ETV Bharat / bharat

ಗುಣವಾಗದ ಕಾಯಿಲೆ.. ಏಳು ವರ್ಷದ ಮಗನನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ..

author img

By

Published : Jul 24, 2023, 2:16 PM IST

couple committed suicide after killing their son
ಏಳು ವರ್ಷದ ಮಗನನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ

couple committed suicide: ಬುದ್ಧಿಮಾಂದ್ಯನಾಗಿದ್ದ ಮಗನ ಬಗ್ಗೆ ಮಾನಸಿಕವಾಗಿ ನೊಂದಿದ್ದ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕನ್ಯಾಕುಮಾರಿ (ತಮಿಳುನಾಡು): ಏಳು ವರ್ಷದ ಮಗನನ್ನು ಕೊಂದು ನಂತರ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕನ್ಯಾಕುಮಾರಿ ಜಿಲ್ಲೆಯ ತುಕಲೆ ಪ್ರದೇಶದಲ್ಲಿ ಜುಲೈ 22ರಂದು ನಡೆದಿದೆ. ಜಿಲ್ಲೆಯ ಮುಕಿಲಂಕುಡಿಯಿರಪ್ಪು ಪ್ರದೇಶದ 40 ವರ್ಷದ ಮುರಳೀಧರನ್, 36 ವರ್ಷದ ಶೈಲಜಾ ಹಾಗೂ 7 ವರ್ಷದ ಮಗ ಮೃತಪಟ್ಟವರು.

ಮುರಳೀಧರನ್ ಹಾಗೂ ಜೈವಿಕ ತಂತ್ರಜ್ಞಾನ ಪದವೀಧರೆಯಾಗಿದ್ದ ಶೈಲಜಾ 2010ರಲ್ಲಿ ವಿವಾಹವಾಗಿದ್ದರು. ದಂಪತಿಗೆ 7 ವರ್ಷದ ಮಗನಿದ್ದನು. ಎಂಇ, ಬಿಎಲ್ ಪದವೀಧರರಾಗಿದ್ದ ಮುರಳೀಧರ್​ ಬೆಂಗಳೂರಿನ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ನೆಲೆಸಿದ್ದ ದಂಪತಿ ಮೂರು ವರ್ಷಗಳ ಹಿಂದೆ ತುಕಲೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ನಂತರದಲ್ಲಿ ಐಟಿ ಕಂಪನಿ ಕೆಲಸ ತೊರೆದ ಮುರಳೀಧರನ್ ನಾಗರಕೋಯಿಲ್ ನ್ಯಾಯಾಲಯದಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದರು.

ಶೈಲಜಾ ಅವರ ತಂದೆ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಮಗಳ ಮನೆಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದರು. ಎಂದಿನಂತೆ ಸಂಜೆ ಹಾಲು ತೆಗೆದುಕೊಂಡು ಹೋದಾಗ ಮನೆ ಬಾಗಿಲು ಹಾಕಿದ್ದರಿಂದ, ಮಗಳನ್ನು ತಂದೆ ಜೋರಾಗಿ ಕರೆದಿದ್ದಾರೆ. ಆದರೂ ಮಗಳು ಮನೆ ಬಾಗಿಲು ತೆರೆಯದ ಕಾರಣ, ಅನುಮಾನಗೊಂಡು ತಂದೆ ನೆರೆಹೊರೆಯವರ ಸಹಾಯದೊಂದಿಗೆ ಮನೆಯ ಬಾಗಿಲು ಮುರಿದಿದ್ದಾರೆ. ಬಾಗಿಲು ಒಡೆಯುತ್ತಿದ್ದಂತೆ ಅಳಿಯ ಮುರಳೀಧರನ್​ ಮನೆಯ ಹಾಲ್​ನಲ್ಲಿ, ಮಗಳು ಶೈಲಜಾ ಕೋಣೆಯೊಂದರಲ್ಲಿ, ಮೊಮ್ಮಗ ಬೆಡ್​ ಮೇಲೆ ಶವವಾಗಿ ಬಿದ್ದಿದ್ದರು. ನಂತರ ಅವರು ತುಕಲೆ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಡಿಎಸ್ಪಿ ಉದಯಸೂರ್ಯನ್ ನೇತೃತ್ವದ ಪೊಲೀಸರು ಸ್ಥಳಕ್ಕಾಗಮಿಸಿ ಮೂವರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸರಿಪಳ್ಳಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ದಂಪತಿಗೆ ಮದುವೆಯಾಗಿ 6 ವರ್ಷ ಮಕ್ಕಳಾಗಿರಲಿಲ್ಲ. 7 ವರ್ಷಗಳ ಹಿಂದೆ ಗಂಡು ಮಗು ಜನಿಸಿತ್ತು. ಆರಂಭದಲ್ಲಿ ಆರೋಗ್ಯವಂತ ಮಗುವಾಗಿದ್ದ ಆತ ಕ್ರಮೇಣ ಬುದ್ಧಿಮಾಂದ್ಯ (autism) ಕಾಯಿಲೆಗೆ ತುತ್ತಾಗಿದ್ದನು. ಈ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವಾಗ, ಕೊರೊನಾ ಅವಧಿಯಲ್ಲಿ ಕೆಲಸ ಕಳೆದುಕೊಂಡಿದ್ದ ಮುರಳೀಧರನ್ ಅವರು ತಮ್ಮ ಪತ್ನಿಯ ತವರು ತುಕಲೆಗೆ ಬಂದು ನೆಲೆಸಿದ್ದರು.

ಪ್ರಸ್ತುತ ಬಿ.ಎಲ್ ಓದಿದ್ದ ಮುರಳೀಧರ್​ ನಾಗರಕೋಯಿಲ್ ನ್ಯಾಯಾಲಯದಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದರು. ಮುರಳೀಧರನ್ ಮತ್ತು ಶೈಲಜಾ ಅವರಿಗೆ ಬೇರೆ ಮಕ್ಕಳಿಲ್ಲದಿದ್ದರೂ, ಅವರ ಒಬ್ಬನೇ ಮಗ ಸಹ ಬುದ್ಧಿಮಾಂದ್ಯ ಕಾಯಿಲೆಯಿಂದ ಬಳಲುತ್ತಿರುವುದು ಅವರಲ್ಲಿ ಹೆಚ್ಚಿನ ಒತ್ತಡ ಉಂಟುಮಾಡಿತ್ತು. ಹಾಗೂ ತಮ್ಮ ಪ್ರೀತಿಯ ಮಗನ ಕಾಯಿಲೆಯನ್ನು ಹಣವಿದ್ದರೂ ಗುಣಪಡಿಸಲಾಗದೆ ಇರುವುದಕ್ಕೆ ಮಾನಸಿಕ ಯಾತನೆ ಅನುಭವಿಸುತ್ತಿದ್ದರು ಎನ್ನಲಾಗಿದೆ. ಮನನೊಂದ ದಂಪತಿ ಮೊದಲು ತಮ್ಮ ಮಗನನ್ನು ಕೊಂದು ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

ಇದನ್ನೂ ಓದಿ: Pune Crime: ಪತ್ನಿ, ಸೋದರಳಿಯನ ಗುಂಡಿಕ್ಕಿ ಕೊಂದು ಆತ್ಮಹತ್ಯೆಗೆ ಶರಣಾದ ಸಹಾಯಕ ಪೊಲೀಸ್​ ಕಮಿಷನರ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.