ETV Bharat / bharat

ಚಮೋಲಿ ದುರಂತ: 11 ಕೋಟಿ ಪರಿಹಾರ ಘೋಷಿಸಿದ ಹರಿಯಾಣ ಸಿಎಂ

author img

By

Published : Feb 9, 2021, 1:17 PM IST

khatter
khatter

ಚಮೋಲಿಯಲ್ಲಿ ಉಂಟಾದ ಹಿಮಪ್ರವಾಹದ ಸಂತ್ರಸ್ತರಿಗೆ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್​ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 11 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಹರಿಯಾಣ ಸರ್ಕಾರದಿಂದ ಉತ್ತರಾಖಂಡಕ್ಕೆ ಸಾಧ್ಯವಿರುವ ಎಲ್ಲ ಸಹಾಯ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಚಂಡೀಗಢ (ಹರಿಯಾಣ): ಉತ್ತರಾಖಂಡದ ಚಮೋಲಿಯಲ್ಲಿ ಉಂಟಾದ ಹಿಮಪ್ರವಾಹದ ಸಂತ್ರಸ್ತರಿಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸಹಾಯ ಮಾಡಲು ಮುಂದಾಗಿದ್ದಾರೆ.

ಸಿಎಂ ಮನೋಹರ್ ಲಾಲ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 11 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದು, ಇದರೊಂದಿಗೆ ಹರಿಯಾಣ ಸರ್ಕಾರದಿಂದ ಉತ್ತರಾಖಂಡಕ್ಕೆ ಸಾಧ್ಯವಿರುವ ಎಲ್ಲ ಸಹಾಯ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

  • देवभूमि उत्तराखंड में ग्लेशियर टूटने से आई आपदा ने बहुत सी अनमोल जिंदगियों पर प्रभाव डाला है। इस प्राकृतिक आपदा से उत्पन्न हुई परिस्थितियों से निपटने के लिए मुख्यमंत्री राहत कोष से ₹11 करोड़ की राशि दी जाएगी। इसके अलावा हरियाणा द्वारा हर संभव मदद प्रदान की जाएगी।@tsrawatbjp

    — Manohar Lal (@mlkhattar) February 9, 2021 " class="align-text-top noRightClick twitterSection" data=" ">

"ದೇವಭೂಮಿ ಉತ್ತರಾಖಂಡದಲ್ಲಿ ಹಿಮನದಿ ಒಡೆದಿರುವುದರಿಂದ ಉಂಟಾದ ಅನಾಹುತವು ಅನೇಕರ ಜೀವನದ ಮೇಲೆ ಪರಿಣಾಮ ಬೀರಿದೆ. ಈ ನೈಸರ್ಗಿಕ ವಿಕೋಪದಿಂದ ಉಂಟಾಗುವ ಸಂದರ್ಭಗಳನ್ನು ಎದುರಿಸಲು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 11 ಕೋಟಿ ರೂ. ನೀಡಲಾಗುವುದು" ಎಂದು ಅವರು ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.