ETV Bharat / bharat

sim swapping : ಹೊಸ ಸಿಮ್ ಖರೀದಿಸಿ, 19 ಲಕ್ಷ ರೂಪಾಯಿ ವಂಚನೆ

author img

By

Published : Mar 23, 2022, 4:28 PM IST

CHEATING: MAN STOLEN RS.19 LAKHS WITH CHANGING SIM SWAP IN ANDHRA PRADESH
sim swapping: ಹೊಸ ಸಿಮ್ ಖರೀದಿಸಿ, 19 ಲಕ್ಷ ರೂಪಾಯಿ ವಂಚನೆ

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವಿಜಯವಾಡ ನಗರದಲ್ಲಿ ವ್ಯಕ್ತಿಯೋರ್ವ ಬಿಎಸ್​ಎನ್​ಎಲ್ ಸೆಂಟರ್​ನ ಸಿಬ್ಬಂದಿ ಮಾಡಿದ ಯಡವಟ್ಟಿನಿಂದಾಗಿ ಸುಮಾರು 19 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ..

ಕೃಷ್ಣಾ ಜಿಲ್ಲೆ,ಆಂಧ್ರಪ್ರದೇಶ : ಆತನ ಹೆಸರು ಬೋನೆಪುಡಿ ದುರ್ಗಾಪ್ರಸಾದ್, ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವಿಜಯವಾಡ ನಗರದ ಗಾಯತ್ರಿನಗರದ ನಿವಾಸಿ. ರೈಲ್ವೆ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ಇವರು ಬಿಎಸ್​ಎನ್​​ಎಲ್​ನ ಸಿಮ್ ಕಾರ್ಡ್ ಅನ್ನು ಬಳಸುತ್ತಿದ್ದರು. ಕೆಲವು ದಿನಗಳ ಹಿಂದೆ ಅವರ ಸಿಮ್ ಕಾರ್ಡ್ ಇದ್ದಕ್ಕಿದ್ದಂತೆ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಿದೆ.

ಈ ಬಗ್ಗೆ ದೂರು ಸಲ್ಲಿಸಲು ಸಮೀಪದಲ್ಲಿರುವ ಚುಟ್ಟುಗುಂಟಾ ಬಿಎಸ್​ಎನ್​ಎಲ್​​ ಸೆಂಟರ್​ಗೆ ತೆರಳಿದಾಗ ಅವರಿಗೆ ಆಘಾತವೊಂದು ಕಾದಿತ್ತು. ಬೋನೆಪುಡಿ ದುರ್ಗಾಪ್ರಸಾದ್ ಮಾತ್ರವಲ್ಲದೇ, ಅವರ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸಿದ ಬಿಎಸ್​ಎನ್​ಎಲ್​​ ಸೆಂಟರ್​ನ ಸಿಬ್ಬಂದಿಗೂ ಕೂಡ ಅಚ್ಚರಿಯಾಗಿತ್ತು.

ಶಾಕಿಂಗ್ ವಿಚಾರವೆಂದರೆ ದುರ್ಗಾಪ್ರಸಾದ್ ಅವರ ಬ್ಯಾಂಕ್ ಖಾತೆಗಳಿಂದ ಸುಮಾರು 19 ಲಕ್ಷ ರೂಪಾಯಿ ಮಾಯವಾಗಿತ್ತು. ಬಿಎಸ್​ಎನ್​ಎಲ್​ ಸಿಬ್ಬಂದಿಯ ಸಣ್ಣ ತಪ್ಪು ಮತ್ತು ಅಜಾಗರೂಕತೆಗೆ ದುರ್ಗಾಪ್ರಸಾದ್ ಹಣವನ್ನು ಕಳೆದುಕೊಂಡಾಗಿತ್ತು.

ದುರ್ಗಾಪ್ರಸಾದ್ ಹಣ ಕಳೆದುಕೊಂಡಿದ್ದು ಹೇಗೆ?: ದುರ್ಗಾಪ್ರಸಾದ್ ಅವರ ಬಿಎಸ್​ಎನ್​ಎಲ್ ಸಿಮ್ ಸ್ಥಗಿತವಾವುದಕ್ಕೂ ಮುಂಚೆ, ಓರ್ವ ಅಪರಿಚಿತ ವ್ಯಕ್ತಿ ಬಿಎಸ್​ಎನ್​ಎಲ್​ ಸೆಂಟರ್​​ಗೆ ಆಗಮಿಸಿದ್ದು, ತನ್ನನ್ನೇ ದುರ್ಗಾಪ್ರಸಾದ್ ಎಂಬುದಾಗಿ ಬಿಂಬಿಸಿಕೊಂಡಿದ್ದಾನೆ. ದುರ್ಗಾಪ್ರಸಾದ್ ಅವರ ಆಧಾರ್​ ಕಾರ್ಡ್​ ಜೆರಾಕ್ಸ್​ ಪ್ರತಿಯೊಂದಿಗೆ ಆಗಮಿಸಿದ್ದ ಆತ, ಅದೇ ನಂಬರ್​ನ ಬೇರೆ ಸಿಮ್​ ನೀಡುವಂತೆ ಕೇಳಿದ್ದಾನೆ.

ಬೇರೆ ಪ್ರೂಫ್​​ಗಳನ್ನು ಕೇಳದ ಬಿಎಸ್​ಎನ್​ಎಲ್​ ಸಿಬ್ಬಂದಿ ಆ ವ್ಯಕ್ತಿಗೆ ಬಿಎಸ್​ಎನ್​​ಎಲ್​ ಸಿಮ್ ಅನ್ನು ನೀಡಿದ್ದಾರೆ. ಹೊಸ ಬಿಎಸ್​ಎನ್​​ಎಲ್ ಸಿಮ್ ಸಕ್ರಿಯವಾದ ನಂತರ ಹಳೇ ನಂಬರ್ ಸ್ಥಗಿತಗೊಂಡಿದೆ. ಹಳೆಯ ಅಂದರೆ ದುರ್ಗಾಪ್ರಸಾದ್ ಬಳಿ ಇದ್ದ ಸಿಮ್ ಸ್ಥಗಿತವಾದ ನಂತರ, ತನ್ನ ಬಳಿಯಿದ್ದ ಹೊಸ ಸಿಮ್ ಕಾರ್ಡ್ ಆ್ಯಕ್ಟಿವೇಟ್ ಮಾಡಿಕೊಂಡಿದ್ದ ಆರೋಪಿ, ಮೊಬೈಲ್​ ನಂಬರ್​ಗೆ ಲಿಂಕ್ ಆಗಿದ್ದ ಮೂರು ಬ್ಯಾಂಕ್​ ಅಕೌಂಟ್​​ಗಳಿಂದ ಸುಮಾರು 19 ಲಕ್ಷ ರೂ. ದೋಚಿದ್ದಾನೆ. ಈಗ ಸಂತ್ರಸ್ತ ದುರ್ಗಾಪ್ರಸಾದ್ ಸೈಬರ್ ಕ್ರೈಮ್ ಪೊಲೀಸರ ಮೊರೆ ಹೋಗಿದ್ದು, ಪರಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ದೊಡ್ಡಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಗಂಡನನ್ನೇ ಬರ್ಬರವಾಗಿ ಕೊಂದ ಹೆಂಡತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.