ETV Bharat / bharat

ಹಿಂದೂ-ಮುಸ್ಲಿಂ ಭಾವೈಕ್ಯತೆ: ದೀಪಾವಳಿಗೆ ನಿಜಾಮುದ್ದೀನ್ ದರ್ಗಾದಲ್ಲಿ ಬೆಳಗಿದ ಐಕ್ಯತೆಯ 'ಹಣತೆ'

author img

By

Published : Nov 14, 2020, 9:49 PM IST

Hazrat Nizamuddin
ನಿಜಾಮುದ್ದೀನ್

ದೀಪಾವಳಿ ಹಬ್ಬದ ಪ್ರಯುಕ್ತ ಹಜರತ್ ನಿಜಾಮುದ್ದೀನ್ ಆಲಿಯಾ ದರ್ಗಾದಲ್ಲಿ 'ದಿಯಾ' ದೀಪ ಹಚ್ಚಿ ಅಲಂಕಾರ ಮಾಡಲಾಗಿದೆ. ಹಜರತ್ ಮಹಬೂಬ್-ಇ-ಇಲಾಹಿಯ ಮುಸ್ಲಿಮೇತರ ಅನುಯಾಯಿಗಳು ಕೂಡ ಈ ದರ್ಗಾಕ್ಕೆ ಭೇಟಿ ಕೊಡುತ್ತಾರೆ. ಅವರುದೀಪಗಳನ್ನು ಬೆಳಗಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ.

ನವದೆಹಲಿ: ದೀಪಾವಳಿ ಅತ್ಯಂತ ಜನಪ್ರಿಯ ಹಿಂದೂ ಹಬ್ಬಗಳಲ್ಲಿ ಒಂದು. ಕತ್ತಲೆಯ ವಿರುದ್ಧ ಬೆಳಕಿನ ಜಯ, ಕೆಟ್ಟದ್ದರ ವಿರುದ್ಧ ಒಳ್ಳೆಯದರ ಗೆಲುವು, ಅಜ್ಞಾನದ ಮೇಲಿನ ಜ್ಞಾನದ ಸವಾರಿ ಎಂಬುದನ್ನು ಇದು ಪ್ರತಿನಿಧಿಸುತ್ತದೆ. ಹೀಗಾಗಿ ಜಗತ್ತಿನಾದ್ಯಂತ ಇರುವ ಹಿಂದೂಗಳು ಇದನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಾರೆ.

ಹಿಂದೂಗಳ ಪವಿತ್ರ ಹಬ್ಬಕ್ಕೆ ಮುಸ್ಲಿಂ ಸಮುದಾಯದವರೂ ಕೈಜೋಡಿಸಿದ್ದು, ರಾಷ್ಟ್ರ ರಾಜಧಾನಿಯಲ್ಲಿನ ಪ್ರಸಿದ್ಧ ದರ್ಗಾವೊಂದು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂದೇಶ ಸಾರಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ಹಜರತ್ ನಿಜಾಮುದ್ದೀನ್ ಆಲಿಯಾ ದರ್ಗಾದಲ್ಲಿ ದೀಪ ಹಚ್ಚಿ ಅಲಂಕಾರ ಮಾಡಲಾಗಿದೆ. ದರ್ಗಾ ಸಮಿತಿಯ ಪೀರ್ಜಾಡಾ ಅಲ್ತಮಾಶ್ ನಿಜಾಮಿ ಈ ಬಗ್ಗೆ ಮಾತನಾಡಿ, ಮುಸ್ಲಿಮೇತರರು ಸಹ ಹಜರತ್ ಮಹಬೂಬ್-ಇ-ಇಲಾಹಿಯ ಅನುಯಾಯಿಗಳಿದ್ದಾರೆ. ಅವರು ದರ್ಗಾಕ್ಕೆ ಭೇಟಿ ಕೊಡುತ್ತಾರೆ. ತಮ್ಮ ಹಬ್ಬಗಳ ಆಚರಣೆಗೆ ಇಲ್ಲಿಗೆ ಬರುತ್ತಾರೆ. ಅವರು 'ದಿಯಾ' ದೀಪಗಳನ್ನು ಸಹ ಬೆಳಗಿಸುತ್ತಾರೆ. ಪ್ರಾರ್ಥನೆಗೆ ದರ್ಗಾಗಳು ಎಲ್ಲರಿಗೂ ವೇದಿಕೆಯಾಗಿವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.