ETV Bharat / bharat

ಈ ಬಾರಿ ಶಬರಿಮಲೆಗೆ ತೆರಳುವ ಭಕ್ತರಿಗೆ ಕೋವಿಡ್​ ನೆಗೆಟಿವ್​ ವರದಿ ಕಡ್ಡಾಯ: ಸಮಿತಿ ಶಿಫಾರಸು

author img

By

Published : Oct 6, 2020, 6:14 PM IST

Restrict the number of pilgrims
ಸಮಿತಿ ಶಿಫಾರಸು

ಶಬರಿಮಲೆಯಲ್ಲಿ ನಡೆಯಲಿರುವ ಮಂಡಲ- ಮಕರವಿಳಕ್ಕು ವೇಳೆ ಭೇಟಿ ನೀಡುವ ಭಕ್ತರಿಗೆ ಕೋವಿಡ್​ ನೆಗೆಟಿವ್​ ರಿಪೋರ್ಟ್​ ಕಡ್ಡಾಯಗೊಳಿಸುವಂತೆ ಮತ್ತು ಭಕ್ತರ ಸಂಖ್ಯೆಯನ್ನು ದಿನಕ್ಕೆ 1000 ಕ್ಕೆ ಸೀಮಿತಗೊಳಿಸುವಂತೆ ತಜ್ಞರ ಸಮಿತಿ ಕೇರಳ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ತಿರುವನಂತಪುರಂ: ವಾರ್ಷಿಕ ಮಂಡಲ ಪೂಜೆ ಮಹೋತ್ಸವ ಮತ್ತು ಮಕರವಿಳಕ್ಕು ಉತ್ಸವ ಅವಧಿಯಲ್ಲಿ ಕೇರಳದ ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯನ್ನು ದಿನಕ್ಕೆ ಗರಿಷ್ಠ ಸಾವಿರಕ್ಕೆ ಸೀಮಿತಗೊಳಿಸಬೇಕು ಎಂದು ರಾಜ್ಯ ಸರ್ಕಾರ ರಚಿಸಿದ ತಜ್ಞರ ಸಮಿತಿ ಶಿಫಾರಸು ಮಾಡಿದೆ.

ಕೋವಿಡ್​- 19 ರ ನಡುವೆಯೂ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಯಾತ್ರಿಕರಿಗೆ ಅವಕಾಶ ಕುರಿತ ಮಾನದಂಡಗಳನ್ನು ಮೌಲ್ಯಮಾಪನ ಮಾಡಲು ಮತ್ತು ನಿಗದಿಪಡಿಸಲು ರಾಜ್ಯ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ರಾಜ್ಯ ಆರೋಗ್ಯ, ಮತ್ತು ಗೃಹ ವ್ಯವಹಾರ ಸಚಿವ , ದೇವಸ್ವಂ ಮತ್ತು ಪೊಲೀಸ್ ಮಹಾನಿರ್ದೇಶಕರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಸಮಿತಿಯು ತನ್ನ ವರದಿ ಸಿದ್ಧ ಪಡಿಸಿದ್ದು, ಇದರಲ್ಲಿ ಶಬರಿಮಲೆಗೆ ಬರುವ ಯಾತ್ರಿಗಳು ಕಡ್ಡಾಯವಾಗಿ ಕೊರೊನಾ ನೆಗೆಟಿವ್​ ವರದಿ ಹೊಂದಿರಬೇಕು ಎಂದು ಸೂಚಿಸಿದೆ. ಶಬರಿಮಲೆ ಬೆಟ್ಟ ಹತ್ತಲು ಅನುಮತಿ ನೀಡುವ ಮುಂಚೆಯೇ ಕೋವಿಡ್​ ವರದಿ ಪರಿಶೀಲಿಸಲು ಶಿಫಾರಸು ಮಾಡಿದೆ. ಈ ವರದಿಯನ್ನು ಶೀಘ್ರದಲ್ಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ಗೆ ಸಮಿತಿ ಹಸ್ತಾಂತರಿಸಲಿದೆ.

ದೇವಾಲಯಕ್ಕೆ ದಿನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯನ್ನು ನಿರ್ಬಂಧಿಸಲು ಮತ್ತು ಕೋವಿಡ್​ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಮಾಡಲು ದೇವರ ದರ್ಶನದ ವೇಳೆ ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ಭಕ್ತರನ್ನು ನಿಯಂತ್ರಿಸಲು ತೀರ್ಮಾನಿಸಲಾಗಿದೆ.

ಆದರೆ ರಾಜ್ಯದಲ್ಲಿ ಕೊರೊನಾ ಏರಿಕೆ ದರ ತೀವ್ರತೆ ಪಡೆದಿರುವುದರಿಂದ, ಆರೋಗ್ಯ ಇಲಾಖೆಯಲ್ಲಿ ಈಗಾಗಲೇ ಸಿಬ್ಬಂದಿ ಕೊರತೆ ಇದೆ. ಇಂತಹ ಸನ್ನಿವೇಶದಲ್ಲಿ ಶಬರಿಮಲೆಗೆ ಕೊರೊನಾ ವಾರಿಯರ್ಸ್​​ ಗಳನ್ನು ನಿಯೋಜಿಸುವುದು ಕಷ್ಟವಾಗುತ್ತದೆ ಎಂದು ಸಮಿತಿ ಸಿಎಂ ಗೆ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.