ETV Bharat / bharat

ಬಿಜೆಪಿ ಶಾಸಕನ ಶರ್ಟ್​ ಹರಿದು ಹಲ್ಲೆಗೈದ ಪ್ರಕರಣ: 300 ಜನರ ವಿರುದ್ಧ ಎಫ್​ಐಆರ್​

author img

By

Published : Mar 28, 2021, 10:59 AM IST

BJP MLA thrashed, clothes torn by protesting farmers in Punjab's Muktsar
ಪಂಜಾಬ್​ನಲ್ಲಿ ಬಿಜೆಪಿ ಶಾಸಕನ ಮೇಲೆ ಹಲ್ಲೆ

ಮಾಧ್ಯಮಗೋಷ್ಠಿಯಲ್ಲಿ ಭಾಗಿಯಾಗಲು ಅಬೋಹಾರ್ ಶಾಸಕ ಅರುಣ್ ನಾರಂಗ್ ಮಾಲೌಟ್​ಗೆ ಬಂದಾಗ ಪ್ರತಿಭಟನಾನಿರತ ರೈತರು ಅವರನ್ನು ಸುತ್ತುವರೆದಿದ್ದಾರೆ. ಬಳಿಕ ಅವರ ಮೇಲೆ ಮತ್ತು ಅವರ ವಾಹನಗಳ ಮೇಲೆ ಕಪ್ಪು ಶಾಯಿ ಎರಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 250 ರಿಂದ 300 ಕ್ಕೂ ಹೆಚ್ಚು ಜನರ ಮೇಲೆ ಎಫ್​ಐಆರ್​ ದಾಖಲಿಸಲಾಗಿದೆ.

ಚಂಡೀಗಢ: ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಪಂಜಾಬ್‌ನಲ್ಲಿ ಉದ್ರಿಕ್ತಗೊಂಡಿದೆ. ಮುಕ್ತಸರ್‌ ಜಿಲ್ಲೆಯ ಮಾಲೌಟ್‌ನಲ್ಲಿ ಪ್ರತಿಭಟನಾನಿರತ ರೈತರ ಗುಂಪೊಂದು ಶನಿವಾರ ಬಿಜೆಪಿ ಶಾಸಕರೊಬ್ಬರ ಮೇಲೆ ಹಲ್ಲೆನಡೆಸಿ, ಬಟ್ಟೆ ಹರಿದು ಹಾಕಿದೆ ಎಂಬ ಆರೋಪ ಕೇಳಿಬಂದಿದೆ.

ಉದ್ರಿಕ್ತ ರೈತರ ಗುಂಪೊಂದು ಅಬೋಹರ್ ಬಿಜೆಪಿ ಶಾಸಕ ಅರುಣ್ ನಾರಂಗ್ ಮೇಲೆ ಮುತ್ತಿಗೆ ಹಾಕಿ ಬಟ್ಟೆ ಹಾರಿದು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಪಂಜಾಬ್​ನಲ್ಲಿ ಬಿಜೆಪಿ ಶಾಸಕರ ಮೇಲೆ ಹಲ್ಲೆ ನಡೆಸಿ, ಶರ್ಟ್​ ಹರಿದ ಪ್ರಕರಣ

ಮಾಧ್ಯಮಗೋಷ್ಠಿಯಲ್ಲಿ ಭಾಗಿಯಾಗಲು ಅಬೋಹಾರ್ ಶಾಸಕ ಅರುಣ್ ನಾರಂಗ್ ಮಾಲೌಟ್​ಗೆ ಬಂದಾಗ ಪ್ರತಿಭಟನಾನಿರತ ರೈತರು ಅವರನ್ನು ಸುತ್ತುವರೆದಿದ್ದಾರೆ. ಬಳಿಕ ಅವರ ಮೇಲೆ ಮತ್ತು ಅವರ ವಾಹನಗಳ ಮೇಲೆ ಕಪ್ಪು ಶಾಯಿ ಎರಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ಕಾಂಗ್ರೆಸ್​ನಲ್ಲಿ ಆಂತರಿಕ ತಿಕ್ಕಾಟ; ಚುನಾವಣಾ ಪ್ರಚಾರಕ್ಕೆ ಹಿನ್ನಡೆ

ಈ ವೇಳೆ ಕೆಲವು ಪೊಲೀಸ್ ಸಿಬ್ಬಂದಿ, ಶಾಸಕ ಮತ್ತು ಸ್ಥಳೀಯ ಮುಖಂಡರನ್ನು ಅಂಗಡಿಯೊಂದರ ಒಳಗೆ ಕರೆದೊಯ್ದರು. ಬಳಿಕ ಶಾಸಕರು ಅಂಗಡಿಯಿಂದ ಹೊರಬಂದಾಗ ಪ್ರತಿಭಟನಾಕಾರರು ನಾರಂಗ್‌ ಅವರ ಮೇಲೆ ಹಲ್ಲೆ ನಡೆಸಿ, ಅವರ ಬಟ್ಟೆಗಳನ್ನು ಹರಿದು ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಸಂಸದೆ ಮುಖಕ್ಕೆ ರಾಸಾಯನಿಕ ಬಣ್ಣ ಬಳಿದ ದುಷ್ಕರ್ಮಿಗಳು; ಟಿಎಂಸಿ ಕಾರಣ ಎಂದ ಬಿಜೆಪಿ

ನಾರಂಗ್ ಮೇಲಿನ ದಾಳಿಯನ್ನು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತೀವ್ರವಾಗಿ ಖಂಡಿಸಿದ್ದು, ರಾಜ್ಯದಲ್ಲಿ ಶಾಂತಿ ಭಂಗಗೊಳಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

300 ಜನರ ವಿರುದ್ಧ ಎಫ್‌ಐಆರ್ ದಾಖಲು: ಬಿಜೆಪಿ ಶಾಸಕ ಅರುಣ್ ನಾರಂಗ್ ಮೇಲಿನ ಹಲ್ಲೆ ಮತ್ತು ಬಟ್ಟೆ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ 250 ರಿಂದ 300 ಕ್ಕೂ ಹೆಚ್ಚು ಜನರ ಮೇಲೆ ಎಫ್​ಐಆರ್​ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.