ETV Bharat / bharat

ಶತಾಯುಷಿ ಅಜ್ಜನ ಅಂತ್ಯಕ್ರಿಯೆಯಲ್ಲಿ ಡಿಜೆ ಹಾಡು: ಮೊಮ್ಮಕ್ಕಳು, ಬಂಧುಗಳಿಂದ ಡ್ಯಾನ್ಸೋ ಡ್ಯಾನ್ಸು

author img

By

Published : Aug 23, 2022, 11:58 AM IST

Updated : Aug 23, 2022, 2:30 PM IST

Grandchildren play DJ in grandfather funeral  DJ in grandfather funeral procession in West Bengal  Funeral dance in West Bengal  Etv Bharat Karnataka news  ಶತಾಯುಷಿ ಅಜ್ಜನ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಡಿಜೆ  ಸಾಂಗ್​ಗೆ ಸಖತ್​ ಡ್ಯಾನ್ಸ್  ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಡಿಜೆ ಸಾಂಗ್​ಗೆ ಸಖತ್​ ಡ್ಯಾನ್ಸ್  ನೂರಾರು ಮೊಮ್ಮಕ್ಕಳನ್ನು ಅಗಲಿದ ಶತಾಯುಷಿ ಅಜ್ಜ  ವಯೋ ಸಹಜ ಕಾಯಿಲೆಯಿಂದ ಶತಾಯುಷಿ ಅಜ್ಜ ನಿಧನ  ವಿಧಿವಿಧಾನಗಳ ಪ್ರಕಾರ ನಡೆದ ಅಂತ್ಯಕ್ರಿಯೆ
ಸಾಂಗ್​ಗೆ ಸಖತ್​ ಡ್ಯಾನ್ಸ್​ ಮಾಡಿದ 150ಕ್ಕೂ ಹೆಚ್ಚು ಮೊಮ್ಮಕ್ಕಳು

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಎಂಬ ಜಿಲ್ಲೆಯಲ್ಲಿ ಕಳೆದ ಶನಿವಾರ 119 ವರ್ಷದ ವೃದ್ಧರೊಬ್ಬರು ನಿಧನರಾಗಿದ್ದರು. ಈ ಶತಾಯುಷಿಯ ಅಂತ್ಯಕ್ರಿಯೆ ಮಾತ್ರ ವಿಭಿನ್ನವಾಗಿತ್ತು.

ಉತ್ತರ 24 ಪರಗಣ(ಪಶ್ಚಿಮ ಬಂಗಾಳ): 119 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದು, ಕುಟುಂಬಸ್ಥರು ಮೃತನ ಅಂತಿಮ ಯಾತ್ರೆಯಲ್ಲಿ ಡಿಜೆ ಸಾಂಗ್ಸ್​ ಹಾಕಿ ಕುಣಿದು ಕುಪ್ಪಳಿಸಿ ಅಂತಿಮ ವಿದಾಯ ಸಲ್ಲಿಸಿದ್ದಾರೆ. ಖುಷಿ-ಖುಷಿಯಾಗಿ ನಡೆದ ಈ ವಿಭಿನ್ನ ಅಂತಿಮ ಯಾತ್ರೆಯ ಬಳಿಕ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಇಲ್ಲಿನ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಎಂಬ ಜಿಲ್ಲೆಯ ಹಬ್ರಾ ಎಂಬಲ್ಲಿ ಇಂಥದ್ದೊಂದು ಕುತೂಹಲಕಾರಿ ಘಟನೆ ನಡೆಯಿತು.

ಶತಾಯುಷಿ ಅಜ್ಜನ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಡಿಜೆ

ನೂರಾರು ಮೊಮ್ಮಕ್ಕಳ ಅಗಲಿದ ಶತಾಯುಷಿ: ಹಬ್ರಾ ಪೊಲೀಸ್ ಠಾಣೆಯ ಕುಮ್ರಾ ಗ್ರಾಮ ಪಂಚಾಯಿತಿಯ ಪಡುಯಿಪರದ ನಿವಾಸಿ ದೇಬೆನ್ ಹಜ್ರಾ 1903 ರಲ್ಲಿ ಜನಿಸಿದ್ದರು. 119 ವರ್ಷಗಳ ಕಾಲ ಬಾಳಿ ಬದುಕಿದ ಹಿರಿಜೀವ ಅದು. ದೇಬೆನ್‌ಗೆ ಇಬ್ಬರು ಕಿರಿ ಸಹೋದರರಿದ್ದು ಬಹಳ ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಈ ವೃದ್ಧನಿಗೆ ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರಿದ್ದಾರೆ. 150 ಜನರಿರುವ ತುಂಬು ಕುಟುಂಬ ಇವರದ್ದು.

Grandchildren play DJ in grandfather funeral  DJ in grandfather funeral procession in West Bengal  Funeral dance in West Bengal  Etv Bharat Karnataka news  ಶತಾಯುಷಿ ಅಜ್ಜನ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಡಿಜೆ  ಸಾಂಗ್​ಗೆ ಸಖತ್​ ಡ್ಯಾನ್ಸ್  ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಡಿಜೆ ಸಾಂಗ್​ಗೆ ಸಖತ್​ ಡ್ಯಾನ್ಸ್  ನೂರಾರು ಮೊಮ್ಮಕ್ಕಳನ್ನು ಅಗಲಿದ ಶತಾಯುಷಿ ಅಜ್ಜ  ವಯೋ ಸಹಜ ಕಾಯಿಲೆಯಿಂದ ಶತಾಯುಷಿ ಅಜ್ಜ ನಿಧನ  ವಿಧಿವಿಧಾನಗಳ ಪ್ರಕಾರ ನಡೆದ ಅಂತ್ಯಕ್ರಿಯೆ
ದೇಬೆನ್ ಹಜ್ರಾ 1903-2022

ದೇಬೆನ್​ರಿಗೆ ಸಂಗೀತವೆಂದರೆ ಅಚ್ಚುಮೆಚ್ಚು. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಎಲ್ಲೇ ಆದರೂ ನಾಟಕಗಳು ನಡೆದರೆ ನೋಡಲು ತೆರಳುತ್ತಿದ್ದರಂತೆ. ಮನೆಯಲ್ಲಿಯೂ ಕೂಡ ಹಾಡುಗಳನ್ನು ಕೇಳಿ ಆನಂದಿಸುತ್ತಾ ಮೊಮ್ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದರು ಎಂದು ಕುಟುಂಬ ಸದಸ್ಯರು ಸ್ಮರಿಸುತ್ತಾರೆ.

ಇದನ್ನೂ ಓದಿ: ನ್ಯಾಯ,ನಿಷ್ಠೆ,ಪ್ರಾಮಾಣಿಕತೆ ಕಣ್ಮರೆಯಾಗುತ್ತಿರುವುದು ಬೇಸರದ ಸಂಗತಿ.. ಶತಾಯುಷಿ ಹುಲಿಕಲ್ ನಾಗಭೂಷಣ

Last Updated :Aug 23, 2022, 2:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.