ETV Bharat / bharat

Lakhimpur Kheri Violence : ಕೇಂದ್ರ ಸಚಿವರಿಗೆ ಅಮೆರಿಕ, ರೊಮೇನಿಯಾ ಗೇಟ್​​ಪಾಸ್ ಬಳಸಿ ಇಂಟರ್​ನೆಟ್​ ಕರೆ ಮೂಲಕ ಬ್ಲ್ಯಾಕ್‌ಮೇಲ್

author img

By

Published : Dec 25, 2021, 3:50 PM IST

Five held in Delhi for threatening Minister Ajay Mishra of releasing a Lakhimpur Kheri video
Lakhimpur Kheri Violence : ಕೇಂದ್ರ ಸಚಿವರಿಗೆ ಅಮೆರಿಕ, ರೊಮೇನಿಯಾ ಗೇಟ್​​ಪಾಸ್ ಬಳಸಿ ಇಂಟರ್​ನೆಟ್​ ಕರೆ ಮಾಡುತ್ತಿದ್ದ ಆರೋಪಿಗಳು

ಅಮಿತ್​​ ಕುಮಾರ್​ ಎಂಬಾತನನ್ನ ನೋಯ್ಡಾದಲ್ಲಿ ನಡೆಸುತ್ತಿದ್ದ ಕಾಲ್ ಸೆಂಟರ್​ ಮೇಲೆ ದಾಳಿ ಮಾಡಿದ್ದಾರೆ. ಇದೇ ಕಾಲ್​ ಸೆಂಟರ್ ಮೂಲಕ ಆರೋಪಿಗಳು ಇಂಟರ್​ನೆಟ್​ ಕಾಲ್ ಮಾಡಲು ಅವಶ್ಯಕವಾಗಿರುವ ಗೇಟ್​ ಪಾಸ್​ ಬಳಸಿ, ಅಜಯ್ ಮಿಶ್ರಾ ಅವರಿಗೆ ಕರೆ ಮಾಡುತ್ತಿದ್ದರೆಂದು ತಿಳಿದು ಬಂದಿದೆ..

ನವದೆಹಲಿ : ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವರಾದ ಅಜಯ್‌ ಕುಮಾರ್‌ ಮಿಶ್ರಾ ಅವರನ್ನು ಬ್ಲ್ಯಾಕ್​​ಮೇಲ್​ ಮಾಡಲು ಯತ್ನಿಸಿದ ಆರೋಪದ ಮೇಲೆ ಐವರು ಯುವಕರನ್ನು ಪೊಲೀಸರು ಬಂಧಿಸಲಾಗಿದೆ. ಆರೋಪಿಗಳು ಇಂಟರ್​ನೆಟ್​​ ಕರೆಗಳ ಮೂಲಕ ಬ್ಲ್ಯಾಕ್​​ಮೇಲ್​ ಮಾಡಲು ಅಮೆರಿಕ ಮತ್ತು ರಷ್ಯಾದ ಗೇಟ್​ಪಾಸ್​​ಗಳನ್ನು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.

ದೆಹಲಿಯ ನಾರ್ಥ್ ಅವೆನ್ಯೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇದಕ್ಕಾಗಿ ಅವರು ದೆಹಲಿಯಲ್ಲಿರುವ ಅಮೆರಿಕ ಮತ್ತು ರೊಮೇನಿಯಾ ರಾಯಭಾರ ಕಚೇರಿಗಳ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಆ ಅಧಿಕಾರಿಗಳ ಸಹಾಯದೊಂದಿಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅಪರಾಧಿ ಎಂಬುದಕ್ಕೆ ನಮ್ಮ ಬಳಿ ಪೂರ್ತಿ ಸಾಕ್ಷಿಯ ವಿಡಿಯೋ ಇದೆ. 2 ಕೋಟಿ ರೂಪಾಯಿ ಹಣ ಕೊಡದಿದ್ದರೆ ವಿಡಿಯೋ ಬಿಡುಗಡೆ ಮಾಡುತ್ತೇವೆ ಎಂದು ಇಂಟರ್​ನೆಟ್​ ಕರೆಯ ಮೂಲಕ ಅಜಯ್​ ಮಿಶ್ರಾ ಬಳಿ ಹಣಕ್ಕೆ ಬೇಡಿಕೆ ಇಡಲಾಗಿತ್ತು.

ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು, ಅಮಿತ್​​ ಕುಮಾರ್​ ಎಂಬಾತನನ್ನ ನೋಯ್ಡಾದಲ್ಲಿ ನಡೆಸುತ್ತಿದ್ದ ಕಾಲ್ ಸೆಂಟರ್​ ಮೇಲೆ ದಾಳಿ ಮಾಡಿದ್ದಾರೆ. ಇದೇ ಕಾಲ್​ ಸೆಂಟರ್ ಮೂಲಕ ಆರೋಪಿಗಳು ಇಂಟರ್​ನೆಟ್​ ಕಾಲ್ ಮಾಡಲು ಅವಶ್ಯಕವಾಗಿರುವ ಗೇಟ್​ ಪಾಸ್​ ಬಳಸಿ, ಅಜಯ್ ಮಿಶ್ರಾ ಅವರಿಗೆ ಕರೆ ಮಾಡುತ್ತಿದ್ದರೆಂದು ತಿಳಿದು ಬಂದಿದೆ.

ಕಾಲ್​ಸೆಂಟರ್​ ಮಾಲೀಕ ಅಮಿತ್ ಕುಮಾರ್​, ಅಮಿತ್ ಮಾಜ್ಹಿ, ಕಬೀರ್​ ವರ್ಮ, ನಿಶಾಂತ್ ಕುಮಾರ್, ಅಶ್ವನಿ ಕುಮಾರ್ ಎಂಬುವರನ್ನು ಬಂಧಿಸಲಾಗಿದೆ. ​ಎಲ್ಲರನ್ನೂ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಮಾಲೇಗಾಂವ್​ನಲ್ಲಿ 30 ಖಡ್ಗಗಳು ಪತ್ತೆ, ಇಬ್ಬರ ಬಂಧನ : ಸಂಚು ತಪ್ಪಿಸಿದ್ರಾ ಪೊಲೀಸರು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.