ETV Bharat / bharat

ದೇಶದಲ್ಲಿ ಶೇ.1.49ಕ್ಕೆ ಇಳಿದ ಕೋವಿಡ್​ ಮರಣ ಪ್ರಮಾಣ

author img

By

Published : Nov 1, 2020, 10:24 AM IST

Total number of corona cases and deaths in India
ಶೇ.1.49ಕ್ಕೆ ಇಳಿದ ಕೋವಿಡ್​ ಮರಣ ಪ್ರಮಾಣ

ಭಾರತದಲ್ಲಿ ಮಹಾಮಾರಿ ಕೋವಿಡ್​ಗೆ ​ಬಲಿಯಾದವರ ಸಂಖ್ಯೆ 1,22,111ಕ್ಕೆ ಏರಿಕೆಯಾಗಿದೆ. ಆದರೆ ಇತರ ಕೊರೊನಾ ಪೀಡಿತ ರಾಷ್ಟ್ರಗಳಿಗೆ ಹೋಲಿಸಿದರೆ ದೇಶದಲ್ಲಿ ಮಿಲಿಯನ್​ ಜನಸಂಖ್ಯೆಗೆ ಮೃತಪಟ್ಟವರ ಸಂಖ್ಯೆ ಕಡಿಮೆಯಿದೆ.

ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮಾತ್ರ ತಗ್ಗುತ್ತಿಲ್ಲ, ಸೋಂಕಿನಿಂದ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಕೂಡ ಕಡಿಮೆಯಾಗುತ್ತಿದೆ. ಸೆಪ್ಟೆಂಬರ್​ನಲ್ಲಿ ಶೇ.1.75 ರಷ್ಟಿದ್ದ ಮರಣ ಪ್ರಮಾಣ ಇದೀಗ ಶೇ.1.49ಕ್ಕೆ ಇಳಿಕೆಯಾಗಿದೆ.

Total number of corona cases and deaths in India
ಶೇ.1.49ಕ್ಕೆ ಇಳಿದ ಕೋವಿಡ್​ ಮರಣ ಪ್ರಮಾಣ

ಕಳೆದ 24 ಗಂಟೆಗಳಲ್ಲಿ 46,964 ಸೋಂಕಿತರು ಪತ್ತೆಯಾಗಿದ್ದು, 470 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 81,84,083 ಹಾಗೂ ಮೃತರ ಸಂಖ್ಯೆ 1,22,111ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರ ಪೈಕಿ 74,91,513 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಉಳಿದಂತೆ 5,70,458 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Total number of corona cases and deaths in India
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ಅಕ್ಟೋಬರ್ 31ರ ವರೆಗೆ 10,98,87,303 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 10,91,239 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.