ETV Bharat / bharat

ಕೃಷಿ ಕಾನೂನು ಹಿಂಪಡೆದ ಬಳಿಕವಷ್ಟೇ ರೈತರಿಗೆ ದೀಪಾವಳಿ: ರಾಕೇಶ್ ಟಿಕಾಯತ್​

author img

By

Published : Nov 4, 2021, 7:40 AM IST

rakesh-tikait
ರಾಕೇಶ್ ಟಿಕಾಯತ್​

ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಆಂದೋಲನಕ್ಕೆ ಒಂದು ವರ್ಷ ತುಂಬಲಿದೆ. ಈ ನಡುವೆ ರೈತರ ಹೋರಾಟ ಇನ್ನಷ್ಟು ತೀವ್ರಗೊಳ್ಳುವ ಸೂಚನೆ ಸಿಕ್ಕಿದೆ. 26ರ ಒಳಗೆ ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ ರವಾನಿಸಿದ್ದಾರೆ.

ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆ ನವೆಂಬರ್ 26ರಂದು ಒಂದು ವರ್ಷ ಪೂರೈಸಲಿದೆ. ಇದೇ ವೇಳೆ ಹೋರಾಟ ಇನ್ನಷ್ಟು ತೀವ್ರಗೊಳಿಸುವ ಸೂಚನೆಯನ್ನ ರೈತ ಮುಖಂಡ ರಾಕೇಶ್ ಟಿಕಾಯತ್ ನೀಡಿದ್ದಾರೆ. 26ರ ಒಳಗೆ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ ರವಾನಿಸಿದ್ದಾರೆ.

ಈ ಕುರಿತಂತೆ ದೆಹಲಿಯಲ್ಲಿ ಮಾತನಾಡಿರುವ ಅವರು, ಗಾಜಿಪುರ ಗಡಿ ಈ ಮೊದಲು ರೈತ ಕ್ರಾಂತಿಯ ಕೇಂದ್ರವಾಗಿತ್ತು. ಆದರೆ. ಇದೀಗ ನಮ್ಮ ಮನೆಯಾಗಿ ಬದಲಾಗಿದೆ. ಕೇಂದ್ರ ಸರ್ಕಾರದ ಎಲ್ಲಾ ಮೂರು ಕೃಷಿ ಕಾನೂನುಗಳ ಹಿಂತೆಗೆದುಕೊಂಡ ದಿನವೇ ನಾವು ದೀಪಾವಳಿ ಆಚರಿಸುತ್ತೇವೆ. ಈ ಗಡಿಯೇ ನನ್ನ ಮನೆ ರೈತರೆ ನನ್ನ ಕುಟುಂಬ ಎಂದಿದ್ದಾರೆ.

ಮುಂದುವರೆದು ಮಾತನಾಡಿ, ರಾಜನು ಅಹಂಕಾರಿಯಾದಾಗ ಆ ರಾಜ್ಯ ನಾಶವಾಗುತ್ತದೆ. ರಾಜ ಒಳ್ಳೆಯವನಾಗದಿದ್ದರೆ ಜನರಿಗೆ ಸಮಸ್ಯೆಯಾಗುತ್ತದೆ. ನವೆಂಬರ್ 26ರ ಒಳಗೆ ರೈತರ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಗಡುವು ನೀಡಲಾಗಿದೆ. ಒಂದು ವೇಳೆ ಸರ್ಕಾರ ವಿಫಲವಾದರೆ ಪ್ರತಿಭಟನೆಗೆ ಹೊಸ ರೂಪ ನೀಡಲಾಗುತ್ತದೆ ಎಂದಿದ್ದಾರೆ.

ರೈತರ ಆಂದೋಲನವು ಸಾಮಾನ್ಯ ಜನರ ಪ್ರತಿಭಟನೆಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಸೇಬು ಬೆಳೆಯುವ ರೈತರು ನಾಶವಾಗಿದ್ದಾರೆ. ಹಿಮಾಚಲ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ರೈತ ಚಳವಳಿ ಕಾರಣವಾಗಿದೆ ಎಂದಿದ್ದಾರೆ.

ಓದಿ: ಮೊದಲ ಬಾರಿಗೆ ಡ್ರೋನ್​ ಮೂಲಕ ಬೆಳೆಗೆ ರಸಗೊಬ್ಬರ ಸಿಂಪಡಣೆ : ಇಫ್ಕೋ ಹೊಸ ಪ್ರಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.