ETV Bharat / bharat

ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಬಿಪರ್​ಜಾಯ್​.. ಜಾನುವಾರುಗಳನ್ನು ರಕ್ಷಿಸಲು ತೆರಳಿದ್ದ ತಂದೆ - ಮಗ ಸಾವು.. ಹಲವರಿಗೆ ಗಾಯ

author img

By

Published : Jun 16, 2023, 7:26 AM IST

Updated : Jun 16, 2023, 8:03 AM IST

Father and son died while trying to save livestock  flashflood as cyclone brings rain  cyclone Biparjoy brought heavy rains  Father and Son Died  ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಬಿಪರ್​ಜಾಯ್  ಜಾನುವಾರುಗಳನ್ನು ರಕ್ಷಿಸಲು ತೆರಳಿದ್ದ ತಂದೆ ಮಗ ಸಾವು  ಗುಜರಾತ್​ ರಾಜ್ಯಕ್ಕೆ ಅಪ್ಪಳಿಸಿದ ಚಂಡಮಾರುತ ಬಿಪರ್​ಜಾಯ್  ತಂದೆ ಮಗ ಇಬ್ಬರೂ ಸಾವನ್ನಪ್ಪಿರುವ ಘಟನೆ  ಭಾವನಗರ ಜಿಲ್ಲೆಯಾದ್ಯಂತ ನಿನ್ನೆ ಭಾರಿ ಮಳೆ  ಮಳೆಯಿಂದ ತುಂಬಿ ಹರಿಯುತ್ತಿದ್ದ ಕಾಲುವೆ  ಕಾಲುವೆಗೆ ಹಾರಿದ ಇಬ್ಬರು ಆಯಾಸದಿಂದ ಮೃತ
ಜಾನುವಾರುಗಳನ್ನು ರಕ್ಷಿಸಲು ತೆರಳಿದ್ದ ತಂದೆ-ಮಗ ಸಾವು

Father and Son Died: ಗುಜರಾತ್​ ರಾಜ್ಯಕ್ಕೆ ಅಪ್ಪಳಿಸಿದ ಚಂಡಮಾರುತ ಬಿಪರ್​ಜಾಯ್​ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಚಂಡಮಾರುತದ ಮಳೆಗೆ ಜಾನುವಾರುಗಳನ್ನು ಪ್ರವಾಹದಿಂದ ರಕ್ಷಿಸಲು ಪ್ರಯತ್ನಿಸುತ್ತಿದ್ದ ತಂದೆ - ಮಗ ಇಬ್ಬರೂ ಸಾವನ್ನಪ್ಪಿರುವ ಘಟನೆ ಗುಜರಾತ್​ನ ಭಾವನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. 22 ಜನ ಗಾಯಗೊಂಡಿದ್ದಾರೆ. 940 ಹಳ್ಳಿಗಳಿಗೆ ಭಾರಿ ಹಾನಿಯಾಗಿದ್ದು, ಕರೆಂಟ್ ಇಲ್ಲದೇ ಒದ್ದಾಡುತ್ತಿವೆ.

ಜಾನುವಾರುಗಳನ್ನು ರಕ್ಷಿಸಲು ತೆರಳಿದ್ದ ತಂದೆ-ಮಗ ಸಾವು

ಭಾವನಗರ, ಗುಜರಾತ್​: ಬಿಪರ್‌ಜಾಯ್ ಚಂಡಮಾರುತದಿಂದ ಭಾವನಗರ ನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಗುರುವಾರ ಮುಂಜಾನೆ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ವೇಳೆಗೆ ಸುರಿದ ಭಾರಿ ಮಳೆಗೆ ತಂದೆ-ಮಗ (Father and Son Died) ಸೇರಿದಂತೆ 20ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿದ ಪ್ರಕರಣಗಳು ವರದಿ ಆಗಿವೆ. 22ಕ್ಕೆ ಹೆಚ್ಚು ಜನ ಗಾಯಗೊಂಡಿರುವ ವರದಿ ಆಗಿದೆ. ಇನ್ನು 940 ಕ್ಕೂ ಹೆಚ್ಚು ಹಳ್ಳಿಗಳು ಕರೆಂಟ್​ ಇಲ್ಲದೇ ಕತ್ತಲಲ್ಲಿ ಮುಳುಗಿವೆ. ಅಷ್ಟೇ ಅಲ್ಲ ಭಾವನಗರ ನಗರದಲ್ಲಿ ಪ್ರತಿ ತಗ್ಗು ಪ್ರದೇಶ ಜಲಾವೃತಗೊಂಡಿದ್ದವು. ಚಂಡಮಾರುತದ ಪರಿಣಾಮ ರಾಜ್ಯದ ವಿವಿಧ ಭಾಗಗಳಲ್ಲಿ ಸಂಪೂರ್ಣ ಪರಿಸ್ಥಿತಿ ಭೀಕರವಾಗಿತ್ತು.

ಜಾನುವಾರುಗಳನ್ನು ಕಾಪಾಡುವ ಭರದಲ್ಲಿ ತಂದೆ-ಮಗ ಸಾವು!: ಭಾವನಗರ ಜಿಲ್ಲೆಯಾದ್ಯಂತ ನಿನ್ನೆ ಭಾರಿ ಮಳೆ ಸುರಿದಿದೆ. ಜಿಲ್ಲೆಯ ಸಿಹೋರ್ ತಾಲೂಕಿನ ಭಂಡಾರ್ ಮತ್ತು ವಡೋದರ ಗ್ರಾಮದ ನಡುವಿನ ದಶರಥಭಾಯಿ ಅವರ ಜಮೀನಿನ ಬಳಿ ಹಾದು ಹೋಗುವ ಕಾಲುವೆ ತುಂಬಿ ಹರಿಯುತ್ತಿತ್ತು. ಮಳೆಯಿಂದ ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಆಡು ಮತ್ತು ಕುರಿಗಳು ಸಿಲುಕಿ ಕೊಂಡಿದ್ದವು. ಇದನ್ನು ಗಮನಿಸಿ ರಕ್ಷಿಸಲು ತೆರಳಿದ ಸೋದವಾಡರ ಗ್ರಾಮದ ನಿವಾಸಿಗಳಾದ ರಾಮ್‌ಜಿಭಾಯಿ ಮೇಘಾಭಾಯಿ ಪರ್ಮಾರ್ (55) ಮತ್ತು ಅವರ ಮಗ ರಾಕೇಶಭಾಯಿ ರಂಭಾಯ್ ಪರ್ಮಾರ್ (22) ಕಾಲುವೆಗೆ ಹಾರಿದ್ದಾರೆ.

ಕಾಲುವೆಗೆ ಹಾರಿದ ಇಬ್ಬರು ಆಯಾಸದಿಂದ ಮೃತಪಟ್ಟಿರಬಹುದೆಂದು ಅನುಮಾನಿಸಲಾಗಿದೆ. ಬಳಿಕ ಈ ವಿಷಯ ಗ್ರಾಮಸ್ಥರಿಗೆ ತಿಳಿದಿದೆ. ಕೂಡಲೇ ಗ್ರಾಮಸ್ಥರು ಕಾಲುವೆ ಬಳಿ ತೆರಳಿ ಕಾಲುವೆಯಿಂದ ತಂದೆ-ಮಗನ ಶವವನ್ನು ಹೊರತೆಗೆದಿದ್ದಾರೆ. ಅಷ್ಟೇ ಅವರ ಜತೆಗೆ 22 ಕುರಿ, ಮೇಕೆಗಳೂ ಸಾವನ್ನಪ್ಪಿದ್ದು, ಅವುಗಳನ್ನು ಸಹ ಕಾಲುವೆಯಿಂದ ಹೊರ ತೆಗೆದಿದ್ದಾರೆ. ಬಳಿಕ ಈ ಮಾಹಿತಿಯನ್ನು ಗ್ರಾಮಸ್ಥರು ಪೊಲೀಸರಿಗೆ ಮತ್ತು ಜಿಲ್ಲಾಡಳಿತಕ್ಕೆ ತಿಳಿಸಿದರು. ಈ ಬಗ್ಗೆ ಕಂದಾಯ ಅಧಿಕಾರಿ ಎಸ್.ಎನ್. ವಾಲಾ ಅವರು ಖಚಿತ ಪಡಿಸಿದರು.

ಮಳೆಯಿಂದ ಆಸ್ತಿ-ಪಾಸ್ತಿ ನಷ್ಟ!: ಬಿಪರ್‌ಜಾಯ್‌ ಚಂಡಮಾರುತದಿಂದ ಭಾವನಗರ ನಗರ ಜಿಲ್ಲೆಯಲ್ಲಿ ಮಧ್ಯಾಹ್ನ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಶೀಟ್​ಗಳ ಛಾವಣಿ ಹಾರಿ ಹೋಗಿವೆ. ನಗರದಲ್ಲಿ ಅಲ್ಲಲ್ಲಿ ರಸ್ತೆಗಳ ಮೇಲೆ ಮರಗಳು ಉರುಳಿ ಬಿದ್ದಿವೆ. ಕೆಲ ಮನೆಗಳಿಗೂ ಹಾನಿ ಆಗಿವೆ. ಭಾರಿ ಮಳೆ ಹಿನ್ನೆಲೆ ಕಾಲುವೆಗಳು ತುಂಬಿ ಹರಿಯುತ್ತಿದ್ದು, ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮೋತಿ ಕೆರೆ, ಕುಂಬಾರವಾಡ, ಸ್ಟೇಷನ್ ರಸ್ತೆ ಮುಂತಾದೆಡೆ ಮಳೆ ನೀರು ತುಂಬಿ ಅವಾಂತರ ಸೃಷ್ಟಿಯಾಗಿವೆ. ಮಳೆಯಿಂದಾಗಿ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿದ್ದವು. ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಎಲ್ಲಿ, ಎಷ್ಟು ಮಳೆ: ಭಾವನಗರ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣದಲ್ಲಿ ಮಳೆ ಸುರಿಯಲಾರಂಭಿಸಿತ್ತು. ಜಿಲ್ಲೆಯ ಹತ್ತು ತಾಲೂಕುಗಳಲ್ಲಿ ಸುರಿದ ಮಳೆಗೆ ಸಂಬಂಧಿಸಿದಂತೆ ಜೂ.15ರ ಪರಿಸ್ಥಿತಿ ಅವಲೋಕಿಸಿದರೆ, ವಲಭಿಪುರ 6 MM, ಉಮ್ರಾಲಾ 0 MM, ಭಾವನಗರ 45 MM, ಸಿಹೋರೆ 17MM, ಗರಿಯಾಧರ್ 15MM, ಪಲಿಟಾನಾ 18 MM, ತಲಜಾ 5 MM, ಮಹುವ 6 MM ಮತ್ತು ಜೆಸ್ಸಾರ್ 8 MM ಸೇರಿ ಇಡೀ ಜಿಲ್ಲೆಯ ಒಟ್ಟು 14 MM ಮಳೆಯಾಗಿದ್ದು, ಹಲವು ನದಿಗಳು, ಕೆರೆಗಳು ತುಂಬಿ ಹರಿಯುತ್ತಿವೆ.

ಕಚ್ ಜಿಲ್ಲಾಧಿಕಾರಿ ಹೇಳಿದ್ದು ಹೀಗೆ..: ಚಂಡಮಾರುತದಿಂದಾಗಿ ಕಚ್ ಜಿಲ್ಲೆ ಹೆಚ್ಚು ಪೀಡಿತ ಪ್ರದೇಶವಾಗಿದ್ದು, ಇದುವರೆಗೆ ಯಾವುದೇ ಸಾವಿನ ವರದಿಗಳು ಆಗಿಲ್ಲ. ಮುಂಚಿತವಾಗಿ ನಡೆಸಿದ ಸಾಮೂಹಿಕ ಸ್ಥಳಾಂತರಿಸುವಿಕೆಗೆ ಧನ್ಯವಾದಗಳು ಸಲ್ಲಿಸುತ್ತೇನೆ. ಚಂಡಮಾರುತಕ್ಕೆ ಸಂಬಂಧಿಸಿದ ಯಾವುದೇ ಅಹಿತಕರ ಘಟನೆಗಳು ಕಚ್‌ನಲ್ಲಿ ಸಂಭವಿಸಲ್ಲ. ಆದ್ರೆ ಗಂಟೆಗೆ ಸುಮಾರು 80 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿರುವ ಗಾಳಿಯಿಂದಾಗಿ ಕೆಲವು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಸಮವಾಗಿವೆ ಎಂದು ಅವರು ಹೇಳಿದರು.

ಓದಿ: Cyclone Biparjoy: ಇಂದು ಸಂಜೆ ಗುಜರಾತ್​​ಗೆ ಅಪ್ಪಳಿಸಲಿದೆ ಚಂಡಮಾರುತ.. ವಿಕೋಪ ಎದುರಿಸಲು ರಕ್ಷಣಾಪಡೆ ಸನ್ನದ್ಧ!

Last Updated :Jun 16, 2023, 8:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.