ETV Bharat / bharat

ಹೈದರಾಬಾದ್​ನಲ್ಲಿ ಇಸ್ರೋ ವಿಜ್ಞಾನಿ ಹತ್ಯೆ!

author img

By

Published : Oct 2, 2019, 12:10 PM IST

ಹೈದರಾಬಾದ್​ನಲ್ಲಿ ಇಸ್ರೋ ವಿಜ್ಞಾನಿ ಹತ್ಯೆ

ಹೈದರಾಬಾದ್​ನ ಕೆಲಸ ಮಾಡುತ್ತಿದ್ದ ಕೇರಳ ಮೂಲದ ವಿಜ್ಞಾಯೊಬ್ಬರನ್ನ ಕೊಲೆ ಮಾಡಲಾಗಿದೆ.

ಹೈದರಾಬಾದ್: ಇಸ್ರೋದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್​ನ ವಿಜ್ಞಾನಿ ಸುರೇಶ್​ ಎಂಬುವವರನ್ನ ಅಮೀರ್​ಪೇಟ್​ನಲ್ಲಿನ ಅವರ ನಿವಾಸದಲ್ಲಿ ಕೊಲೆ ಮಾಡಲಾಗಿದೆ.

ಹೈದರಾಬಾದ್​ನಲ್ಲಿ ಇಸ್ರೋ ವಿಜ್ಞಾನಿ ಹತ್ಯೆ

ಹೈದರಾಬಾದ್​ ನಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಸುರೇಶ್​ ನಿನ್ನೆ ಕೆಲಸಕ್ಕೆ ಹಾಜರಾಗಿರಲಿಲ್ಲ. ಈ ವೇಳೆ ಅವರ ಕಚೇರಿಯಿಂದ ಸ್ನೇಹಿತರೊಬ್ಬರು ಫೋನ್​ ಮಾಡಿದ್ದಾರೆ. ಆದ್ರೆ ಸುರೇಶ್ ಫೋನ್ ರಿಸೀವ್ ಮಾಡಲಿಲ್ಲ. ಇದರಿಂದ ಅನುಮಾನಗೊಂಡು ಚೆನ್ನೈನಲ್ಲಿ ವಾಸಮಾಡುತ್ತಿದ್ದ ಅವರ ಪತ್ನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಚೆನ್ನೈನಿಂದ ಕುಟಂಬಸ್ಥರೊಂದಿಗೆ ಬಂದ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿ ಅಪಾರ್ಟ್​ಮೆಂಟ್​ನ ಬಾಗಿಲು ಮುರಿದು ನೋಡಿದಾಗ ಸುರೇಶ್ ಕೊಲೆಯಾಗಿರುವುದು ಕಂಡುಬಂದಿದೆ. ಯಾವುದೋ ಬಲವಾದ ವಸ್ತುವಿನಿಂದ ತೆಲೆ ಹಡೆದು ಕೊಲೆ ಮಾಡಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Intro:Body:

ಅಅ


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.