ETV Bharat / bharat

ಕೊವೊವಾಕ್ಸ್​​ ಕೋವಿಡ್ -19 ಲಸಿಕೆ ಉತ್ಪಾದನೆ ಪ್ರಾರಂಭಿಸಿದ ಸೀರಮ್ ಸಂಸ್ಥೆ

author img

By

Published : Jun 25, 2021, 7:30 PM IST

Updated : Jun 25, 2021, 7:56 PM IST

vaccine
vaccine

ಕೊವೊವಾಕ್ಸ್​​ ಕೋವಿಡ್ -19 ಲಸಿಕೆ ಉತ್ಪಾದನೆ ಪ್ರಾರಂಭಿಸಿದ ಸೀರಮ್ ಸಂಸ್ಥೆ

ಕೊವೊವಾಕ್ಸ್ ಎಸ್‌ಐಐ ಉತ್ಪಾದಿಸುವ ಎರಡನೇ ಕೋವಿಡ್ -19 ಲಸಿಕೆ ಆಗಲಿದೆ. ಎಸ್‌ಐಐ ಈಗಾಗಲೇ ಭಾರತದಲ್ಲಿ ಮತ್ತು ವಿಶ್ವದ ಇತರ ದೇಶಗಳಿಗೆ ಅಸ್ಟ್ರಾಜೆನೆಕಾ/ಕೋವಿಶೀಲ್ಡ್ ಪೂರೈಸುತ್ತಿದೆ..

ಪುಣೆ (ಮಹಾರಾಷ್ಟ್ರ): ಜಾಗತಿಕ ಲಸಿಕೆ ತಯಾರಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಕೋವಿಡ್-19 ಲಸಿಕೆ ಕೊವೊವಾಕ್ಸ್ ಅನ್ನು ಪುಣೆಯ ತನ್ನ ಸ್ಥಾವರದಲ್ಲಿ ಉತ್ಪಾದಿಸಲು ಪ್ರಾರಂಭಿಸಿದೆ. ಕೊವೊವಾಕ್ಸ್ ಅನ್ನು ಅಮೆರಿಕಾದ ಜೈವಿಕ ತಂತ್ರಜ್ಞಾನ ಕಂಪನಿ ನೊವಾವಾಕ್ಸ್ ಇಂಕ್ ಅಭಿವೃದ್ಧಿಪಡಿಸಿದೆ.

ಈ ಕುರಿತು ಟ್ವಿಟರ್ ಮೂಲಕ ಪ್ರಕಟಿಸಿದ ಎಸ್‌ಐಐ, "ಹೊಸ ಮೈಲಿಗಲ್ಲು ತಲುಪಿದ್ದೇವೆ. ಈ ವಾರ ನಾವು ಪುಣೆಯಲ್ಲಿ ನಮ್ಮ ಮೊದಲ ಬ್ಯಾಚ್‌ನ ಕೊವೊವಾಕ್ಸ್ ಉತ್ಪಾದನೆ ಪ್ರಾರಂಭಿಸಿದೆವು" ಎಂದು ಹೇಳಿದೆ.

ಎಸ್‌ಐಐ ಪ್ರಕಾರ, ಕೊವಾವ್ಯಾಕ್ಸ್ ಲಸಿಕೆ ಶೇಕಡಾ 89ರಷ್ಟು ಪರಿಣಾಮಕಾರಿತ್ವವನ್ನು ತೋರಿಸಿದೆ ಮತ್ತು ಕೊರೊನಾ ವೈರಸ್‌ನ ರೂಪಾಂತರದ ವಿರುದ್ಧವೂ ಹೋರಾಡುತ್ತದೆ.

ಕಳೆದ ಮಾರ್ಚ್​ನಲ್ಲಿ, ಎಸ್‌ಐಐ ಸಿಇಒ ಆದರ್ ಪೂನವಾಲ್ಲಾ ಕೊವೊವಾಕ್ಸ್‌ನ ಕ್ಲಿನಿಕಲ್ ಪ್ರಯೋಗಗಳು ದೇಶದಲ್ಲಿ ಪ್ರಾರಂಭವಾಗಿವೆ ಮತ್ತು ಈ ವರ್ಷದ ಸೆಪ್ಟೆಂಬರ್ ವೇಳೆಗೆ ಅದರ ಉತ್ಪಾದನೆ ಪ್ರಾರಂಭಿಸಲು ಕಂಪನಿ ಆಶಿಸಿದೆ ಎಂದು ಹೇಳಿದ್ದರು.

ಕೊವೊವಾಕ್ಸ್ ಎಸ್‌ಐಐ ಉತ್ಪಾದಿಸುವ ಎರಡನೇ ಕೋವಿಡ್ -19 ಲಸಿಕೆ ಆಗಲಿದೆ. ಎಸ್‌ಐಐ ಈಗಾಗಲೇ ಭಾರತದಲ್ಲಿ ಮತ್ತು ವಿಶ್ವದ ಇತರ ದೇಶಗಳಿಗೆ ಅಸ್ಟ್ರಾಜೆನೆಕಾ/ಕೋವಿಶೀಲ್ಡ್ ಪೂರೈಸುತ್ತಿದೆ.

Last Updated :Jun 25, 2021, 7:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.