ETV Bharat / bharat

floccinaucinihilipilification ಅಂದ್ರೆ ಏನು ಗೊತ್ತಾ? ಕೆಟಿಆರ್ ಜೊತೆ ತರೂರ್ ಶಬ್ದಕೋಶ ಯುದ್ಧ!

author img

By

Published : May 21, 2021, 10:06 PM IST

Floccinaucinihilipilification: Tharoor's latest tongue-twister in friendly banter with KTR
Floccinaucinihilipilification: Tharoor's latest tongue-twister in friendly banter with KTR

ತರೂರ್ ಅವರ ಪೋಸ್ಟ್‌ಗೆ ಹಲವಾರು ಜನರು ಪ್ರತಿಕ್ರಿಯಿಸಿದರು, ಈ ಪದವನ್ನು ಉಚ್ಚರಿಸುವುದು ಎಷ್ಟು ಕಷ್ಟ ಎಂದು ಅನೇಕರು ತಮಾಷೆ ಮಾಡಿದ್ದಾರೆ ಮತ್ತು ಇನ್ನೂ ಅನೇಕರು ಅದರ ಮೇಲೆ ಮೇಮ್‌ಗಳನ್ನು ಹಂಚಿಕೊಂಡಿದ್ದಾರೆ.

ನವದೆಹಲಿ: ವಿರಳವಾಗಿ ಬಳಸಲಾಗುವ, ಉಚ್ಚರಿಸಲು ಕಷ್ಟವಾದ ಇಂಗ್ಲಿಷ್ ಪದಗಳ ಬಗ್ಗೆ ಹೆಚ್ಚು ಒಲವು ಹೊಂದಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಮತ್ತೇ ತಲೆ ತಿರುಗುವ ಪದವೊಂದನ್ನು ಹೇಳಿದ್ದಾರೆ.

ಶಶಿ ತರೂರ್ ತಮ್ಮ ಟ್ವೀಟ್​ನಲ್ಲಿ ಬಳಸಿದ floccinaucinihilipilification ಎಂಬ ಪದವನ್ನು ಬಳಕೆ ಮಾಡಿದ್ದಾರೆ. floccinaucinihilipilification ಅಂದರೆ ಯಾವುದೇ ವಸ್ತುವನ್ನಾದರೂ ನಿಷ್ಪಯೋಜಕ ಎಂದು ಅಂದಾಜಿಸುವ ಹವ್ಯಾಸ ಎಂದರ್ಥ

ಈ ಸಂಬಂಧ ಟ್ವೀಟ್​ ಮಾಡಿರುವ ತೆಲಂಗಾಣ ಸಚಿವ ಕೆಟಿಆರ್​ Posaconazole, Cresemba, Tocilizumab, Remdesivir, Liposomal Amphotericin, Flavipiravir, Molnupiravir, Baricitinib ಮೊದಲಾದ ಔಷಧಗಳ ಹೆಸರು ಪಟ್ಟಿ ಮಾಡಿ ,ಈ ರೀತಿಯ ಹೆಸರುಗಳನ್ನಿಡುವಲ್ಲಿ ಸಂಸದ ಶಶಿ ತರೂರ್ ಕೈವಾಡವಿರಬಹುದೇ? ಎಂದು ತರೂರ್​ ಅವರಿಗೆ ಟ್ವೀಟ್​ ಟ್ಯಾಗ್​ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಔಷಧಗಳಿಗೆ ಹೆಸರಿಟ್ಟಿದ್ದು ನಾನಲ್ಲ. ಈ ರೀತಿಯ ನಿಷ್ಪ್ರಯೋಜಕ ಕೆಲಸದಲ್ಲಿ ನನ್ನನ್ನು ನೀವು ಭಾಗಿಮಾಡಿದ್ದೇಕೆ? ಒಂದು ವೇಳೆ ನಾನು ಈ ಕೆಲಸ ಮಾಡುತ್ತಿದ್ದರೆ ‘CoroNil’, ‘CoroZero’ ಮತ್ತು ‘GoCoronaGo’ ಎಂದು ಹೆಸರಿಡುತ್ತಿದ್ದೆ. ಆದರೆ, ಈ ಫಾರ್ಮಸಿಸ್ಟ್ ಗಳು procrustean ಎಂದು ಹೇಳಿದ್ದಾರೆ ಎಂದಿದ್ದಾರೆ. ಇನ್ನು ಇವರು ಬಳಸಿದ ಪದದಲ್ಲಿ ಇಂಗ್ಲಿಷ್ ಕಾಗುಣಿತವನ್ನೂ ಮೀರಿದ ಪದಗಳಿರುವುದು ವಿಶೇಷ .

ಕೇಂಬ್ರಿಡ್ಜ್ ನಿಘಂಟಿನ ಪ್ರಕಾರ, ಅತೀ ಉದ್ದದ ತಾಂತ್ರಿಕೇತರ ಪದ ಎಂಬ ಗೌರವವು floccinaucinihilipilificationಗೆ ಸಲ್ಲುತ್ತದೆ.

ತರೂರ್ ಅವರ ಪೋಸ್ಟ್‌ಗೆ ಹಲವಾರು ಜನರು ಪ್ರತಿಕ್ರಿಯಿಸಿದರು, ಈ ಪದವನ್ನು ಉಚ್ಚರಿಸುವುದು ಎಷ್ಟು ಕಷ್ಟ ಎಂದು ಅನೇಕರು ತಮಾಷೆ ಮಾಡಿದ್ದಾರೆ ಮತ್ತು ಇನ್ನೂ ಅನೇಕರು ಅದರ ಮೇಲೆ ಮೇಮ್‌ಗಳನ್ನು ಹಂಚಿಕೊಂಡಿದ್ದಾರೆ.

ತರೂರ್ ಈ ಹಿಂದೆಯೂ "ಫಾರ್ರಾಗೊ" ಮತ್ತು "ಟ್ರೊಗ್ಲೊಡೈಟ್" ನಂತಹ ಇಂಗ್ಲಿಷ್ ಪದಗಳನ್ನು ಬಳಸಿದ್ದಾರೆ. ಫಾರ್ರಾಗೊ ಎಂದರೆ ಗೊಂದಲಮಯ ಮಿಶ್ರಣವಾದರೆ, ಟ್ರೊಗ್ಲೊಡೈಟ್ ಎಂದರೆ ಉದ್ದೇಶಪೂರ್ವಕವಾಗಿ ಅಜ್ಞಾನ ಅಥವಾ ಹಳೆಯ-ಶೈಲಿಯ ವ್ಯಕ್ತಿ ಎಂಬ ಅರ್ಥ ಕೊಡುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.