ETV Bharat / bharat

ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬಳಿ 20 ಜೀವಂತ ಗುಂಡುಗಳು ಪತ್ತೆ

author img

By

Published : Dec 25, 2020, 10:10 AM IST

Passenger held with live rounds at Delhi airport
20 ಜೀವಂತ ಗುಂಡುಗಳು ಪತ್ತೆ

ಡಿ. 23 ರಂದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೋರ್ವನ ಬಳಿ ಇದ್ದ 20 ಜೀವಂತ ಗುಂಡುಗಳನ್ನು ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ನವದೆಹಲಿ: ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಸಿಬ್ಬಂದಿ ಪ್ರಯಾಣಿಕನೋರ್ವನ ಬಳಿ ಇದ್ದ 7.65 ಎಂಎಂ ಕ್ಯಾಲಿಬರ್‌ನ 20 ಜೀವಂತ ಗುಂಡುಗಳನ್ನು ಜಪ್ತಿ​ ಮಾಡಿದ್ದಾರೆ.

ಈ ಗುಂಡುಗಳನ್ನು ಇಟ್ಟುಕೊಂಡು ಪ್ರಯಾಣಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಚೆಕ್ಕಿಂಗ್​ ವೇಳೆ, ಔರಂಗಾಬಾದ್​​ನಿಂದ ಇಂಡಿಗೋ ಏರ್​​ಲೈನ್ಸ್​ ವಿಮಾನದಲ್ಲಿ ಆಗಮಿಸಿದ್ದ ಪ್ರಯಾಣಿಕನ ಹ್ಯಾಂಡ್​​ಬ್ಯಾಗ್​ನಲ್ಲಿ ಈ ಗುಂಡುಗಳು ಪತ್ತೆಯಾಗಿವೆ.

ಆರೋಪಿ ಸೂಕ್ತ ದಾಖಲೆ ನೀಡದ ಹಿನ್ನೆಲೆ ಆತನನ್ನು ದೆಹಲಿ ಪೊಲೀಸರ ವಶಕ್ಕೆ ನೀಡಿದ್ದಾಗಿ ಸಿಐಎಸ್ಎಫ್ ಮಾಹಿತಿ ನೀಡಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಓದಿ: ಜಾಗತಿಕ ಮಟ್ಟದಲ್ಲಿ ಕೋವ್ಯಾಕ್ಸಿನ್​ ಗಮನಾರ್ಹ ಸಾಧನೆ : ಐಸಿಎಂಆರ್ ಟ್ವೀಟ್​

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.