ETV Bharat / bharat

ಪ್ರಧಾನಿ ಭೇಟಿಯಾಗಲಿರುವ ಹರಿಯಾಣ ಡಿಸಿಎಂ: ಕೃಷಿ ಕಾಯ್ದೆಗಳ ಕುರಿತು ಚರ್ಚೆ?

author img

By

Published : Jan 13, 2021, 3:06 PM IST

today
ಕುರಿತು

ಹರಿಯಾಣ ಡಿಸಿಎಂ ದುಶ್ಯಂತ್ ಚೌಟಾಲಾ ಇಂದು ಸಂಜೆ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮೂರು ಹೊಸ ಕೃಷಿ ಕಾಯ್ದೆಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.

ನವದೆಹಲಿ: ಹರಿಯಾಣ ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲಾ ಇಂದು ಸಂಜೆ ಪ್ರಧಾನಿ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಕೇಂದ್ರ ಜಾರಿಗೊಳಿಸಿದ್ದ ಕೃಷಿ ಕಾನೂನುಗಳು ಹಾಗೂ ರೈತರ ಪ್ರತಿಭಟನೆ ಕುರಿತಂತೆ ಪ್ರಧಾನಿಯೊಂದಿಗೆ ಚರ್ಚಿಸುವ ಸಾಧ್ಯತೆಯಿದೆ.

ಜವಳಿ ಹಬ್‌ಗಳು, ಏರ್​ಪೋರ್ಟ್​, ಪೂರ್ವ-ಪಶ್ಚಿಮ ಕಾರಿಡಾರ್‌ಗಳು, ರೈಲ್ವೆ ಮಾರ್ಗಗಳ ಕುರಿತು ಚರ್ಚೆ ನಡೆಸುವ ನಿರೀಕ್ಷೆಯಿದೆ.

ನಿನ್ನೆಯಷ್ಟೇ ಹರಿಯಾಣ ಸಿಎಂ ಮನೋಹರ್​ ಲಾಲ್​ ಖಟ್ಟರ್ ಹಾಗೂ ಚೌಟಾಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ರೈತರ ಪ್ರತಿಭಟನೆ ಕುರಿತು ಚರ್ಚಿಸಿದ್ದರು.

ಕೇಂದ್ರ ಸರ್ಕಾರ ಎಂಎಸ್​ಪಿ (ಕನಿಷ್ಠ ಬೆಂಬಲ ಬೆಲೆ) ಖಾತ್ರಿಪಡಿಸಲು ಸಾಧ್ಯವಾಗದಿದ್ದರೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಚೌಟಾಲಾ ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.