ETV Bharat / bharat

ಕೋವಿಡ್​​ ನೆಗೆಟಿವ್ ವರದಿ ಇಲ್ಲದೇ ಪುರಿ ಜಗನ್ನಾಥನ ದರ್ಶನವಿಲ್ಲ: ಬರಿಗೈಯಲ್ಲೇ ವಾಪಸ್​ ಆದ ಒಡಿಶಾ ಗವರ್ನರ್​

author img

By

Published : Jan 4, 2021, 1:14 PM IST

no covid report,Odisha governor turns back from Jagannath temple
ಜಗನ್ನಾಥ ದೇವಾಲಯದ ಒಳಗೆ ಪ್ರವೇಶಿಸಲು ಕೋವಿಡ್​ ನೆಗೆಟಿವ್​ ವರದಿ ಕಡ್ಡಾಯ

ಕೊರೊನಾ ನೆಗೆಟಿವ್​ ವರದಿ ಇಲ್ಲದ ಕಾರಣ ಒಡಿಶಾ ಗವರ್ನರ್​ ಗಣೇಶಿ ಲಾಲ್ ಪುರಿ ಜಗನ್ನಾಥ ದೇವರ ದರ್ಶನ ಪಡೆಯಲಾಗದೇ ಹಿಂದಿರುಗಿದ ಘಟನೆ ನಡೆದಿದೆ.

ಪುರಿ/ಒಡಿಶಾ:ಜಗನ್ನಾಥ ದೇವಾಲಯದ ಒಳಗೆ ಪ್ರವೇಶಿಸಲು ಕೋವಿಡ್​ ನೆಗೆಟಿವ್​ ವರದಿ ಕಡ್ಡಾಯಗೊಳಿಸಿದ್ದು, ಕೊರೊನಾ ನೆಗೆಟಿವ್​ ವರದಿ ತಂದಿಲ್ಲದ ಕಾರಣ ,ಗವರ್ನರ್​ ಗಣೇಶಿ ಲಾಲ್ ದೇವಸ್ಥಾನದ ಹೊರಗಿನ ಪ್ರವೇಶದ್ವಾರವಾದ ಲಯನ್ಸ್​ ಗೇಟ್ ಬಳಿಯೇ ದೇವರ ಭಗವಾನ್ ಜಗನ್ನಾಥನ ದರ್ಶನ ಪಡೆಯುವಂತಾಯ್ತು.

ದೇವರ ದರ್ಶನಕ್ಕೆ ಆಗಮಿಸುವ ಎಲ್ಲಾ ಭಕ್ತರು ಕೋವಿಡ್ ಪರೀಕ್ಷೆಯ ಆರ್​​ಟಿ-ಪಿಸಿಆರ್ ಅಥವಾ ರ‍್ಯಾಪಿಡ್​ ಆಂಟಿಜನ್​ ಟೆಸ್ಟ್​ ವರದಿಯನ್ನು ಜೊತೆಗೆ ತೆಗೆದುಕೊಂಡು ಬರುವಂತೆ ಸೂಚಿಸಲಾಗಿದೆ. ದೇವಾಲಯಕ್ಕೆ ಪ್ರವೇಶಿಸುವ ಸಮಯಕ್ಕಿಂತ 96 ಗಂಟೆಗಳಿಗಿಂತ ಮುಂಚಿತವಾಗಿ ಕೋವಿಡ್​ ಪರೀಕ್ಷೆ ಮಾಡಿಸುವುದು ಕಡ್ಡಾಯವಾಗಿದೆ.

ಜಗನ್ನಾಥ ದೇವಾಲಯದ ಒಳಗೆ ಪ್ರವೇಶಿಸಲು ಕೋವಿಡ್​ ನೆಗೆಟಿವ್​ ವರದಿ ಕಡ್ಡಾಯ

ಇನ್ನು ಈ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಗಣೇಶಿ ಲಾಲ್ ರಾಜ್ಯಪಾಲ ದೇವಾಲಯದ ಪ್ರವೇಶದ್ವಾರದಲ್ಲಿ ದೇವಾಲಯದ ಆಡಳಿತ ಮಂಡಳಿ ನಿಮ್ಮನ್ನು ನಿಲ್ಲಿಸಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, ನಾನಾಗೇ ಗೇಟ್‌ನಿಂದ ಹಿಂದೆ ಸರಿದೆ ಎಂದು ಹೇಳಿದರು. ಈ ಕುರಿತು ಪ್ರತಿಕ್ರಿಯಿಸಿದ ದೇವಾಲಯದ ಮುಖ್ಯ ಆಡಳಿತಾಧಿಕಾರಿ ಕ್ರಿಶನ್ ಕುಮಾರ್, ರಾಜ್ಯಪಾಲರು ದೇವಸ್ಥಾನದೊಳಗೆ ಪ್ರವೇಶಿಸಲು ಕೋವಿಡ್ ನೆಗೆಟಿವ್​ ವರದಿಯ ಅವಶ್ಯಕತೆಯ ಬಗ್ಗೆ ಸರ್ಕಾರದ ನಿರ್ಧಾರವನ್ನು ಗೌರವಿಸಿ, ದೇವಾಲಯದ ಹೊರಗೆ ಪ್ರಾರ್ಥನೆ ಸಲ್ಲಿಸಿದ್ರು ಮತ್ತು ನೆಗೆಟಿವ್ ರಿಪೋರ್ಟ್​ ಇಲ್ಲದ ಕಾರಣ ಸ್ವಯಂಪ್ರೇರಣೆಯಿಂದ ದೇವಾಲಯದೊಳಗೆ ಪ್ರವೇಶಿಸದೇ ಹಿಂದೆ ಸರಿದರು ಎಂದು ತಿಳಿಸಿದ್ರು.

ಇದನ್ನೂ ಓದಿ:‘ಪುತ್ರಿ’ಗೆ ಹೆಮ್ಮೆಯಿಂದ ಸೆಲ್ಯೂಟ್​ ಹೊಡೆದ ಪೊಲೀಸ್ ‘ತಂದೆ’

ETV Bharat Logo

Copyright © 2024 Ushodaya Enterprises Pvt. Ltd., All Rights Reserved.