ETV Bharat / bharat

'ಸಹಕಾರ' ಅಧ್ಯಕ್ಷನಿಗೆ ಶಾಕ್​​: ಭ್ರಷ್ಟಾಚಾರ ವಿರೋಧಿ ಅಧಿಕಾರಿಗಳಿಂದ 21.2 ಕೆ.ಜಿ ಚಿನ್ನ ಜಪ್ತಿ

author img

By

Published : Oct 23, 2021, 4:47 AM IST

Updated : Oct 23, 2021, 5:20 AM IST

DVAC seized 21.2 kg gold,10 luxary cars from premises of co-operative president R.Elangovan
ಸಹಕಾರ ಬ್ಯಾಂಕೊಂದರ ಅಧ್ಯಕ್ಷನಿಗೆ ಶಾಕ್​​: ಭ್ರಷ್ಟಾಚಾರ ವಿರೋಧಿ ಅಧಿಕಾರಿಗಳಿಂದ 21.2 ಕೆ.ಜಿ ಚಿನ್ನ ಜಪ್ತಿ

ತಮಿಳುನಾಡಿನ ಮಾಜಿ ಸಿಎಂ ಇ.ಪನ್ನೀರ್​ಸೆಲ್ವಂ ಅವರಿಗೆ ಆಪ್ತನಾಗಿರುವ ಆರ್. ಇಳಂಗೋವನ್​ಗೆ ಸಂಬಂಧಿಸಿದ ಸ್ಥಳಗಳ ಮೇಲೆ DVAC ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಚೆನ್ನೈ, ತಮಿಳುನಾಡು: ಸಹಕಾರ ಬ್ಯಾಂಕೊಂದರ ಅಧ್ಯಕ್ಷರಾಗಿರುವ ಆರ್. ಇಳಂಗೋವನ್​ಗೆ ಸಂಬಂಧಿಸಿದ ಸ್ಥಳಗಳ ಮೇಲೆ ತಮಿಳುನಾಡು ಜಾಗೃತ ನಿರ್ದೇಶನಾಲಯ ಮತ್ತು ಭ್ರಷ್ಟಾಚಾರ ವಿರೋಧಿ ದಳದ (DVAC) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಸುಮಾರು 29.7 ಲಕ್ಷ ರೂಪಾಯಿ ನಗದು, 10 ಐಷಾರಾಮಿ ಕಾರುಗಳು, 2 ವೋಲ್ವೋ ಬಸ್, 21.2 ಕೆಜಿ ಚಿನ್ನ, 282 ಕೆಜಿ ಬೆಳ್ಳಿ ಮತ್ತು 3 ಹಾರ್ಡ್​ ಡಿಸ್ಕ್ ಹಾಗೂ ಇತರ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ಇಳಂಗೋವನ್​​ಗೆ ಸಂಬಂಧಿಸಿದ 26 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಸೇಲಂನಲ್ಲಿ 16 ಸ್ಥಳಗಳು, ನಮಕ್ಕಲ್​ನಲ್ಲಿ 2 ಸ್ಥಳಗಳು, ಚೆನ್ನೈನಲ್ಲಿ 2 ಸ್ಥಳಗಳು, ತಿರುಚ್ಚಿಯ 4 ಸ್ಥಳಗಳು ಹಾಗೂ ಕರೂರ್​ನಲ್ಲಿರುವ ಇಳಂಗೋವನ್​ಗೆ ಸಂಬಂಧಿಸಿದ ಸ್ಥಳದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ಮುಂದುವರೆಸಲಾಗಿದೆ. ಇನ್ನು ಇಳಂಗೋವನ್ ತಮಿಳುನಾಡಿನ ಮಾಜಿ ಸಿಎಂ ಇ.ಪನ್ನೀರ್​ಸೆಲ್ವಂ ಅವರಿಗೆ ಆಪ್ತನಾಗಿದ್ದನು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಉತ್ತರಾಖಂಡ ಟ್ರೆಕ್ಕಿಂಗ್ ದುರಂತ: ಏಳಕ್ಕೇರಿದ ಸಾವಿನ ಸಂಖ್ಯೆ, ಇಬ್ಬರಿಗಾಗಿ ಶೋಧ

Last Updated :Oct 23, 2021, 5:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.