ETV Bharat / bharat

ಹರಿಯಾಣ ರಾಜಕೀಯ ಆಟವನ್ನೇ ಬದಲಿಸಿದ ಹೂಡಾ...! ಹೀಗಿತ್ತು ಅವರ ಪಂಚ್​​

author img

By

Published : Oct 24, 2019, 11:55 PM IST

ಭೂಪಿಂದರ್​ ಸಿಂಗ್ ಹೂಡಾ

ಹರಿಯಾಣ ವಿಧಾನಸಭಾ ಚುನಾವಣೆ ಹೊರಬಿದ್ದಿದ್ದು, ಮತದಾರ ಪ್ರಭು ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಿಲ್ಲ.

ಚಂಡೀಗಢ: ಭೂಪಿಂದರ್​ ಸಿಂಗ್ ಹೂಡಾ.. ಹರಿಯಾಣದ ರಾಜ್ಯ ರಾಜಕೀಯದ ಜೇಂಟ್​ ಕಿಲ್ಲರ್​. ಯೆಸ್​​​​​ ನೆಲಕಚ್ಚಿದ್ದ ಕಾಂಗ್ರೆಸ್​ ಪಕ್ಷವನ್ನ ಪವಾಡ ಸದೃಶ್ಯ ರೀತಿಯಲ್ಲಿ ಕೆಲವೇ ದಿನಗಳಲ್ಲಿ ಬಲವರ್ದನೆ ಮಾಡಿದ ವ್ಯಕ್ತಿ.

ಎಲ್ಲ ಸಮೀಕ್ಷೆಗಳನ್ನ ಸುಳ್ಳಾಗಿಸಿ ಕಾಂಗ್ರೆಸ್​ ಅನ್ನು ಫೀನಿಕ್ಸ್​ನಂತೆ ಮೇಲೆತ್ತಿದವರು ಇದೇ ಹೂಡಾ. ಮಾಜಿ ಸಿಎಂ. ಪ್ರಸ್ತುತ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಇರಲಿ ಸರಳ ಬಹುಮತವೂ ಸಿಕ್ಕಿಲ್ಲ. 90 ವಿಧಾನಸಭಾ ಕ್ಷೇತ್ರಗಳ ಯುದ್ಧದಲ್ಲಿ ಬಿಜೆಪಿ 40 ಗೆದ್ದು ಸರಳ ಬಹುಮತ ಪಡೆಯಲು ಸಾಧ್ಯವಾಗದೇ ಮಂಡಿಯೂರಿದೆ.

Hooda
ಭೂಪಿಂದರ್​ ಸಿಂಗ್ ಹೂಡಾ

ಭೂಪಿಂದರ್​ ಸಿಂಗ್​ ಹೂಡಾ ಕಣ್ಣಕ್ಕಿಳಿಯುವವರೆಗೂ ಮನೋಹಲ್​ ಲಾಲ್​ ಖಟ್ಟರ್​ ಪ್ರತಿಪಕ್ಷಗಳನ್ನ ಅಕ್ಷರಶಃ ಒಡೆದು ಆಳಿದ್ದರು. ಕಾಂಗ್ರೆಸ್​ ಅಕ್ಷರಶಃ ನೆಲಕಚ್ಚಿತ್ತು. ಇದನ್ನೇ ದಾಳವಾಗಿ ಮಾಡಿಕೊಂಡು ಇನ್ನೊಂದು ಅವಧಿಗೆ ಅಧಿಕಾರಕ್ಕೆ ಏರಲು ಎಲ್ಲ ಸಿದ್ಧತೆ ಮಾಡಿಕೊಂಡಿತ್ತು.

ಈ ಬಾರಿ 90 ರಲ್ಲಿ 75 ಸ್ಥಾನ ಗೆದ್ದು ಅಧಿಕಾರಕ್ಕೆ ಏರುತ್ತೇವೆ ಎಂಬ ಕನಸಿನಲ್ಲಿ ಖಟ್ಟರ್​ ಕಟ್ಟುಮಸ್ತಾಗಿ ಸಿದ್ಧರಾಗಿದ್ದರು. ಆದರೆ ಭೂಪಿಂದರ್​ ಸಿಂಗ್​ ಹೂಡಾ ಅನಿರೀಕ್ಷಿತ ಎಂಟ್ರಿ ಎಲ್ಲ ಲೆಕ್ಕಾಚಾರಗಳನ್ನ ಬುಡಮೇಲು ಮಾಡಿದೆ. 75 ಆಸೆ ಹೊಂದಿದ್ದ ಬಿಜೆಪಿ 40 ಕ್ಕೆ ಏದುಸಿರು ಬಿಟ್ಟಿದೆ.

ಭೂಪಿಂದರ್​ ಸಿಂಗ್ ಹೂಡಾ

ಸೋನಿಯಾ ಕಾಂಗ್ರೆಸ್ ಅಧ್ಯಕ್ಷೆ ಆದ ಮೇಲೆ ಹಾಗೂ ಹಠ ಬಿಡದ ಭೂಪಿಂದರ್​ ಸಿಂಗ್​ ಹೂಡಾ ಪಕ್ಷದ ನಾಯಕತ್ವ ಪಡೆದು ಕಾಂಗ್ರೆಸ್​ ದ್ವಿಗುಣ ಸಾಧನೆ ಮಾಡುವಂತೆ ಮಾಡಿದ್ದಾರೆ. ಇವರ ಜತೆ ಸಾಥ್​ ಕೊಟ್ಟ ಕುಮಾರಿ ಸೆಲ್ಜಾ ಪಕ್ಷವನ್ನ ಹರಿಯಾಣದಲ್ಲಿ ಪುನರ್​ ಸ್ಥಾಪಿಸಿದ್ದಾರೆ.

ಖಟ್ಟರ್​ ಸರ್ಕಾರದ ಮೇಲೆ ಹೂಡಾ ಮುಗಿಬಿದ್ದರೆ, ಕುಮಾರಿ ಸೆಲ್ಜಾ ಪಕ್ಷವನ್ನ ತಳಮಟ್ಟದಿಂದ ಬಲ ಪಡಿಸಿ ಬಿಜೆಪಿಗೆ ಟಕ್ಕರ್ ಕೊಟ್ಟಿದ್ದಾರೆ. ಭೂಪಿಂದರ್​ ಸಿಂಗ್​ ಹೂಡಾ ಹಾಗೂ ಸೋನಿಯಾ ಅಳಿಯ ರಾಬರ್ಟ್​ ವಾದ್ರಾ ವಿರುದ್ಧ ಭೂ ಅಕ್ರಮ ಹಾಗೂ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿದ್ದವು. ಸಿಬಿಐನಿಂದ ಹೂಡಾ ವಿಚಾರಣೆಗೂ ಒಳಗಾಗಿದ್ದರು.

ಹೀಗಾಗಿ ತುಸು ಮಂಕಾಗಿದ್ದ ಅವರು ನಂತರ ಚೇತರಿಸಿಕೊಂಡಿದ್ದರು. ಇನ್ನು ಅವರು ಬಿಜೆಪಿ ಸೇರುತ್ತಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೂ ಹೂಡಾ ಮತ್ತೊಮ್ಮೆ ಕೈ ಚುಕ್ಕಾಣಿ ಹಿಡಿದು, ಬಿಜೆಪಿ ಪ್ರಾಬಲ್ಯಕ್ಕೆ ಈ ಚುನಾವಣೆಯಲ್ಲಿ ತಕ್ಕ ಉತ್ತರ ಕೊಟ್ಟಿದ್ದಾರೆ. ಕಳೆದ ಬಾರಿ 15 ಸ್ಥಾನಕ್ಕೆ ತೃಪ್ತಿ ಪಟ್ಟಿದ್ದ ಕಾಂಗ್ರೆಸ್​ 30 ಸ್ಥಾನಗಳನ್ನ ಗೆದ್ದು ಕಮಾಲ್​ ಮಾಡಿದೆ.

Intro:Body:

hooda


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.