮ ಹುಟ್ಟುಹಬ್ಬದ ನಿಮಿತ್ತ ಸ್ನೇಹಿತರು ಸೇರಿದಂತೆ ನಟ - ನಟಿಯರನ್ನು ಪಾರ್ಟಿಗೆ ಆಹ್ವಾನಿಸಿದ್ದರು. ಪಾರ್ಟಿಯು ಭರದಿಂದ ಸಾಗುತ್ತಿತ್ತು. ಕೇಕ್ ಕತ್ತರಿಸುವ ವೇಳೆ ಗಾಯಕ ಮಿಕಾ ಸಿಂಗ್​ ಬಲವಂತವಾಗಿ ರಾಖಿ ಸಾವಂತ ಅವರ ತುಟಿಗಳಿಗೆ ಚುಂಬಿಸಿದ್ದರು ಎಂದು ನಟಿ ಆರೋಪ ಮಾಡಿದ್ದರು. ಅಲ್ಲದೇ ಇದರಿಂದ ಕೋಪಗೊಂಡ ರಾಖಿ ಸಾವಂತ್ ಪೊಲೀಸ್ ಠಾಣೆಗೆ ತೆರಳಿ ಮಿಕಾ ಸಿಂಗ್ ​ವಿರುದ್ಧ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಇದೀಗಾ ಮಿಕಾ ಸಿಂಗ್​ 17 ವರ್ಷಗಳ ಹಿಂದೆ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಮಾಡುವಂತೆ ವಿಶೇಷ ಮನವಿಯೊಂದಿಗೆ ಮುಂಬೈ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು.

ಇದೇ ವೇಳೆ, ಮಿಕಾ ಪರ ವಾದ ಮಂಡಿಸಿದ ವಕೀಲ ಫಲ್ಗುಣಿ ಬ್ರಹ್ಮಭಟ್, ಕಳೆದ 17 ವರ್ಷಗಳಿಂದ ಪ್ರಕರಣ ನನೆಗುದಿಗೆ ಬಿದ್ದಿದೆ. ಗಾಯಕನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಸದ್ಯ ಮಿಕಾ ಸಿಂಗ್ ಮತ್ತು ರಾಖಿ ಸಾವಂತ್ ಆ ಘಟನೆಯನ್ನು ಮರೆತು ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದೂ ಕೂಡ ಅವರು ನ್ಯಾಯ ಪೀಠದ ಗಮನಕ್ಕೆ ತಂದರು. ಮಿಕಾ ಸಿಂಗ್ ಪರ ವಕೀಲರ ವಾದವನ್ನು ಆಲಿಸಿದ ಹೈಕೋರ್ಟ್, ಮುಂದಿನ ವಿಚಾರಣೆಯೊಳಗೆ ರಾಖಿ ಸಾವಂತ್​ಗೆ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ.

ಇದನ್ನೂ ಓದಿ: ಆದಿಲ್‌ಗೆ 5 ದಿನ ಪೊಲೀಸ್ ಕಸ್ಟಡಿ: ಪತ್ನಿ ರಾಖಿಯಿಂದ ಆರೋಪಗಳ ಸುರಿಮಳೆ, ಕಣ್ಣೀರು

ಇನ್ನೊಂದು ಕಡೆ ಬಿಟೌನ್​ನ ವಿವಾದಿತ ನಟಿ ಎಂದೆ ಗುರುತಿಸಿಕೊಂಡಿರುವ ರಾಖಿ ಸಾವಂತ್​ ಸದಾ ಒಂದಲ್ಲ ಒಂದು ವಿಷಯದಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆನ ದಿನಗಳಲ್ಲಿ ಮದುವೆ ವಿಚಾರವಾಗಿಯೂ ನಟಿ ರಾಖಿ ಸಾವಂತ್​ ಸಖತ್​ ಸುದ್ದಿಯಲ್ಲಿದ್ದರು. ಕೆಲ ದಿನಗಗಳ ಹಿಂದೆ ನಟಿ ರಾಖಿ ಮೈಸೂರು ಮೂಲದ ಆದಿಲ್​ ಎಂಬುವವರನ್ನು ಮದುವೆಯಾಗಿದ್ದರು. ಮದುವೆಯಾದ ಕೆಲವೆ ದಿನಗಳಲ್ಲಿ ದಂಪತಿಗಳ ಸಂಬಂಧದಲ್ಲಿ ಬಿರುಕು ಮೂಡಿ ಪತಿ ಆದಿಲ್​ ವಿರುದ್ಧ ರಾಖಿ ಸಾವಂತ್​ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.

ದೂರಿನ ಮೇರೆಗೆ ರಾಖಿ ಸಾವಂತ್ ಅವರ ಪತಿ ಆದಿಲ್​ನನ್ನು ಅರೆಸ್ಟ್ ಮಾಡಲಾಗಿತ್ತು. ತನ್ನ ತಾಯಿ ಜಯಾ ಭೇದಾ ಅವರ ಚಿಕಿತ್ಸೆಗಾಗಿ ಪತಿ ಆದಿಲ್​ಗೆ 10 ಲಕ್ಷ ರೂಪಾಯಿ ನೀಡಿದ್ದು, ಆದರೆ, ಆದಿಲ್​ ತನ್ನ ತಾಯಿಗೆ ಚಿಕಿತ್ಸೆ ಕೊಡಿಸಿಲ್ಲ ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ಪತಿ ಆದಿಲ್​ ನಿಂದೇ ತನ್ನ ತಾಯಿ ಸಾವನ್ನಪ್ಪಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದರು. ಸಧ್ಯ ಇದೇ ವಿಚಾರವಾಗಿ ನಟಿ ಸುದ್ದಿಯಲ್ಲಿದ್ದು, ಈ ಪ್ರಕರಣದ ವಿಚಾರಣೆ ಕೂಡಾ ನಡೆಯುತ್ತಿದೆ.

ಇದನ್ನೂ ಓದಿ: ಪತಿ ವಿರುದ್ಧ ದೂರು ಕೊಟ್ಟ ನಟಿ ರಾಖಿ ಸಾವಂತ್: ಆದಿಲ್ ಖಾನ್ ಅರೆಸ್ಟ್!

Last Updated :Apr 11, 2023, 12:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.