ETV Bharat / bharat

ರೈತರಿಗೆ ನೀಡಿದ ಭರವಸೆಗಳನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ: ರಾಕೇಶ್ ಟಿಕಾಯತ್

author img

By

Published : Feb 21, 2022, 8:52 PM IST

Rakesh Tikait, national spokesperson and farmer leader of the Bharatiya Kisan Union BKU
http://10.10.50.80:6060//finalout3/odisha-nle/thumbnail/21-February-2022/14527518_371_14527518_1645443748232.png

ರೈತರು ಮತ್ತು ಕೂಲಿಕಾರರ ಪ್ರಯತ್ನದಿಂದಾಗಿ ಆರ್ಥಿಕ ಹಿಂಜರಿತ ಮತ್ತು ಲಾಕ್‌ಡೌನ್ ನಡುವೆಯೂ ದೇಶದಲ್ಲಿ ಕೃಷಿ ಉತ್ಪನ್ನಗಳು ನಿರಂತರವಾಗಿ ಹೆಚ್ಚುತ್ತಿವೆ. ಹೀಗಾಗಿ ಸರ್ಕಾರವು ದೇಶದ 'ಅನ್ನದಾತ'ರ ನಂಬಿಕೆಗೆ ದ್ರೋಹ ಮಾಡಬಾರದು ಎಂದು ಹೇಳಿದ್ದಾರೆ.

ನವದೆಹಲಿ/ಗಾಜಿಯಾಬಾದ್: ಕೇಂದ್ರ ಸರ್ಕಾರ ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ (BKU) ನ ರಾಷ್ಟ್ರೀಯ ವಕ್ತಾರ ಮತ್ತು ರೈತ ನಾಯಕ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರುವ ಅವರು, ಭಾರತ ಸರ್ಕಾರವು ಡಿಸೆಂಬರ್ 9ರ ಪತ್ರದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಈ ಕಾರಣಕ್ಕೆ ನಾವು ದೇಶಾದ್ಯಂತ ಸಂಚರಿಸಿ ಅನ್ನದಾತನ ಹಿತಾಸಕ್ತಿಗಳನ್ನು ರಕ್ಷಿಸುತ್ತೇವೆ ಎಂದಿದ್ದಾರೆ.

  • भारत सरकार ने 9 दिसंबर के पत्र में जो वादे किए गए थे वो पूरे नहीं किए , हम अन्नदाता के हितों की रक्षा हेतु देशभर में जाएंगे । किसानों और मजदूरों के अथक प्रयास से ही आर्थिक मंदी -लॉकडाउन के बावजूद देश में कृषि उपज लगातार बढ़ी। सरकार देश के अन्नदाता का विश्वास को न तोड़े।#Farmers

    — Rakesh Tikait (@RakeshTikaitBKU) February 21, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಕೊಲೆಯಾದ ಹರ್ಷ ಮನೆಗೆ ಸಚಿವ ನಾರಾಯಣ ಗೌಡ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

ರೈತರು ಮತ್ತು ಕೂಲಿಕಾರರ ಪ್ರಯತ್ನದಿಂದಾಗಿ, ಆರ್ಥಿಕ ಹಿಂಜರಿತ ಮತ್ತು ಲಾಕ್‌ಡೌನ್ ನಡುವೆಯೂ ದೇಶದಲ್ಲಿ ಕೃಷಿ ಉತ್ಪನ್ನಗಳು ನಿರಂತರವಾಗಿ ಹೆಚ್ಚುತ್ತಿವೆ. ಹೀಗಾಗಿ ಸರ್ಕಾರವು ದೇಶದ 'ಅನ್ನದಾತ'ನ ನಂಬಿಕೆಗೆ ದ್ರೋಹ ಮಾಡಬಾರದು ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.