ETV Bharat / bharat

ಬಾಂಗ್ಲಾ 50 ನೇ ಸುವರ್ಣ ಮಹೋತ್ಸವ: ಪರೇಡ್​ನಲ್ಲಿ ಗೌರವ ಅತಿಥಿಯಾಗಿ ರಾಷ್ಟ್ರಪತಿ ಭಾಗಿ

author img

By

Published : Dec 16, 2021, 6:58 PM IST

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಢಾಕಾದ ರಾಷ್ಟ್ರೀಯ ಪರೇಡ್ ಮೈದಾನದಲ್ಲಿ ನಡೆದ ವಿಜಯ ದಿನದ ಮೆರವಣಿಗೆಯಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು.

Guest Of Honour Prez Kovind Attends Victory Day Parade As Bangladesh
ಪರೇಡ್​ನಲ್ಲಿ ಗೌರವ ಅತಿಥಿಯಾಗಿ ರಾಷ್ಟ್ರಪತಿ ಭಾಗಿ

ಢಾಕಾ: ಪಾಕ್‌ ವಿರುದ್ಧದ ಯುದ್ಧದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ 50 ನೇ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಭಾಗಿಯಾಗಿದ್ದರು.

ಬಾಂಗ್ಲಾದೇಶದ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ಕೋವಿಂದ್ ಅವರು ಇಂದು ಢಾಕಾದ ರಾಷ್ಟ್ರೀಯ ಪರೇಡ್ ಮೈದಾನದಲ್ಲಿ ನಡೆದ ವಿಜಯ ದಿನದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರಪತಿ ಕೋವಿಂದ್ ಮತ್ತು ಅವರ ಪತ್ನಿ ಸವಿತಾ ಕೋವಿಂದ್ ಅವರನ್ನು ರಾಷ್ಟ್ರಪತಿ ಹಮೀದ್ ಮತ್ತು ಪ್ರಧಾನಿ ಹಸೀನಾ ಸ್ವಾಗತಿಸಿದರು.

  • President Ram Nath Kovind attends Victory Day Parade at National Parade Ground in Dhaka. A 122 member tri-services contingent from Indian Armed Forces also participated in the Victory Day celebrations. pic.twitter.com/tpNlj9GwvV

    — President of India (@rashtrapatibhvn) December 16, 2021 " class="align-text-top noRightClick twitterSection" data=" ">

ಬಾಂಗ್ಲಾದೇಶದ ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ವಿದೇಶಿ ಸೈನಿಕರು ವಿಜಯ ದಿನದ ಸಮಾರಂಭದಲ್ಲಿ ಭಾಗವಹಿಸಿದ್ದರು. ಮಿಲಿಟರಿ ಬ್ಯಾಂಡ್ ಸೇರಿದಂತೆ 122 ಸದಸ್ಯರೊಂದಿಗೆ ಭಾರತೀಯ ಪಡೆ ಹಾಗೂ ಯುಎಸ್​​ ಮತ್ತು ಮೆಕ್ಸಿಕೋ ಮಿಲಿಟರಿ ಸೇನಾ ಪಡೆ ಪರೇಡ್​ನಲ್ಲಿ ಭಾಗಿಯಾಗಿದ್ದವು. ಬಾಂಗ್ಲಾದೇಶದ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಇತರ ಅರೆಸೇನಾ ಘಟಕಗಳು ಹಾಗೂ ಮಿಲಿಟರಿಯೇತರ ಮತ್ತು ಉಪಯುಕ್ತ ಸೇವೆಗಳು ಮತ್ತು ಸಚಿವಾಲಯಗಳ 23 ತುಕಡಿಗಳು ಪರೇಡ್​​ನಲ್ಲಿ ಪಾಲ್ಗೊಂಡಿದ್ದವು. ರಾಷ್ಟ್ರೀಯ ಪರೇಡ್ ಸ್ಕ್ವೇರ್‌ನಲ್ಲಿ ನಡೆದ ಸಮಾರಂಭದಲ್ಲಿ ಸಶಸ್ತ್ರ ಪಡೆಗಳು ಮಾರ್ಚ್​​​ ಪಾಸ್ಟ್ ಪ್ರದರ್ಶಿಸಿದವು.

ರಾಷ್ಟ್ರೀಯ ಪರೇಡ್ ಮೈದಾನದಲ್ಲಿ ನಡೆದ ಪರೇಡ್​ ಅನ್ನು ಬಾಂಗ್ಲಾದೇಶದ ಅಧ್ಯಕ್ಷ ಎಂ. ಅಬ್ದುಲ್ ಹಮೀದ್ ಮತ್ತು ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಸಚಿವರು, ರಾಜ ತಾಂತ್ರಿಕರು ವೀಕ್ಷಿಸಿದರು

ಇದಕ್ಕೂ ಮುನ್ನ ಅಧ್ಯಕ್ಷ ಹಮೀದ್ ಮತ್ತು ಪ್ರಧಾನಿ ಹಸೀನಾ ದಂಪತಿ ಸವರ್‌ನಲ್ಲಿರುವ ರಾಷ್ಟ್ರೀಯ ಸ್ಮಾರಕಕ್ಕೆ ಪುಷ್ಪಗುಚ್ಛಗಳನ್ನು ಇರಿಸುವ ಮೂಲಕ ವಿಮೋಚನಾ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಭೂತಾನ್ ನಂತರ 1971ರಲ್ಲಿ ಭಾರತ ಸ್ವತಂತ್ರಗೊಳಿಸಿದ ಎರಡನೇ ದೇಶ ಬಾಂಗ್ಲಾ. ಈ ದಿನ 1971 ರಲ್ಲಿ ಲೆಫ್ಟಿನೆಂಟ್ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ, 93,000 ಪಾಕಿಸ್ತಾನಿ ಪಡೆಗಳ ಮುಖ್ಯಸ್ಥರಾಗಿದ್ದರು. ಢಾಕಾದಲ್ಲಿ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ನೇತೃತ್ವದಲ್ಲಿ ಭಾರತೀಯ ಸೇನೆಗೆ ಶರಣಾದರು ಮತ್ತು ಪೂರ್ವ ಪಾಕಿಸ್ತಾನವನ್ನು ಹೊಸದಾಗಿ ಬಾಂಗ್ಲಾದೇಶ ಎಂದು ಘೋಷಿಸಲಾಯಿತು.

ಇದನ್ನೂ ಓದಿ: ವಿವಾಹವಾಗಬೇಕಿದ್ದ ರಾಷ್ಟ್ರೀಯ ಶೂಟರ್ ಕೊನಿಕಾ ಲಯಕೀಸ್ ಶವವಾಗಿ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.