ETV Bharat / bharat

ಗಡಿಯಿಂದ ವಾಪಸ್​ ಮನೆಗೆ ತೆರಳುತ್ತಿರುವ ರೈತರು.. ಇತಿಹಾಸದ ಸುವರ್ಣ ಪುಟಗಳಲ್ಲಿ 'ಅನ್ನ'ದೊರೆಗಳು..

author img

By

Published : Dec 11, 2021, 4:32 PM IST

Updated : Dec 11, 2021, 5:37 PM IST

Farmers returning home from the border
ಗಡಿಯಿಂದ ವಾಪಸ್​ ಮನೆಗೆ ತೆರೆಳುತ್ತಿರುವ ರೈತರು...

ರಾಕೇಶ್​ ಟಿಕಾಯತ್​ ಬಳಿ ವಿವಿಧ ರಾಜ್ಯಗಳ ರೈತರನ್ನು ಮತ್ತೆ ಹೇಗೆ ಭೇಟಿ ಮಾಡುತ್ತೀರಿ ಎಂದು ಕೇಳಿದಾಗ, ನಗು ಮೊಗದಲ್ಲಿ ಮತ್ತೆ ಚಳವಳಿಯ ಮೇಳ ನಡೆಸಬೇಕಾಗುತ್ತದೆ ಎಂದು ಹೇಳಿದರು. ವರ್ಷಕ್ಕೊಮ್ಮೆ ರೈತರು ಆ ಮೇಳದಲ್ಲಿ ಭಾಗವಹಿಸಿ ಎಲ್ಲ ರೈತರನ್ನು ಮತ್ತೆ ಭೇಟಿಯಾಗಬಹುದು ಎಂದರು..

ನವದೆಹಲಿ : ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ವಿವಾದಿತ ಕೃಷಿ ಕಾಯ್ದೆ ರದ್ಧತಿ ಹೊರತಾಗಿಯೂ ಕನಿಷ್ಠ ಬೆಂಬಲ ಬೆಲೆ ಜಾರಿ, ಲಖೀಂಪುರಿ ಖೇರಿ ಹಾಗೂ ಟ್ರ್ಯಾಕ್ಟರ್​​ ಮೋರ್ಚಾ ವೇಳೆ ಅನ್ನದಾತರ ಮೇಲೆ ದಾಖಲಾಗಿದ್ದ ಎಫ್​ಐಆರ್​ ಹಿಂಪಡೆದುಕೊಳ್ಳುವಂತೆ ರೈತರು ಪಟ್ಟು ಹಿಡಿದು, ತಮ್ಮ ಹೋರಾಟ ಮುಂದುವರೆಸಿದ್ದರು.

ರೈತ ಮುಖಂಡ ರಾಕೇಶ್ ಟಿಕಾಯತ್

ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ಮಧ್ಯೆ ಮಹತ್ವದ ಒಪ್ಪಂದವಾಗಿದೆ. ಮೋದಿ ಸರ್ಕಾರ ರೈತ ಸಂಘಟನೆಗಳ ಎಲ್ಲ ಬೇಡಿಕೆ ಈಡೇರಿಸುವುದಾಗಿ ಲಿಖಿತ ರೂಪದಲ್ಲಿ ಒಪ್ಪಿಗೆ ಸೂಚಿಸಿದೆ. ಇದರ ಬೆನ್ನಲ್ಲೇ ತಮ್ಮ ಹೋರಾಟ ಅಂತ್ಯಗೊಳಿಸಿ ದೆಹಲಿ-ಹರಿಯಾಣದ ಸಿಂಘು, ಗಾಜಿಪುರ ಗಡಿಯಿಂದ ರೈತರು ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ.

ವಾಪಸ್​​ ಮನೆಗೆ ಮರಳಲು ರೈತರು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಒಂದಿಷ್ಟು ಮಂದಿ ತಾವಿದ್ದ ಸ್ಥಳದಿಂದ ತೆರಳಿದ್ದಾರೆ. ಎಲ್ಲಿಂದಲೋ ಬಂದು ಇಲ್ಲಿ ಸೇರಿದ್ದ ರೈತರ ನಡುವೆ ಒಂದು ಗಟ್ಟಿ ಬಾಂಧವ್ಯ ಏರ್ಪಟ್ಟಿದೆ. ಒಬ್ಬರನ್ನೊಬ್ಬರು ಬಹಳಾನೇ ಹಚ್ಚಿಕೊಂಡಿದ್ದರು. ಇದೀಗ ವಾಪಸ್​ ತೆರಳುವ ವೇಳೆ ಅನೇಕ ರೈತರ ಕಣ್ಣುಗಳು ತೇವವಾಗಿವೆ.

  • Protesting farmers take down their tents at Ghazipur border (Delhi-UP border) as they prepare to return to their homes following the announcement of the suspension of their year-long protest. pic.twitter.com/mSAWOc2WOz

    — ANI UP (@ANINewsUP) December 11, 2021 " class="align-text-top noRightClick twitterSection" data=" ">

ರೈತ ಚಳವಳಿಯ ನೇತೃತ್ವ ವಹಿಸಿದ್ದ ರೈತ ಮುಖಂಡ ರಾಕೇಶ್ ಟಿಕಾಯತ್ ಮಾಧ್ಯಮಗಳೊಂದಿಗೆ ಮಾತನಾಡಿ, ರೈತರ ಸೌಹಾರ್ದತೆ ಸಂಬಂಧದ ಬಗ್ಗೆ ಹೇಳಿದರು.

ವಿವಿಧ ರಾಜ್ಯಗಳ ರೈತರನ್ನು ಮತ್ತೆ ಹೇಗೆ ಭೇಟಿ ಮಾಡುತ್ತೀರಿ ಎಂದು ಕೇಳಿದಾಗ, ನಗು ಮೊಗದಲ್ಲಿ ಮತ್ತೆ ಚಳವಳಿಯ ಮೇಳ ನಡೆಸಬೇಕಾಗುತ್ತದೆ ಎಂದು ಹೇಳಿದರು. ವರ್ಷಕ್ಕೊಮ್ಮೆ ರೈತರು ಆ ಮೇಳದಲ್ಲಿ ಭಾಗವಹಿಸಿ ಎಲ್ಲ ರೈತರನ್ನು ಮತ್ತೆ ಭೇಟಿಯಾಗಬಹುದು ಎಂದರು.

ಇದನ್ನೂ ಓದಿ: 9,800 ಕೋಟಿ ರೂ. ವೆಚ್ಚ: ನಾಲ್ಕು ದಶಕದಿಂದ ಬಾಕಿ ಇದ್ದ 'ಸರಯೂ ನಹರ್​​ ರಾಷ್ಟ್ರೀಯ'ಯೋಜನೆ ಉದ್ಘಾಟಿಸಿದ ನಮೋ

ಗಡಿಗಳಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರು ಇದ್ದ ಟೆಂಟ್​ಗಳನ್ನು ತೆಗೆದು ತಮ್ಮ ಮನೆಯತ್ತ ಸಾಗುತ್ತಿದ್ದಾರೆ.

Last Updated :Dec 11, 2021, 5:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.