ETV Bharat / bharat

ರಾಜಸ್ಥಾನದ ಕೆಲವೆಡೆ ಸಿಬಿಐ ದಾಳಿ.. 3ಕೋಟಿ ಮೌಲ್ಯದ ಚಿನ್ನ ನಗದು ವಶ

author img

By

Published : Oct 5, 2022, 4:38 PM IST

ಸಿಬಿಐ ದಾಳಿ
ಸಿಬಿಐ ದಾಳಿ

ರಾಜಸ್ಥಾನದ ರಾಜಸಮಂದ್​ನಲ್ಲಿ ಸಿಬಿಐ ತಂಡ ದಾಳಿ ನಡೆಸಿ 1.5 ಕೋಟಿ ರೂಪಾಯಿ ನಗದು ಹಾಗೂ 1.5 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದೆ.

ರಾಜಸಮಂದ್ (ರಾಜಸ್ಥಾನ): ಕೇಂದ್ರೀಯ ತನಿಖಾ ದಳದ (ಸಿಬಿಐ) ತಂಡ ಮಂಗಳವಾರ ನಡೆಸಿದ ದಾಳಿಯಲ್ಲಿ 1.5 ಕೋಟಿ ರೂಪಾಯಿ ನಗದು ಮತ್ತು 1.5 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದೆ. ನಗರದ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಟರ್‌ಪೋಲ್ ಮತ್ತು ಎಫ್‌ಬಿಐನಿಂದ ಇನ್‌ಪುಟ್‌ಗಳನ್ನು ಸ್ವೀಕರಿಸಿದ ನಂತರ ಸಿಬಿಐ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಅಧಿಕಾರಿಯೊಬ್ಬರು ತಿಳಿಸಿದಂತೆ, ಸೈಬರ್ ವಂಚನೆಗೆ ಸಂಬಂಧಿಸಿದಂತೆ ವಿದೇಶದಿಂದ ದಾಖಲಾದ ಹಲವಾರು ಆನ್‌ಲೈನ್ ಪ್ರಕರಣಗಳ ಆಧಾರದ ಮೇಲೆ ಕ್ರಮವನ್ನು ಪ್ರಾರಂಭಿಸಲಾಗಿದೆ. ದೆಹಲಿಯ ಸಿಬಿಐ ಪ್ರಧಾನ ಕಚೇರಿಯಲ್ಲಿ ಪ್ರಕರಣ ದಾಖಲಿಸಿದ ನಂತರ ಕೇಂದ್ರವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಸುಮಾರು 10 ಸ್ಥಳಗಳಲ್ಲಿ ದಾಳಿ ನಡೆಸಿತು. ರಾಜಸಮಂದ್‌ನಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಆರೋಪಿಯನ್ನು ಭನ್ವರ್ ಸಿಂಗ್ ದಿಯೋರಾ ಎಂದು ಗುರುತಿಸಲಾಗಿದೆ.

ರಾಜಸ್ಥಾನ ಹೊರತುಪಡಿಸಿ ಇತರ ಹಲವು ರಾಜ್ಯಗಳಲ್ಲಿ ಸಿಬಿಐ ದಾಳಿ ನಡೆಸಿತು. ಸಿಬಿಐ ಪ್ರಧಾನ ಕಚೇರಿಯಿಂದ ಬಂದ ಮಾಹಿತಿಯ ಪ್ರಕಾರ, ಪಂಜಾಬ್, ರಾಜಸ್ಥಾನ, ಗುಜರಾತ್, ಕರ್ನಾಟಕ ಮತ್ತು ಅಸ್ಸೋಂನಲ್ಲಿ ದಾಳಿಗಳನ್ನು ಪ್ರಾರಂಭಿಸಲಾಗಿದೆ. ಹಲವು ರಾಜ್ಯಗಳಲ್ಲಿ ಜಂಟಿ ಕಾರ್ಯಾಚರಣೆ ಅಡಿ ಸಿಬಿಐನಿಂದ ಕ್ರಮ ನಡೆಯುತ್ತಿದೆ ಎಂದರು.

ಓದಿ: ದೇಶ್ಯಾದ್ಯಂತ ಎನ್​ಐಎ ಬಳಿಕ ಸಿಬಿಐ ದಾಳಿ.. ಕೇಂದ್ರಾಡಳಿತ, 20 ರಾಜ್ಯಗಳು ಸೇರಿ 56 ಕಡೆಯಲ್ಲಿ ಶೋಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.