ETV Bharat / bharat

ಶಿವಸೇನೆ ಸರ್ಕಾರ ಬಾಬರಿ ಮಸೀದಿಯಂತಿದೆ: ಫಡ್ನವೀಸ್​

author img

By

Published : May 16, 2022, 11:57 AM IST

Updated : May 16, 2022, 12:57 PM IST

Devendra Fadnavis Aurangzeb Jab At Asaduddin Owaisi, Hanuman Chalisa, Maha Vikas Aghadi government, Maha government like Babri structure, Mahasankalp Sabha in Mumbai, ಅಸಾದುದ್ದೀನ್ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ ದೇವೇಂದ್ರ ಫಡ್ನವೀಸ್, ಹನುಮಾನ್ ಚಾಲೀಸಾ, ಮಹಾ ವಿಕಾಸ್ ಅಘಾಡಿ ಸರ್ಕಾರ, ಬಾಬರಿ ರಚನೆಯಂತಹ ಮಹಾ ಸರ್ಕಾರ, ಮುಂಬೈನಲ್ಲಿ ಮಹಾಸಂಕಲ್ಪ ಸಭೆ,
ಫಡ್ನವೀಸ್​

ಔರಂಗಜೇಬ್ ಗುರುತಿನ ಮೇಲೆ ನಾಯಿ ಕೂಡ ಮೂತ್ರ ವಿಸರ್ಜಿಸುವುದಿಲ್ಲ. ಶಿವಸೇನೆ ಮಾಡಿದ್ದು ರ‍್ಯಾಲಿಯಲ್ಲ, ಅದು ನಗುವಿನ ಸಭೆ. ಅವರ ಸರ್ಕಾರ ಬಾಬರಿ ಮಾದರಿಯಂತೆ ರಚನೆಯಾಗಿದೆ ಎಂದು ಮಹಾ ವಿಕಾಸ್​ ಆಘಾಡಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಫಡ್ನವೀಸ್​ ವಾಗ್ದಾಳಿ ನಡೆಸಿದರು..

ಮುಂಬೈ : ಮಹಾ ಸಿಎಂ ಉದ್ಧವ್​ ಠಾಕ್ರೆ ವಿರುದ್ಧ ಮಾಜಿ ಸಿಎಂ ಫಡ್ನವೀಸ್ ಹರಿಹಾಯ್ದಿದ್ದಾರೆ.​ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಬಾಬರಿ ಮಾದರಿ ರಚನೆಯಂತಿದೆ. ಅದನ್ನು ನೆಲಕ್ಕೆ ಉರುಳಿಸುವವರಿಗೂ ನಾನು ವಿಶ್ರಮಿಸುವುದಿಲ್ಲ ಎಂದು ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಪ್ರಮಾಣ ಮಾಡಿದ್ದಾರೆ.

ನಿಮ್ಮ ಅಧಿಕಾರದ ರಚನೆ ಬಾಬ್ರಿಯಂತಿದೆ. ಅದನ್ನು ನಾನು ಉರುಳಿಸುವವರೆಗೂ ವಿಶ್ರಮಿಸುವುದಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಫಡ್ನವಿಸ್ ಮಹಾಸಂಕಲ್ಪ ಸಭೆಯಲ್ಲಿ ಹೇಳಿದರು. ಬಳಿಕ ನಗರದಲ್ಲಿ ನಡೆದ ಪಕ್ಷದ ಮಹಾಸಂಕಲ್ಪ ಸಭೆಯಲ್ಲಿ ಅವರು ಇತರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರಿಗೆ ಹನುಮಾನ್ ಚಾಲೀಸಾವನ್ನು ಪಠಿಸಿದರು.

ನಾವು ಕೇವಲ ಹನುಮಾನ್ ಚಾಲೀಸಾವನ್ನು ಜಪಿಸಿದ್ದೇವೆ. ಬಾಳಾಸಾಹೇಬ್ ಠಾಕ್ರೆ ತಮ್ಮ ಮಗನ ಆಳ್ವಿಕೆಯಲ್ಲಿ ಹನುಮಾನ್ ಚಾಲೀಸಾವನ್ನು ಓದುವುದು ದೇಶದ್ರೋಹ ಮತ್ತು ಔರಂಗಜೇಬನ ಸಮಾಧಿಗೆ ಭೇಟಿ ನೀಡುವುದು ರಾಜ್ಯ ಶಿಷ್ಟಾಚಾರ ಎಂದು ಭಾವಿಸಿದ್ದೀರಾ? ಎಂದು ಫಡ್ನವಿಸ್ ಪ್ರಶ್ನಿಸಿದರು. ಶಿವಸೇನೆ ಅವರು ಮೊನ್ನೆ ರ‍್ಯಾಲಿಯನ್ನು ನಡೆಸಿ ಅದನ್ನು ಮಾಸ್ಟರ್ ಸಭೆ ಎಂದು ಕರೆದರು. ಆದರೆ, ಅದು ನಮಗೆ ನಗುವಿನ ಸಭೆಯಂತಿತ್ತು. ಮೊನ್ನೆ ಕೌರವರು ಸಭೆ ಮಾಡಿದ್ದರು. ನಿನ್ನೆ ಪಾಂಡವರ ಸಭೆ ನಡೆಯಿತು ಎಂದು ಫಡ್ನವೀಸ್​ ಹೇಳಿದರು.

ಓದಿ: ಕೆಸಿಆರ್​ ಈ ಹಿಂದೆಯೂ ತೃತೀಯ ರಂಗ ಮಾಡಿದ್ದರು ಏನೂ ಆಗಲಿಲ್ಲ: ದೇವೇಂದ್ರ ಫಡ್ನವೀಸ್

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಮೌಖಿಕ ದಾಳಿ ನಡೆಸಿದ ಅವರು, ಔರಂಗಜೇಬ್ ಅವರ ಸಮಾಧಿಗೆ ಅಸಾದುದ್ದೀನ್ ಓವೈಸಿ ಗೌರವ ಸಲ್ಲಿಸುತ್ತಾರೆ. ನೀವು ಅದನ್ನು ನೋಡುತ್ತಿರುತ್ತೀರಿ. ನಿಮಗೆ ನಾಚಿಕೆಯಾಗಬೇಕು. ಓವೈಸಿ ಅವರೇ ಇಲ್ಲಿ ಸ್ವಲ್ಪ ಕೇಳಿ, ಔರಂಗಜೇಬ್ ಗುರುತಿನ ಮೇಲೆ ನಾಯಿ ಕೂಡ ಮೂತ್ರ ವಿಸರ್ಜಿಸುವುದಿಲ್ಲ. ಹಿಂದೂಸ್ತಾನದಲ್ಲಿ ಕೇಸರಿ ಆಳ್ವಿಕೆ ನಡೆಸುತ್ತದೆ ಎಂದು ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರಕಾರದ ವಿರುದ್ಧ ಕಿಡಿ ಕಾರಿದರು.

ಇನ್ನು ಮಹಾರಾಷ್ಟ್ರದಲ್ಲಿ ಹನುಮಾನ್ ಚಾಲೀಸಾ ಮತ್ತು ಆಜಾನ್ ವಿವಾದವು ರಾಜ್ಯದಲ್ಲಿ ರಾಜಕೀಯ ವಾತಾವರಣವನ್ನು ಬಿಸಿ ಮಾಡಿದೆ. ಇತ್ತೀಚೆಗೆ, ನವನೀತ್ ರಾಣಾ ಮತ್ತು ರವಿ ರಾಣಾ ಅವರನ್ನ ಮುಂಬೈ ಪೊಲೀಸರು ಬಂಧಿಸಿದ್ದರು. ಬಾಂದ್ರಾದಲ್ಲಿರುವ ಉದ್ಧವ್ ಠಾಕ್ರೆ ಅವರ ಮನೆಯ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಘೋಷಿಸಿದ ನಂತರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124A (ದೇಶದ್ರೋಹ) ಮತ್ತು 153A (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಆರೋಪ ಹೊರಿಸಲಾಯಿತು.

ಹನುಮಾನ್ ಚಾಲೀಸಾ ಗಲಾಟೆ ನಂತರ ಬಿಜೆಪಿ ರಾಣಾ ಬೆಂಬಲಕ್ಕೆ ನಿಂತಿದೆ. ಮೇ 3ರ ನಂತರವೂ ಮಸೀದಿಗಳಿಂದ ಧ್ವನಿವರ್ಧಕ ತೆರವುಗೊಳಿಸದಿದ್ದರೆ, ಮಸೀದಿಗಳ ಮೇಲೆಯೇ ಧ್ವನಿವರ್ಧಕದಲ್ಲಿ ದುಪ್ಪಟ್ಟು ಧ್ವನಿಯಲ್ಲಿ ಎಲ್ಲ ಹಿಂದೂಗಳು ಹನುಮಾನ್‌ ಚಾಲೀಸಾವನ್ನು ಪಠಿಸಲಿದ್ದಾರೆ’ ಎಂದು ಎಂಎನ್​ಎಸ್​ ಅಧ್ಯಕ್ಷ ರಾಜ್‌ ಠಾಕ್ರೆ ಎಚ್ಚರಿಕೆ ನೀಡಿದ್ದರು.

Last Updated :May 16, 2022, 12:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.