ETV Bharat / bharat

ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿ ಬಳಿ ಹಿಮ ಚಿರತೆಯಿಂದ ಭರ್ಜರಿ ಬೇಟೆ

author img

By

Published : Feb 17, 2023, 5:31 PM IST

Snow leopard consumes its prey
ಹಿಮ ಚಿರತೆ

ಲಡಾಖ್‌ನ ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್‌ನ ಅಧ್ಯಕ್ಷ ರಾಹುಲ್ ಕೃಷ್ಣ ಅವರು ಅಪರೂಪದ ಫೋಟೋ ಸೆರೆ ಹಿಡಿದಿದ್ದಾರೆ.

ಲೇಹ್: ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿ ಬಳಿ ಹಿಮ ಚಿರತೆಯೊಂದು ಕಾಡು ಮೇಕೆಯನ್ನು ಬೇಟೆಯಾಡಿ ತಿನ್ನುತ್ತಿರುವುದು ಕಂಡುಬಂದಿದೆ. ಈ ದೃಶ್ಯವನ್ನು ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್‌ನ ಅಧ್ಯಕ್ಷರಾದ ರಾಹುಲ್ ಕೃಷ್ಣ ಕ್ಲಿಕ್ಕಿಸಿದ್ದಾರೆ.

ಈಟಿವಿ ಭಾರತ್‌ನೊಂದಿಗೆ ಮಾತನಾಡಿದ ರಾಹುಲ್ ಕೃಷ್ಣ, "ಫೇ ಗ್ರಾಮದಲ್ಲಿ ಹಿಮ ಚಿರತೆಯು ಕಾಡು ಮೇಕೆಯನ್ನು ತಿನ್ನುತ್ತಿರುವುದನ್ನು ನಾನು ಗಮನಿಸಿದೆ. ಈ ಗ್ರಾಮವು ಲೇಹ್‌ನಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ" ಎಂದು ತಿಳಿಸಿದರು. ''ಸಾಮಾನ್ಯ ಹಿಮ ಚಿರತೆಗಳು ತಮ್ಮ ಬೇಟೆಗಳನ್ನು ಹುಡಿಕಿಕೊಂಡು ಕಡಿದಾದ ಇಳಿಜಾರು ಪ್ರದೇಶಗಳಲ್ಲಿ ಅಲೆಯುತ್ತವೆ. ಈ ಪ್ರಾಣಿಯ ಚರ್ಮದ ಮೇಲೆ ದಪ್ಪವಾದ ಬೆಳ್ಳಿ ಮಿಶ್ರಿತ ಬೂದು ಬಣ್ಣದ ದಟ್ಟ ಕೂದಲು, ಮತ್ತು ಅದರ ಮೇಲೆ ಕಪ್ಪು ಚುಕ್ಕೆ ಇಟ್ಟಂತೆ ಕಾಣಿಸುತ್ತವೆ. ಈ ಹಿಮ ಚಿರತೆಗಳು ಕಲ್ಲಿನ ಹಾಗೂ ಹಿಮದಿಂದ ಆವೃತವಾದ ಪರ್ವತಗಳಲ್ಲಿ ಕಂಡುಬರುತ್ತವೆ. ಇವುಗಳು ಜನರ ಕಣ್ಣಿಗೆ ಬೀಳುವುದು ತುಂಬಾ ಅಪರೂಪ. ಬಹುತೇಕ ಅಗೋಚರದಂತಿರುತ್ತವೆ. ಅದಕ್ಕಾಗಿಯೇ ಈ ಹಿಮ ಚಿರತೆಗಳನ್ನು "ಪರ್ವತಗಳ ಭೂತ" ಎಂದು ಕರೆಯಲಾಗುತ್ತದೆ" ಎಂದು ಅವರು ವಿವರಿಸಿದರು.

"ಲಡಾಖ್ ಮತ್ತು ಟಿಬೆಟ್ ಪ್ರದೇಶಗಳಲ್ಲಿ ಮಾತ್ರ ಇವುಗಳು ಹೆಚ್ಚಾಗಿ ಕಂಡುಬರುತ್ತವೆ. ಅವುಗಳ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು" ಎಂದು ಅವರು ಒತ್ತಾಯಿಸಿದರು.

ಇದನ್ನೂ ಓದಿ: ತಾಜ್​ಮಹಲ್​ನಲ್ಲಿ ಉರುಸ್​ ಆಚರಣೆ ವಿರೋಧಿಸಿ ಶಿವ ಪಾರ್ವತಿ ವೇಷತೊಟ್ಟು ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.