ETV Bharat / bharat

ವಿಶ್ವದ ಅತಿದೊಡ್ಡ ಕೋವಿಡ್​ ವ್ಯಾಕ್ಸಿನೇಷನ್​ ಅಭಿಯಾನಕ್ಕೆ ಚಾಲನೆ ನೀಡಲಿರುವ ಪ್ರಧಾನಿ

author img

By

Published : Jan 16, 2021, 7:19 AM IST

ಕಳೆದೊಂದು ವರ್ಷದಿಂದ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‌ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಭಾರತ ರೆಡಿಯಾಗಿದೆ. ಇಂದು ಲಸಿಕೆ ವಿತರಣೆy ಬೃಹತ್​ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

Modi to launch worlds largest COVID vaccination, PM Narendra Modi to launch worlds largest COVID vaccination, COVID vaccination, COVID vaccination news, COVID vaccination latest news, ಕೋವಿಡ್​ ವ್ಯಾಕ್ಸಿನೇಷನ್​ಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ, ವಿಶ್ವದ ಅತಿದೊಡ್ಡ ಕೋವಿಡ್​ ವ್ಯಾಕ್ಸಿನೇಷನ್​ಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ, ಕೋವಿಡ್​ ವ್ಯಾಕ್ಸಿನೇಷನ್, ಕೋವಿಡ್​ ವ್ಯಾಕ್ಸಿನೇಷನ್ ಸುದ್ದಿ, ಕೋವಿಡ್​ ವ್ಯಾಕ್ಸಿನೇಷನ್ ಅಪ್​ಡೇಟ್​,
ಸಂಗ್ರಹ ಚಿತ್ರ

ನವದೆಹಲಿ: ಇಂದಿನಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶಾದ್ಯಂತ ಬೃಹತ್ ಕೋವಿಡ್-19 ವ್ಯಾಕ್ಸಿನೇಷನ್ ಲಸಿಕೆಗೆ ಚಾಲನೆ ನೀಡಲಿದ್ದಾರೆ.

ಆರಂಭಿಕ ಹಂತದಲ್ಲಿ 3 ಕೋಟಿ ಜನರಿಗೆ ಭಾರತ ಲಸಿಕೆ ನೀಡಲು ಉದ್ದೇಶಿಸಿದ್ದು, ಇದನ್ನು ಜಗತ್ತಿನ ಅತಿದೊಡ್ಡ ಲಸಿಕಾ ಅಭಿಯಾನ ಎನ್ನಲಾಗುತ್ತಿದೆ. ಬೆಳಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆ ವಿತರಣೆಗೆ ದೆಹಲಿಯಿಂದ ಚಾಲನೆ ನೀಡಲಿದ್ದಾರೆ.

ಕೋವಿಡ್ -19 ವಿರುದ್ಧದ 1.65 ಕೋಟಿ ಡೋಸ್ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನು ಆರೋಗ್ಯ ಸಂಗ್ರಹಣೆದಾರರ ಡೇಟಾಬೇಸ್ ಅನುಪಾತದಲ್ಲಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಈಗಾಗಲೇ ತಿಳಿಸಿದೆ.

ಶೇ 10ರಷ್ಟು ಮೀಸಲು ಹಾಗೂ ಪ್ರಮಾಣ ಮತ್ತು ಸರಾಸರಿ 100 ವ್ಯಾಕ್ಸಿನೇಷನನ್ನು ಗಣನೆಗೆ ತೆಗೆದುಕೊಂಡು ವ್ಯಾಕ್ಸಿನೇಷನ್ ಅವಧಿಗಳನ್ನು ಆಯೋಜಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.