ETV Bharat / bharat

ಮೋದಿ ಅಭಿಮಾನಿ ಮಂಗಲ್​ನನ್ನು ವಶಕ್ಕೆ ಪಡೆದ ದೆಹಲಿ ಪೊಲೀಸ್​: ಮುಂದೇನಾಯ್ತು?

author img

By

Published : Sep 18, 2021, 8:02 AM IST

delhi-police-arrested-rikshaw-driver-mangal-kewat-near-the-prime-minister-office
ಮೋದಿ ಅಭಿಯಾನಿ ಮಂಗಲ್​ನನ್ನು ವಶಕ್ಕೆ ಪಡೆದ ದೆಹಲಿ ಪೊಲೀಸರು: ಮುಂದೆನಾಯ್ತು..?

ಸೆಪ್ಟೆಂಬರ್ 17ರಂದು ಪ್ರಧಾನಿ ಮೋದಿ ಹುಟ್ಟುಹಬ್ಬ ಹಿನ್ನೆಲೆ, ದೆಹಲಿಗೆ ಬಂದಿದ್ದ ಅಭಿಮಾನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಆತನ ಹಿನ್ನೆಲೆ ತಿಳಿದು ಬಿಡುಗಡೆ ಮಾಡಿದ್ದಾರೆ.

ನವದೆಹಲಿ : ಪ್ರಧಾನಿ ಮೋದಿಯ ಅಭಿಮಾನಿಯಾದ ಬನಾರಸ್ ಮೂಲದ ಆಟೋ ರಿಕ್ಷಾ ಚಾಲಕ ಮಂಗಲ್ ಕೇವಟ್ ಎಂಬಾತನನ್ನು ಪ್ರಧಾನಮಂತ್ರಿ ಕಾರ್ಯಾಲಯದ ಬಳಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 16ಕ್ಕೆ ರೈಲಿನ ಮೂಲಕ ಬನಾರಸ್​ನಿಂದ ದೆಹಲಿಗೆ ಬಂದಿದ್ದ ಮಂಗಲ್ ಕೇವಟ್​​​ ಪ್ರಧಾನ ಮಂತ್ರಿ ಕಾರ್ಯಾಲಯದ ಬಳಿ ಬಂದಿದ್ದರು. ಈ ವೇಳೆ ಅನುಮಾನಗೊಂಡ ಚಾಣಕ್ಯ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು.

ಮುಂದೇನಾಯ್ತು...?

ಪ್ರಧಾನಿ ಮೋದಿಯ ಅಭಿಮಾನಿ ಎಂದು ತಿಳಿಯದ ಪೊಲೀಸರು ಮಂಗಲ್​ ಕೇವಟ್​​​ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಪ್ರಧಾನಮಂತ್ರಿ ಕಾರ್ಯಾಲಯವನ್ನು ಪೊಲೀಸರು ಸಂಪರ್ಕಿಸಿದಾಗ, ಆತ ಮೋದಿ ಅಭಿಮಾನಿ ಎಂಬುದು ಗೊತ್ತಾಗಿದೆ. ಸ್ಥಳಕ್ಕಾಗಮಿಸಿದ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಮಂಗಲ್​ ಕೇವಟ್​​​ನನ್ನು ಪೊಲೀಸರಿಂದ ಬಿಡಿಸಿದ್ದಾರೆ.

ಮಂಗಲ್​ ಕೇವಟ್​ ಬಗ್ಗೆ ಮತ್ತಷ್ಟು..

ಮಂಗಲ್ ಕೇವಟ್​​ 2014ರಿಂದ ರಾಜಘಾಟ್​ ಅನ್ನು ಪ್ರತಿದಿನ ಸ್ವಚ್ಛಗೊಳಿಸುತ್ತಿದ್ದವರು. ಇದರಿಂದಾಗಿ ಪ್ರಧಾನಿ ಮೋದಿ ಈತನ ಕಾರ್ಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮಗಳ ಮದುವೆಗೂ ಕೂಡಾ ಮೋದಿಗೆ ಮಂಗಲ್ ಆಹ್ವಾನ ನೀಡಿದ್ದರು. ಆದರೆ ಮೋದಿ ತಾವು ಬರದಿದ್ದರೂ, ಶುಭ ಸಂದೇಶವೊಂದನ್ನು ಕಳಿಸಿದ್ದರು.

ಇದಾದ ನಂತರ ಮಂಗಲ್ 2019ರ ಜುಲೈ 6ರಂದು ಪ್ರಧಾನಿ ಮೋದಿಯನ್ನು ಬಡಾಲಾಲ್​​ಪುರದಲ್ಲಿರುವ ದೀನ್​ದಯಾಳ್ ಉಪಾಧ್ಯಾಯ ಹಸ್ತಕಲಾ ಸಂಕುಲ್ ಎಂಬಲ್ಲಿ 2020ರ ಫೆಬ್ರವರಿ 16ರಂದು ಮತ್ತೊಮ್ಮೆ ಮಂಗಲ್ ಪ್ರಧಾನಿಯನ್ನು ಭೇಟಿಯಾಗಿದ್ದರು.

ಈಟಿವಿ ಭಾರತದೊಂದಿಗೆ ಮಂಗಲ್​..

'ಈಟಿವಿ ಭಾರತ'ದೊಂದಿಗೆ ಈ ಕುರಿತು ಮಾತನಾಡಿರುವ ಮಂಗಲ್, ಪ್ರಧಾನಿ ಕಾರ್ಯಾಲಯದ ಬಳಿ ತೆರಳಿದಾಗ ನನ್ನ ವೇಷ-ಭೂಷಣ ನೋಡಿ, ದೆಹಲಿ ಪೊಲೀಸರು ನನ್ನನ್ನು ಕರೆದೊಯ್ದರು. ಕೆಲ ಗಂಟೆಗಳ ಕಾಲ ಅಲ್ಲಿಯೇ ಕುಳಿತಿದ್ದೆ. ನಂತರ ನನ್ನ ಕೋರಿಕೆಯ ಮೇರೆಗೆ ಪೊಲೀಸರು ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿಗಳೊಂದಿಗೆ ಮಾತನಾಡಿದರು. ನಂತರ ಅಲ್ಲಿನ ಅಧಿಕಾರಿಗಳು ನನ್ನನ್ನು ಪೊಲೀಸ್ ಠಾಣೆಯಿಂದ ಬಿಡಿಸಿದರು. ತಾನೀಗ ಬನಾರಸ್​ಗೆ ಬರುತ್ತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸ್ವತಃ ಲಸಿಕೆ ಅಭಾವ ಸೃಷ್ಟಿಸಿ ಇದೀಗ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ: ಕಾಂಗ್ರೆಸ್ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.