ETV Bharat / bharat

ಪ್ರಶ್ನೆಪತ್ರಿಕೆ ಸೋರಿಕೆ ವಿಚಾರ: ಯೋಗಿ ಸರ್ಕಾರವನ್ನ ಮತ್ತೆ ಟೀಕಿಸಿದ ಬಿಜೆಪಿ ಸಂಸದ ವರುಣ್​ ಗಾಂಧಿ

author img

By

Published : Dec 2, 2021, 10:18 PM IST

varun gandhi
ಸಂಸದ ವರುಣ್​ ಗಾಂಧಿ

ಯುವಕರಿಗೆ ಸರ್ಕಾರಿ ನೌಕರಿ ಸಿಗುತ್ತಿಲ್ಲ. ಒಂದು ವೇಳೆ ಸಿಗುವ ಅವಕಾಶ ಇದ್ದರೆ ಈ ರೀತಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತದೆ. ಸರ್ಕಾರ ಪರೀಕ್ಷೆಯೊಂದನ್ನು ನಡೆಸಿದರೆ ವಿದ್ಯಾರ್ಥಿಗಳು ಅದರ ಫಲಿತಾಂಶಕ್ಕಾಗಿ ವರ್ಷಾನುಗಟ್ಟಲೇ ಕಾಯಬೇಕು ಎಂದು ಬಿಜೆಪಿ ಸಂಸದ ವರುಣ್​ ಗಾಂಧಿ ಟೀಕೆ ಮಾಡಿದ್ದಾರೆ.

ಹೈದರಾಬಾದ್​: ಕೇಂದ್ರ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ಸಂಸದ ವರುಣ್​ ಗಾಂಧಿ ಇದೀಗ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ​ ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಉತ್ತರಪ್ರದೇಶದಲ್ಲಿ ನ.28ರಂದು ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ (UPTET)ಪತ್ರಿಕೆಯು, ಪರೀಕ್ಷೆಗೂ ಮುನ್ನವೇ ಸೋರಿಕೆಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಇದನ್ನು ಯೋಗಿ ಆದಿತ್ಯನಾಥ್​ ಸರ್ಕಾರದ ಅಸಮರ್ಥತೆ ಎಂದು ಆರೋಪಿಸಿರುವ ವರುಣ್​ ಗಾಂಧಿ ತಮ್ಮ ಅಸಮಾಧಾನ ಟ್ವೀಟ್​ ಮಾಡುವ ಮೂಲಕ ಹೊರಹಾಕಿದ್ದಾರೆ.

ಇದನ್ನೂ ಓದಿ: 'ಸಾವರಿನ್​ ಗೋಲ್ಡ್​ ಬಾಂಡ್​'ಗಳು ಈಗ ಆರ್​ಬಿಐನಲ್ಲೂ ಲಭ್ಯ.. ರಿಟೇಲ್​ ಡೈರೆಕ್ಟ್​ ಪೋರ್ಟಲ್​ ಚೆಕ್​ ಮಾಡಿ

'ಮೊದಲೇ ಯುವಕರಿಗೆ ಸರ್ಕಾರಿ ನೌಕರಿ ಸಿಗುತ್ತಿಲ್ಲ. ಒಂದು ವೇಳೆ ಸಿಗುವ ಅವಕಾಶ ಇದ್ದರೆ ಈ ರೀತಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತದೆ. ಸರ್ಕಾರ ಪರೀಕ್ಷೆಯೊಂದನ್ನು ನಡೆಸಿದರೆ ವಿದ್ಯಾರ್ಥಿಗಳು ಅದರ ಫಲಿತಾಂಶಕ್ಕಾಗಿ ವರ್ಷಾನುಗಟ್ಟಲೇ ಕಾಯಬೇಕು. ಇದರ ಮಧ್ಯೆ ಹಲವಾರು ಹಗರಣಗಳೂ ಸುಳಿಯುತ್ತವೆ ಎಂದು ಹರಿಹಾಯ್ದಿದ್ದಾರೆ.

1.25 ಕೋಟಿ ಉದ್ಯೋಗಾಸಕ್ತರು ರೈಲ್ವೆ ಇಲಾಖೆಯ ಗ್ರೂಪ್​ ಡಿ ಹುದ್ದೆಗೆ ನಡೆದ ಪರೀಕ್ಷಾ ಫಲಿತಾಂಶಕ್ಕಾಗಿ 2 ವರ್ಷದಿಂದ ಕಾಯುತ್ತಿದ್ದಾರೆ. ಸೇನಾ ನೇಮಕಾತಿಯಲ್ಲೂ ಇದೇ ರೀತಿ ಆಗಿದೆ. ಹೀಗಾದರೆ ದೇಶದ ಯುವಕರು ಎಲ್ಲಿಯತನಕ ತಾಳ್ಮೆಯಿಂದರಬೇಕು? ಎಂದು ಪ್ರಶ್ನಿಸಿ ಟ್ವೀಟ್​ ಮಾಡಿದ್ದಾರೆ. ಬಿಜೆಪಿ ಸಂಸದ ವರುಣ್​ ಗಾಂಧಿ ಅವರು ಈ ಹಿಂದೆಯೂ ಕೃಷಿ ಕಾಯ್ದೆಗಳ ವಿಚಾರವಾಗಿ ಯೋಗಿ ಆದಿತ್ಯನಾಥ್​ ಸರ್ಕಾರವನ್ನು ಟೀಕಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.