ETV Bharat / bharat

ಕೊರೊನಾ ಸೋಂಕಿಗೆ ಥಾಯ್ಲೆಂಡ್​​ನ 'ಕಾಲ್​ ಗರ್ಲ್'​​ ಯುಪಿಯಲ್ಲಿ ಬಲಿ!

author img

By

Published : May 8, 2021, 5:26 PM IST

call girl from thailand died
call girl from thailand died

ಥಾಯ್ಲೆಂಡ್​​​​​​ನಿಂದ ಉತ್ತರ ಪ್ರದೇಶಕ್ಕೆ ಆಗಮಿಸಿದ್ದ ಕಾಲ್​ ಗರ್ಲ್ ಒಬ್ಬಳು ಕೋವಿಡ್​ನಿಂದ ಸಾವನ್ನಪ್ಪಿದ್ದು, ಆಕೆಯ ಅಂತ್ಯಕ್ರಿಯೆ ನಡೆಸಲಾಗಿದೆ.

ಲಖನೌ(ಉತ್ತರ ಪ್ರದೇಶ): ಮಹಾಮಾರಿ ಕೊರೊನಾ ಸೋಂಕಿಗೆ ಪ್ರತಿದಿನ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ರಾಜಧಾನಿ ಲಖನೌದಲ್ಲಿ ವಿಚಿತ್ರ ವಿದ್ಯಮಾನ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

call girl from thailand died
ಕೋವಿಡ್​ನಿಂದ ಕಾಲ್​ ಗರ್ಲ್​ ನಿಧನ

ಮೇ. 3ರಂದು ಡಾ. ರಾಮ್​ ಮನೋಹರ್​ ಲೋಹಿಯಾ ಆಸ್ಪತ್ರೆಗೆ ದಾಖಲಾಗಿದ್ದ ಥಾಯ್ಲೆಂಡ್​​​​ ಹುಡುಗಿ ಕೋವಿಡ್​ನಿಂದ ಸಾವನ್ನಪ್ಪಿದ್ದು, ಇದೀಗ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಮಹಿಳೆ ಸಾವನ್ನಪ್ಪುತ್ತಿದ್ದಂತೆ ಥಾಯ್ಲೆಂಡ್​​ ರಾಯಭಾರ ಕಚೇರಿ ಸಂಪರ್ಕಿಸಿ, ಕುಟುಂಬಗಳಿಗೆ ಮೃತದೇಹ ಹಸ್ತಾಂತರ ಮಾಡಲು ಪ್ರಯತ್ನ ನಡೆಸಲಾಯಿತು. ಆದರೆ ಅದರಲ್ಲಿ ಯಶಸ್ವಿಯಾಗದಿದ್ದಾಗ ಲಖನೌದ ಬೈಕುಂತ್​ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.

ಥಾಯ್ಲೆಂಡ್​​ನಿಂದ ಯುವತಿ ಯುಪಿಗೆ ಬಂದಿದ್ದೇಕೆ!?

ಕಳೆದ 10 ದಿನಗಳ ಹಿಂದೆ ಪ್ರಖ್ಯಾತ ಉದ್ಯಮಿಯ ಮಗನೊಬ್ಬನೊಂದಿಗೆ ಏಜೆಂಟ್ ಮೂಲಕ ಕಾಲ್​ಗರ್ಲ್ ಥಾಯ್ಲೆಂಡ್​​​​​​​ನಿಂದ ಲಖನೌಗೆ ಕರೆಸಿಕೊಂಡಿದ್ದನು. ಆದರೆ ಮಾರ್ಚ್​​ 31ರ ರಾತ್ರಿ ಆಕೆ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೊಳಗಾಗಿದ್ದಾಳೆ. ಈ ವೇಳೆ ರಾಮ್​ ಮನೋಹರ್​ ಲೋಹಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಇರುವುದು ದೃಢಗೊಂಡಿದೆ. ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ: ಡಿಆರ್​ಡಿಒ ಅಭಿವೃದ್ಧಿಪಡಿಸಿದ ಕೋವಿಡ್ ಔಷಧಕ್ಕೆ ಡಿಸಿಜಿಐ ಅನುಮೋದನೆ

ಥಾಯ್ಲೆಂಡ್​​ ಕಾಲ್​ಗರ್ಲ್​​ ಸಾವಿನ ನಂತರ ಇದೀಗ ತನಿಖೆ ನಡೆಸಲಾಗುತ್ತಿದ್ದು, ಲಖನೌದಲ್ಲಿ ಅಂತಾರಾಷ್ಟ್ರೀಯ ಮಾಂಸ ದಂಧೆ ಜೋರಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.