ETV Bharat / bharat

ಬಡಮಕ್ಕಳ ಊಟಕ್ಕೆ ಆಧಾರ್ ಕಡ್ಡಾಯ, ಶ್ರೀಮಂತರಿಗೆ ತೆರಿಗೆ ವಿನಾಯಿತಿ: ರಾಹುಲ್ ವಾಗ್ದಾಳಿ

author img

By

Published : Jul 1, 2022, 11:41 AM IST

Updated : Jul 1, 2022, 11:51 AM IST

BJP has created two Indias, one for rich, one for poor: Rahul
BJP has created two Indias, one for rich, one for poor: Rahul

ತಮ್ಮ ಪಾಲಿನ ಒಂದು ಹೊತ್ತಿನ ಪೌಷ್ಟಿಕ ಆಹಾರ ಪಡೆಯಲು ಬಡ ಮಕ್ಕಳು ಆಧಾರ್ ಕಾರ್ಡ್ ತೋರಿಸಬೇಕಾಗಿದೆ ಎಂದು ರಾಹುಲ್ ಗಾಂಧಿ ಗಂಭೀರವಾಗಿ ಆರೋಪಿಸಿದ್ದಾರೆ.

ನವದೆಹಲಿ: ಬಡವರ ಭಾರತ ಹಾಗೂ ಶ್ರೀಮಂತರ ಭಾರತ ಹೀಗೆ ಎರಡು ವಿಭಿನ್ನ ಭಾರತಗಳನ್ನು ಬಿಜೆಪಿ ಸೃಷ್ಟಿ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಅಂಬುಜಾ ಸಿಮೆಂಟ್ ಹಾಗೂ ಎಸಿಸಿ ಸಿಮೆಂಟ್​ ಕಂಪನಿಗಳಲ್ಲಿನ 6.38 ಬಿಲಿಯನ್ ಡಾಲರ್ ಮೊತ್ತದ ಹೋಲ್ಸಿಮ್ ಶೇರ್​ ಅನ್ನು ಅದಾನಿ ಗ್ರೂಪ್ ಯಾವುದೇ ತೆರಿಗೆ ಪಾವತಿಸದೇ ಸ್ವಾಧೀನಪಡಿಸಿಕೊಳ್ಳುತ್ತದೆ. ಅದೇ ಸಮಯಕ್ಕೆ ತಮ್ಮ ಪಾಲಿನ ಒಂದು ಹೊತ್ತಿನ ಪೌಷ್ಟಿಕ ಆಹಾರ ಪಡೆಯಲು ಬಡ ಮಕ್ಕಳು ಆಧಾರ್ ಕಾರ್ಡ್ ತೋರಿಸಬೇಕಾಗಿದೆ ಎಂದು ರಾಹುಲ್ ಗಾಂಧಿ ಗಂಭೀರವಾಗಿ ಆರೋಪಿಸಿದ್ದಾರೆ.

ಎರಡು ಭಾರತಗಳು: ತೆರಿಗೆ ವಿನಾಯಿತಿ ಹಾಗೂ ಸಾಲ ಮನ್ನಾಗಳ ಮೂಲಕ ಶ್ರೀಮಂತ ಮಿತ್ರರು. ಬಡ ಮಕ್ಕಳು ಅಂಗನವಾಡಿಗಳಲ್ಲಿ ಆಹಾರ ಪಡೆಯಲು ಆಧಾರ್ ತೋರಿಸಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಭಾರತದಲ್ಲಿ ಶ್ರೀಮಂತ ಹಾಗೂ ಬಡವರ ಮಧ್ಯೆ ಉಂಟಾಗುತ್ತಿರುವ ದೊಡ್ಡ ಅಂತರದ ಬಗ್ಗೆ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಆಗಾಗ ವಾಗ್ದಾಳಿ ನಡೆಸುತ್ತಿದೆ.

ಇದನ್ನು ಓದಿ:ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ ಸಂಜಯ್​ ರಾವುತ್​: ಟ್ವೀಟ್​​ ಮೂಲಕ ಉದ್ದವ್ ಬಂಟನ ಸ್ಪಷ್ಟನೆ

Last Updated :Jul 1, 2022, 11:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.