ETV Bharat / bharat

ಶಾಸಕರ ಖರೀದಿ ಆರೋಪ ಪ್ರಕರಣ ಸಿಬಿಐಗೆ ವಹಿಸುವಂತೆ ಕೋರಿದ ಅರ್ಜಿ: ಮುಂದುವರಿದ ವಿಚಾರಣೆ

author img

By

Published : Dec 1, 2022, 7:34 PM IST

ಶಾಸಕರ ಖರೀದಿ ಆರೋಪ ಪ್ರಕರಣ ಸಿಬಿಐಗೆ ವಹಿಸುವಂತೆ ಕೋರಿದ ಅರ್ಜಿ: ಮುಂದುವರಿದ ವಿಚಾರಣೆ
heated-arguments-in-telangana-hc-over-plea-demanding-handing-over-mla-poaching-case-to-cbi

ಸರ್ಕಾರದ ಪರ ಹಿರಿಯ ವಕೀಲ ದುಶ್ಯಂತ್ ದವೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖಾ ವರದಿಯನ್ನು ಮುಂದಿರಿಸಿ ವಾದ ಮಂಡಿಸಿದರು. ಆರೋಪಿಗಳ ಪರವಾಗಿ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ವಾದ ಮಂಡಿಸಿದರು. ರಾಜ್ಯ ಸರ್ಕಾರವನ್ನು ಉರುಳಿಸುವ ಷಡ್ಯಂತ್ರವಿದೆ ಎಂದು ದವೆ ಹೇಳಿದರು. ಇದಕ್ಕೆ ಆರೋಪಿಗಳ ಪರ ವಕೀಲರು 104 ಶಾಸಕರ ಬಹುಮತವಿರುವಾಗ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಹೈದರಾಬಾದ್: ಟಿಆರ್‌ಎಸ್ ಶಾಸಕರಿಗೆ ಆಮಿಷವೊಡ್ಡಿರುವ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ವಿಚಾರವಾಗಿ ತೆಲಂಗಾಣ ಹೈಕೋರ್ಟ್‌ನಲ್ಲಿ ಬುಧವಾರ ಬಿಸಿಬಿಸಿ ವಾದಗಳು ಮುಂದುವರಿದವು. ಆರೋಪಿಗಳಾದ ರಾಮಚಂದ್ರ ಭಾರತಿ, ನಂದಕುಮಾರ್, ಬಿಜೆಪಿ ಪರವಾಗಿ ಸಿಂಹಯಾಜಿ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ಪ್ರೇಮೇಂದ್ರ ರೆಡ್ಡಿ ಅವರು ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಬಿ.ವಿಜಯಸೇನ್ ರೆಡ್ಡಿ ಅವರು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು.

ಸರ್ಕಾರದ ಪರ ಹಿರಿಯ ವಕೀಲ ದುಶ್ಯಂತ್ ದವೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖಾ ವರದಿಯನ್ನು ಮುಂದಿರಿಸಿ ವಾದ ಮಂಡಿಸಿದರು. ಆರೋಪಿಗಳ ಪರವಾಗಿ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ವಾದ ಮಂಡಿಸಿದರು. ರಾಜ್ಯ ಸರ್ಕಾರವನ್ನು ಉರುಳಿಸುವ ಷಡ್ಯಂತ್ರವಿದೆ ಎಂದು ದವೆ ಹೇಳಿದರು. ಇದಕ್ಕೆ ಆರೋಪಿಗಳ ಪರ ವಕೀಲರು 104 ಶಾಸಕರ ಬಹುಮತವಿರುವಾಗ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಪ್ರಾದೇಶಿಕ ಪಕ್ಷಗಳನ್ನು ನಾಶಪಡಿಸುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ದವೆ ಹೇಳಿದರು. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದೆ ಎಂದ ಅವರು "ಪ್ರಾದೇಶಿಕ ಪಕ್ಷಗಳನ್ನು ಗುರಿಯಾಗಿಸಿಕೊಂಡು ಅವು ಅಸ್ತಿತ್ವದಲ್ಲಿಲ್ಲದಂತೆ ಮಾಡುತ್ತಾರೆ" ಎಂದು ಹೇಳಿದರು. “ನಾವು ರಾಜ್ಯಗಳ ಒಕ್ಕೂಟ. ರಾಷ್ಟ್ರೀಯ ಪಕ್ಷದ ಜತೆಗೆ ಪ್ರಾದೇಶಿಕ ಪಕ್ಷಗಳೂ ಇವೆ. ಅವರಿಗೆ ಅವರ ಹಕ್ಕುಗಳಿವೆ. ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಪ್ರಾದೇಶಿಕ ಪಕ್ಷಗಳು ಹೋರಾಡುತ್ತವೆ. ಪ್ರಾದೇಶಿಕ ಪಕ್ಷಗಳ ವಿಘಟನೆ ಒಕ್ಕೂಟ ವ್ಯವಸ್ಥೆಗೆ ಮಾಡಿದ ಅವಮಾನ'' ಎಂದರು.

ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಅರ್ಜಿಯನ್ನು ವಜಾಗೊಳಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ ದವೆ, "ಎಷ್ಟು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳನ್ನು ಉರುಳಿಸಿದೆ ಎಂಬುದನ್ನು ಪರಿಗಣಿಸಿ" ಎಂದು ನ್ಯಾಯಾಲಯವನ್ನು ಒತ್ತಾಯಿಸಿದರು. “ಸರ್ಕಾರಗಳನ್ನು ಉರುಳಿಸಲು 20 ರಿಂದ 30 ಶಾಸಕರನ್ನು ಚಾರ್ಟರ್ಡ್ ಫ್ಲೈಟ್‌ಗಳಲ್ಲಿ ಕರೆದೊಯ್ದು ಸ್ಟಾರ್ ಹೋಟೆಲ್‌ಗಳಲ್ಲಿ ಇರಿಸಲಾಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗೋವಾದಲ್ಲಿ ಪಕ್ಷಗಳು ಬಹುಮತ ಹೊಂದಿದ್ದರೂ ಸರ್ಕಾರಗಳು ಪತನಗೊಂಡವು ಎಂದು ವಿವರಿಸಿದರು.

ಮಹಾರಾಷ್ಟ್ರ ಮತ್ತು ದೆಹಲಿಯ ಉದಾಹರಣೆಗಳನ್ನು ಉಲ್ಲೇಖಿಸಿ ಸಿಬಿಐ ಮತ್ತು ಇಡಿ ವಿರೋಧ ಪಕ್ಷಗಳಿಗೆ ಸೇರಿದವರನ್ನು ಬಂಧಿಸುತ್ತಿವೆ ಎಂದು ಅವರು ಹೇಳಿದರು. “ಪತ್ರಿಕಾರಂಗ ಮೌನವಾಗಿದೆ. ಈಗ ನ್ಯಾಯಾಲಯಗಳು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು. ಸರ್ಕಾರ ಉರುಳಿಸುವವರ ವಿರುದ್ಧ ಪ್ರಕರಣ ದಾಖಲಿಸಿದರೆ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ' ಎಂದು ವಾದಿಸಿದರು.

ತೆಲಂಗಾಣ ಶಾಸಕರ ಖರೀದಿ ಯತ್ನದ ಪ್ರಕರಣದ ಎಸ್‌ಐಟಿ ತನಿಖೆ ಯಾವುದೇ ಪ್ರಭಾವವಿಲ್ಲದೆ ಚೆನ್ನಾಗಿ ನಡೆಯುತ್ತಿದೆ ಎಂದು ದವೆ ಹೇಳಿದರು. ಆರೋಪಿಗಳ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ಅರ್ಜಿದಾರರಾದ ರಾಮಚಂದ್ರ ಭಾರತಿ, ನಂದಕುಮಾರ್ ಮತ್ತು ಸಿಂಹಯಾಜಿ ಅವರು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಮತ್ತು ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.