ETV Bharat / bharat

ತಾಲಿಬಾನ್ ಜೊತೆ ಮಾತನಾಡುವ ಬಿಜೆಪಿ ರೈತರ ಜೊತೆಗೆ ಮಾತನಾಡುವುದಿಲ್ಲ: ಸುರ್ಜೇವಾಲಾ

author img

By

Published : Sep 7, 2021, 8:17 PM IST

ಹರಿಯಾಣದಲ್ಲಿ ಇಂಟರ್​ನೆಟ್​ ಸ್ಥಗಿತಗೊಳಿಸುವ ಮೂಲಕ ರೈತರ ಧ್ವನಿಯನ್ನು ಹತ್ತಿಕ್ಕಲಾಗಿದೆ ಎಂದು ಸಿಎಂ ಮನೋಹರ್​ ಲಾಲ್​ ಖಟ್ಟರ್ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುರ್ಜೇವಾಲಾ
ಸುರ್ಜೇವಾಲಾ

ನವದೆಹಲಿ: ಐದು ಜಿಲ್ಲೆಗಳಲ್ಲಿ ಇಂಟರ್​ನೆಟ್​ ಸ್ಥಗಿತಗೊಳಿಸುವ ಮೂಲಕ ರೈತರ ಧ್ವನಿಯನ್ನು ಹತ್ತಿಕ್ಕಿದ್ದಕ್ಕಾಗಿ ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರದ ಮೇಲೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಮೂರು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು ಹರಿಯಾಣದ ಕರ್ನಾಲ್​​ನಲ್ಲಿ ಮಿನಿ-ಸೆಕ್ರೆಟರಿಯೇಟ್ (ಜಿಲ್ಲಾಧಿಕಾರಿ ಇರುವ ಕಚೇರಿ) ಮುತ್ತಿಗೆ ಯತ್ನ ಮಾಡಿದ್ದಾರೆ. ಇದಕ್ಕೆ ಕಾರಣವಾಗಿದ್ದು ಆಗಸ್ಟ್ 28ರಂದು ನಡೆದ ಘಟನೆ. ಅಂದು ಪ್ರತಿಭಟನಾನಿರತ ರೈತರ ಮೇಲೆ ಜಿಲ್ಲಾಧಿಕಾರಿ ಪೊಲೀಸರಿಗೆ ಲಾಠಿಬೀಸುವ ಆದೇಶ ನೀಡಿರುವ ಜೊತೆಗೆ, ಪ್ರತಿಭಟನಾನಿರತ ತಲೆತೆಗೆಯುವ ಬಗ್ಗೆ ಹೇಳಿದ್ದರು ಎಂದು ರೈತ ಮುಖಂಡರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಐಎಎಸ್‌ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡುವಂತೆ ರೈತ ಸಂಘಟನೆಗಳು ಒತ್ತಾಯಿಸುತ್ತಿವೆ.

ಇದರ ಭಾಗವಾಗಿ ಇಂದು ಮಿನಿ-ಸೆಕ್ರೆಟರಿಯೇಟ್‌ವರೆಗೆ ದೊಡ್ಡಸಂಖ್ಯೆಯಲ್ಲಿ ಆಗಮಿಸಿದ ರೈತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ಇನ್ನೊಂದೆಡೆ, ರೈತರ ಮಹಾಪಂಚಾಯತ್ ಆರಂಭಕ್ಕೂ ಮುನ್ನವೇ ಸಿಎಂ ಮನೋಹರ್‌ಲಾಲ್​ ಖಟ್ಟರ್ ಸರ್ಕಾರ ಮಂಗಳವಾರ ಮಧ್ಯರಾತ್ರಿಯಿಂದ ಮುಂದಿನ 24 ಗಂಟೆಗಳ ಕಾಲ ಕರ್ನಾಲ್​, ಕುರುಕ್ಷೇತ್ರ, ಕೈತಾಲ್​, ಜಿಂದ್​ ಹಾಗೂ ಪಾಣಿಪತ್​ - ಈ ಐದು ಜಿಲ್ಲೆಗಳಲ್ಲಿ ಮೊಬೈಲ್​ ಇಂಟರ್​ನೆಟ್​ ಹಾಗೂ ಎಸ್​ಎಂಎಸ್​ ಸೇವೆ ಸ್ಥಗಿತಗೊಳಿಸಿದೆ. ಕಾನೂನು ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಂಡಿರುವುದಾಗಿ ಸರ್ಕಾರ ಹೇಳಿದ್ದು, ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಕಿಸಾನ್ ಮಹಾ ಪಂಚಾಯತ್​ಗೆ ಕಾಂಗ್ರೆಸ್ ಬೆಂಬಲ.. ಹರಿಯಾಣ ಎಐಸಿಸಿ ಉಸ್ತುವಾರಿ ಹೇಳಿದ್ದೇನು?

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ, ಖಟ್ಟರ್ ಸರ್ಕಾರವು ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ತಾಲಿಬಾನ್ ಜೊತೆ ಮಾತನಾಡುವ ನಿಮ್ಮ ಪಕ್ಷ ರೈತರ ಜೊತೆಗೆ ಮಾತನಾಡುವುದಿಲ್ಲ ಎಂದು ಟೀಕಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.