ETV Bharat / bharat

ಸುಲ್ತಾನ್​ಪುರದಿಂದ ಮೇನಕಾ, ಪಿಲಿಭಿಟ್​​ನಿಂದ ವರುಣ್​ ಗಾಂಧಿ ಸ್ಪರ್ಧೆ... ಮಾರ್ಚ್​ 28ರಿಂದ ಮೋದಿ ರ‍್ಯಾಲಿ ಆರಂಭ

author img

By

Published : Mar 26, 2019, 6:53 PM IST

ವರುಣ್​ ಗಾಂಧಿ

ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವ ಬಹುಭಾಷಾ ನಟಿ ಜಯಪ್ರದಾ ರಾಮ್​​ಪುರದಿಂದ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.

ನವದೆಹಲಿ: ದೇಶದಲ್ಲೇ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದ ಪ್ರಮುಖ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಣೆ ಮಾಡಿದೆ.

ಮೇನಕಾ ಗಾಂಧಿ ಸುಲ್ತಾನ್​ಪುರದಿಂದ ಸ್ಪರ್ಧೆ ಮಾಡಲಿದ್ದು ಪುತ್ರ ವರುಣ್ ಗಾಂಧಿ ಪಿಲಿಭಿಟ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ರಾಮ್​ಶಂಕರ್​​ ಕಠೇರಿಯಾ ಎತವಾ ಕ್ಷೇತ್ರದಿಂದ ಹಾಗೂ ಬಹುಗುಣ ಜೋಶಿ ಅಲಹಾಬಾದ್​ನಿಂದ ಕಣಕ್ಕಿಳಿಯಲಿರುವ ಪ್ರಮುಖರಾಗಿದ್ದಾರೆ.

ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವ ಬಹುಭಾಷಾ ನಟಿ ಜಯಪ್ರದಾ ರಾಮ್​​ಪುರದಿಂದ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಇದರ ಜೊತೆಗೆ ಪಶ್ಚಿಮ ಬಂಗಾಳದ ಹತ್ತು ಕ್ಷೇತ್ರಗಳ ಅಭ್ಯರ್ಥಿಗಳನ್ನು ಬಿಜೆಪಿ ಇದೇ ವೇಳೆ ಘೋಷಣೆ ಮಾಡಿದೆ.

ಮಾರ್ಚ್​ 28ರಿಂದ ಮೋದಿ ರ‍್ಯಾಲಿ:

ಪ್ರಧಾನಿ ಮೋದಿ ಮಾರ್ಚ್​ 28ರಿಂದ ಅಧಿಕೃತವಾಗಿ ರ‍್ಯಾಲಿಗಳಆರಂಭಿಸಲಿದ್ದು ಮೊದಲ ದಿನ ಮೀರತ್​​, ರುದ್ರಾಪುರ, ಜಮ್ಮು ಕಾಶ್ಮೀರ ಹಾಗೂ ಎರಡನೇ ದಿನದಲ್ಲಿ ಆಂಧ್ರ ಪ್ರದೇಶ, ಒಡಿಶಾ ಹಾಗೂ ತೆಲಂಗಾಣದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Intro:Body:

ಸುಲ್ತಾನ್​ಪುರದಿಂದ ಮನೇಕಾ, ಪಿಲಿಭಿಟ್​​ನಿಂದ ವರುಣ್​ ಗಾಂಧಿ ಸ್ಪರ್ಧೆ... ಮಾರ್ಚ್​ 28ರಿಂದ ಮೋದಿ ರ‍್ಯಾಲಿ ಆರಂಭ



ನವದೆಹಲಿ: ದೇಶದಲ್ಲೇ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದ ಪ್ರಮುಖ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಣೆ ಮಾಡಿದೆ.



ಮನೇಕಾ ಗಾಂಧಿ ಸುಲ್ತಾನ್​ಪುರದಿಂದ ಸ್ಪರ್ಧೆ ಮಾಡಲಿದ್ದು ಪುತ್ರ ವರುಣ್ ಗಾಂಧಿ ಪಿಲಿಭಿಟ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ರಾಮ್​ಶಂಕರ್​​ ಕಠೇರಿಯಾ ಎತವಾ ಕ್ಷೇತ್ರದಿಂದ ಹಾಗೂ ಬಹುಗುಣ ಜೋಶಿ ಅಲಹಾಬಾದ್​ನಿಂದ ಕಣಕ್ಕಿಳಿಯಲಿರುವ ಪ್ರಮುಖರಾಗಿದ್ದಾರೆ.



ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವ ಬಹುಭಾಷಾ ನಟಿ ಜಯಪ್ರದಾ ರಾಮ್​​ಪುರದಿಂದ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.



ಮಾರ್ಚ್​ 28ರಿಂದ ಮೋದಿ ರ‍್ಯಾಲಿ:



ಪ್ರಧಾನಿ ಮೋದಿ ಮಾರ್ಚ್​ 28ರಿಂದ ಅಧಿಕೃತವಾಗಿ ರ‍್ಯಾಲಿಗಳನ್ನು ಆರಂಭಿಸಲಿದ್ದು ಮೊದಲ ದಿನ ಮೀರತ್​​, ರುದ್ರಾಪುರ, ಜಮ್ಮು ಕಾಶ್ಮೀರ ಹಾಗೂ ಎರಡನೇ ದಿನದಲ್ಲಿ ಆಂಧ್ರ ಪ್ರದೇಶ, ಒಡಿಶಾ ಹಾಗೂ ತೆಲಂಗಾಣದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.